ಮುಂಬೈನಲ್ಲಿ ಕೊರೋನಾಗೆ ಮೂರನೇ ಬಲಿ; ದೇಶದಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಇನ್ನು, ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದೆ. 23 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ಮಹಿಳೆಯು ಇತ್ತೀಚೆಗೆ ಇಂಗ್ಲೆಂಡ್​ನಿಂದ ವಾಪಸ್​ ಬಂದಿದ್ದಳು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನವದೆಹಲಿ(ಮಾ.24): ದೇಶದಲ್ಲಿ ಕೊರೋನಾ ವೈರಸ್​​​ಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಮುಂಬೈನಲ್ಲಿ 65 ವರ್ಷದ ವ್ಯಕ್ತಿ ಕೊರೋನಾ ವೈರಸ್​​ನಿಂದಾಗಿ ಮೃತಪಟ್ಟಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸುಮಾರು 500 ಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

  ಮುಂಬೈನಲ್ಲಿ ಕೊರೋನಾಗೆ ಬಲಿಯಾದ ವ್ಯಕ್ತಿ ಅರಬ್​ ಸಂಯಕ್ತ ಸಂಸ್ಥಾನದಿಂದ ಅಹಮದಾಬಾದ್​​ಗೆ ಮರಳಿದ್ದ ಎಂದು ತಿಳಿದು ಬಂದಿದೆ. ಬಳಿಕ ಆತನಿಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು ಎಂದು ಬಿಎಂಸಿ ತಿಳಿಸಿದೆ. ಜೊತೆಗೆ ಬಿಪಿ, ಮಧುಮೇಹದಿಂದಲೂ ಆ ವ್ಯಕ್ತಿ ಬಳಲುತ್ತಿದ್ದ ಎನ್ನಲಾಗಿದೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್​​ನಿಂದ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ.

    ಹೆಚ್ಚಾದ ಕೊರೋನಾ ಭೀತಿ: ಇಂದು ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

  ಇನ್ನು, ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದೆ. 23 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ಮಹಿಳೆಯು ಇತ್ತೀಚೆಗೆ ಇಂಗ್ಲೆಂಡ್​ನಿಂದ ವಾಪಸ್​ ಬಂದಿದ್ದಳು. ದೆಹಲಿ ಮತ್ತು ಗುಹಾವಟಿ ವಿಮಾನ ನಿಲ್ದಾಣಗಳ ಮೂಲಕ ಇಂಫಾಲ್​ಗೆ ಮರಳಿದ್ದಳು ಎಂದು ತಿಳಿದು ಬಂದಿದೆ.

  ಇನ್ನು, ಭಾರತದಲ್ಲಿ ಕೊರೋನಾ ಪ್ರಭಾವ ಹೆಚ್ಚಾಗುತ್ತಲೇ ಇದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈವರೆಗೆ ಸುಮಾರು 500 ಕ್ಕೂ ಹೆಚ್ಚು ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  ಬೀದಿಗೆ ಬಂದವರ ಮೇಲೆಲ್ಲಾ ಲಾಠಿಚಾರ್ಚ್ ಮಾಡಿಸುವ ಮಾನಗೆಟ್ಟ ಸರ್ಕಾರವಿದು; ಸಿದ್ದರಾಮಯ್ಯ ವಾಗ್ದಾಳಿ

  ಈ ಕೊರೋನಾ ನಿಗ್ರಹಕ್ಕಾಗಿ ಇಡೀ ದೇಶಾದ್ಯಂತ ಲಾಕ್​ಡೌನ್​​ ಘೋಷಣೆ ಮಾಡಲಾಗಿದೆ. 30 ರಾಜ್ಯಗಳ 548 ಜಿಲ್ಲೆಗಳನ್ನು ಮಾರ್ಚ್​​ 31ರವರೆಗೆ ಲಾಕ್​ಡೌನ್​ ಮಾಡಲಾಗಿದೆ. ಅಗತ್ಯ ಮತ್ತು ತುರ್ತು ಸೇವೆ ಹೊರತುಪಡಿಸಿ ಯಾವುದೇ ಸೇವೆ ಲಭ್ಯವಿರುವುದಿಲ್ಲ. ಇಂದು ಮಧ್ಯರಾತ್ರಿಯಿಂದ ಎಲ್ಲಾ ದೇಶೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
  First published: