• ಹೋಂ
  • »
  • ನ್ಯೂಸ್
  • »
  • Corona
  • »
  • ಮುಂಬೈ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಕೇಂದ್ರ ಶಿಫಾರಸು

ಮುಂಬೈ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಕೇಂದ್ರ ಶಿಫಾರಸು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುಂಬೈ ನಗರಾದ್ಯಂತ ಹೆಚ್ಚಿನ ಹಾಸಿಗೆಗಳನ್ನು ವ್ಯವಸ್ಥೆ ಮಾಡಲು ಮತ್ತು ಪರೀಕ್ಷೆಯನ್ನು ಹೆಚ್ಚಿಸಲು ಮುಂಬೈ ಮಹಾನಗರ ಪಾಲಿಕೆಗೆ ಸೂಚಿಸಲಾಗಿದೆ

  • Share this:

ಮುಂಬೈ (ಏ.22): ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ  ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕ್ವಾರಂಟೈನ್​​​ಗೆ  1,200 ಹಾಸಿಗೆಗಳಿಂದ 2,000 ಕ್ಕೆ ಹೆಚ್ಚಿಸಲು ಕೇಂದ್ರ ಸಮಿತಿ ಶಿಫಾರಸು ಮಾಡಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಬುಧವಾರ ಹೇಳಿದ್ದಾರೆ


ಕೊರೋನಾ ವೈರಸ್ ಏಕಾಏಕಿ ಹೆಚ್ಚಾಗುತ್ತಿರು ಹಿನ್ನೆಲೆಯಲ್ಲಿ (ಐಎಂಸಿಟಿ) ಅಂತರ ಸಚಿವಾಲಯದ ತಂಡ ಎರಡು ದಿನಗಳ ಭೇಟಿಗಾಗಿ ಮಂಗಳವಾರ ಮುಂಬೈಗೆ ಆಗಮಿಸಿತ್ತು.


ಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಕನಿಷ್ಠ ಆಮ್ಲಜನಕ ಪೂರೈಕೆಯನ್ನು ಒದಗಿಸುವಂತೆ ಕೇಂದ್ರ ಸಮಿತಿ ಸೂಚನೆ ನೀಡಿದೆ. ಸಮಿತಿಯ ನಿರ್ದೇಶನಗಳನ್ನು ಅನುಸರಿಸಿ, ಮುಂಬೈ ನಗರಾದ್ಯಂತ ಹೆಚ್ಚಿನ ಹಾಸಿಗೆಗಳನ್ನು ವ್ಯವಸ್ಥೆ ಮಾಡಲು ಮತ್ತು ಪರೀಕ್ಷೆಯನ್ನು ಹೆಚ್ಚಿಸಲು ಮುಂಬೈ ಮಹಾನಗರ ಪಾಲಿಕೆಗೆ ಸೂಚಿಸಲಾಗಿದೆ. ಅಗತ್ಯವಿದ್ದರೆ ಮೈದಾನದಲ್ಲಿ ಟೆಂಟ್‌ಗಳನ್ನು ಸಹ ತೆರೆಯಬಹುದು ಎಂದರು.


ಇದನ್ನೂ ಓದಿ : ಕೊರೋನಾ ಎಫೆಕ್ಟ್; ಓಯೋ ಕಂಪನಿಯ ಭಾರತದ ಎಲ್ಲ ಸಿಬ್ಬಂದಿ ವೇತನ ಕಡಿತ


ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಐಎಂಸಿಟಿ ಬುಧವಾರ ಧಾರವಿಯಲ್ಲಿರುವ ಸಾರಿಗೆ ಶಿಬಿರಗಳಿಗೆ ಭೇಟಿ ನೀಡಿತು. ಕಳೆದ ಎರಡು ದಿನಗಳಲ್ಲಿ ಧಾರವಿ ಯಲ್ಲಿ ಕೋವಿಡ್​ 19 ಪ್ರಕರಣಗಳು ಹೆಚ್ಚಾಗಿಲ್ಲ ಎಂದು ಸಚಿವರು ತಿಳಿಸಿದರು.


ಈ ಭೇಟಿಯ ವೇಳೆ ಮಹಾರಾಷ್ಟ್ರ ಆರೋಗ್ಯ ಸಚಿವ ಟೊಪೆ ಮತ್ತು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಬಿಎಂಸಿಯ ಅಧಿಕಾರಿಗಳು ಇದ್ದರು.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು