HOME » NEWS » Coronavirus-latest-news » CORONA VACCINE MOHALIS ADOPT VILLAGE FOR VACCINATION GETS POPULAR STG LG

Corona Vaccine: ಲಸಿಕೆಗಾಗಿ ಗ್ರಾಮ ದತ್ತು ಪಡೆಯುವ ‘ಮೊಹಾಲಿ ಮಾದರಿ’ಗೆ ಅದ್ಭುತ ಯಶಸ್ಸು

“ದಾನಿಗಳು ಕೇವಲ 430 ರೂ. ನೀಡಿದರೆ ಒಬ್ಬ ವ್ಯಕ್ತಿಗೆ ಲಸಿಕೆ ನೀಡಬಹುದು. ಖಾಸಗಿಯಾಗಿ ಕೋವ್ಯಾಕ್ಸಿನ್ಗೆ 1 ಸಾವಿರ ರೂ.ಗೆ ಮಾರಾಟವಾದರೆ ಸರಕಾರಿ ವ್ಯವಸ್ಥೆಯಲ್ಲಿ ಅದಕ್ಕೆ 430 ರೂ. ಮಾತ್ರ ತಗಲುತ್ತದೆ. ಹೀಗಾಗಿ ದಾನಿಗಳು ಉತ್ಸಾಹದಿಂದ ಮುಂದೆ ಬರುತ್ತಿದ್ದಾರೆ” ಎಂದು ಡಿಸಿ ಹೇಳುತ್ತಾರೆ.

news18-kannada
Updated:June 22, 2021, 3:29 PM IST
Corona Vaccine: ಲಸಿಕೆಗಾಗಿ ಗ್ರಾಮ ದತ್ತು ಪಡೆಯುವ ‘ಮೊಹಾಲಿ ಮಾದರಿ’ಗೆ ಅದ್ಭುತ ಯಶಸ್ಸು
ಲಸಿಕೆ ವಿತರಣೆ
  • Share this:

ದೇಶದ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಸಾಂಕ್ರಾಮಿಕವು ಹೆಚ್ಚಿನ ಪ್ರಭಾವ ಬೀರುತ್ತಿರುವ ಈ ಸಂದರ್ಭದಲ್ಲಿ ‘ಮೊಹಾಲಿ ಮಾದರಿ’ಯ ಲಸಿಕೆ ನೀಡಿಕೆ ಕಾರ್ಯಕ್ರಮ ಸದ್ದಿಲ್ಲದೆ ಯಶಸ್ಸು ಕಾಣುತ್ತಿದ್ದು, ದೇಶದ ಗಮನ ಸೆಳೆಯಲಾರಂಭಿಸಿದೆ.ಜಿಲ್ಲೆಯ ಗ್ರಾಮೀಣ ಭಾಗದ ಜನರನ್ನು ಪ್ರಾಯೋಜಕರ ನೆರವಿನಿಂದ ಲಸಿಕೀಕರಣಗೊಳಿಸುವ ವಿಶಿಷ್ಟ ವ್ಯವಸ್ಥೆಯಿದು. ಇದಕ್ಕೆ ಮೊಹಾಲಿ ಮಾದರಿ ಎಂದರೂ ತಪ್ಪಿಲ್ಲ. ಪಂಜಾಬಿನ ಮೊಹಾಲಿ ಜಿಲ್ಲೆಯ ಜಿಲ್ಲಾಧಿಕಾರಿ ಗಿರೀಶ್ ದಯಾಳನ್ ಅವರ ಕನಸಿನ ಕೂಸಿದು.


“ಆರಂಭದಿಂದಲೂ ನಾವು ಮೊಹಾಲಿಯಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಒತ್ತು ನೀಡುತ್ತಿದ್ದೇವೆ. ಲಸಿಕೆಗಳನ್ನು ಪಡೆಯಲು ಈ ಜಿಲ್ಲೆಯ ಮಂದಿ ಯಾವತ್ತೂ ಹಿಂದೇಟು ಹಾಕಿಲ್ಲ ಎನ್ನುವುದು ನಮಗೆ ಖುಷಿ ಕೊಟ್ಟಿದೆ. 18 ರಿಂದ 45 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನ ಆರಂಭಿಸಿದಾಗ ತಮ್ಮ ಲಸಿಕಾ ಕೇಂದ್ರಗಳಿಗಾಗಿ ಪಂಜಾಬ್ ಸರಕಾರ ಲಸಿಕೆಗಳನ್ನು ಖರೀದಿಸಲು ಆರಂಭಿಸಿತು. ಕಂಪನಿಗಳು ಹಾಗೂ ಉದಾರ ದಾನಿಗಳಿಗಾಗಿನ ಸಿ.ಎಸ್.ಆರ್. ಉಪಕ್ರಮದ ಮೂಲಕ ಲಸಿಕಾ ನಿಧಿಯನ್ನೂ ಮಾಡಲಾಯಿತು” ಎನ್ನುತ್ತಾರೆ ಜಿಲ್ಲಾಧಿಕಾರಿ ಗಿರೀಶ್ ದಯಾಳನ್.“ಎಲ್ಲಕ್ಕಿಂತ ಹೆಚ್ಚಾಗಿ ಈ ನಡುವೆ ನಾವು ಇನ್ನೊಂದು ಉಪಕ್ರಮವನ್ನು ಪ್ರಾರಂಭಿಸಿದೆವು. ಅದು ನಮ್ಮ ಕಚೇರಿಯಿಂದಲೇ ಶುರುವಾಯಿತು. 4-5 ಅಧಿಕಾರಿಗಳು ಸೇರಿ ಒಂದು ಹಳ್ಳಿಗೆ ಬೇಕಾಗುವ ಲಸಿಕೆಗಳನ್ನು ಪ್ರಾಯೋಜಿಸುವುದು ಈ ಉಪಕ್ರಮ. ಇದನ್ನು ಕಂಡು ಇನ್ನಷ್ಟು ಮಂದಿ ಸಿ.ಎಸ್.ಆರ್. ಬದಲಿಗೆ ನೇರವಾಗಿ ಪ್ರಾಯೋಜಕತ್ವ ವಹಿಸುವ ಈ ಯೋಜನೆಯತ್ತ ಅಕರ್ಷಿತರಾದರು. ಪ್ರಾಯಶಃ ಅವರಿಗೆ ಹೀಗೆ ಸಹಾಯ ಮಾಡುವುದರಿಂದ ಮನಸ್ಸಿಗೆ ಹೆಚ್ಚಿನ ತೃಪ್ತಿ ಸಿಗುತ್ತಿತ್ತೇನೋ. ತಾವು ಪ್ರಾಯೋಜಿಸಿದ ಈ ಕಾರ್ಯಕ್ರಮವನ್ನು ಕಣ್ಣಾರೆ ಕಾಣಲು ಕೆಲವು ದಾನಿಗಳು ನೇರವಾಗಿ ಹಳ್ಳಿಗಳಿಗೆ ಹೋಗುವುದನ್ನು ನಾವು ಕಂಡೆವು” ಎಂದು ಜಿಲ್ಲಾಧಿಕಾರಿ ವಿವರಿಸುತ್ತಾರೆ.


ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

ಇದೀಗ “ಲಸಿಕೀಕರಣಕ್ಕಾಗಿ ಹಳ್ಳಿಯ ದತ್ತು” ಕಾರ್ಯಕ್ರಮವು ತುಂಬ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಾರ್ವಜನಿಕರು ಹಳ್ಳಿಗಳನ್ನು ದತ್ತು ಪಡೆಯಲು ಉತ್ಸಾಹದಿಂದ ಮುಂದೆ ಬರುತ್ತಿದ್ದಾರೆ. ಹೆಚ್ಚಿನ ಪ್ರಾಯೋಜಕರು ಬರುತ್ತಿರುವುದರಿಂದ ಈಗಾಗಲೇ 13 ಗ್ರಾಮಗಳಲ್ಲಿ ಬಹು ದಾನಿಗಳ ನೆರವಿನಿಂದ ಸಂಪೂರ್ಣ ಲಸಿಕೀಕರಣ ಮಾಡಲಾಗಿದೆ.


“ದಾನಿಗಳು ಕೇವಲ 430 ರೂ. ನೀಡಿದರೆ ಒಬ್ಬ ವ್ಯಕ್ತಿಗೆ ಲಸಿಕೆ ನೀಡಬಹುದು. ಖಾಸಗಿಯಾಗಿ ಕೋವ್ಯಾಕ್ಸಿನ್ಗೆ 1 ಸಾವಿರ ರೂ.ಗೆ ಮಾರಾಟವಾದರೆ ಸರಕಾರಿ ವ್ಯವಸ್ಥೆಯಲ್ಲಿ ಅದಕ್ಕೆ 430 ರೂ. ಮಾತ್ರ ತಗಲುತ್ತದೆ. ಹೀಗಾಗಿ ದಾನಿಗಳು ಉತ್ಸಾಹದಿಂದ ಮುಂದೆ ಬರುತ್ತಿದ್ದಾರೆ” ಎಂದು ಡಿಸಿ ಹೇಳುತ್ತಾರೆ.


ಈ ನಡುವೆ ಜಿಲ್ಲಾಧಿಕಾರಿಯವರು ಹೊಸದೊಂದು ಯೋಜನೆ ಹಾಕಿದ್ದರು. ಗ್ರಾಮೀಣ ಭಾಗದಲ್ಲಿ ಲಸಿಕೆಗಳ ಬಗ್ಗೆ ನಿರಾಸಕ್ತಿ ಕಡಿಮೆ ಮಾಡಲು ಕೋವಿಡ್ ಸಾವಿನ ಸಂಖ್ಯೆಗಳ ಬಗ್ಗೆ ಅಧ್ಯಯನವೊಂದನ್ನು ಮಾಡಲು ಅಧಿಕಾರಿಗಳಿಗೆ ಹೇಳಿದ್ದರು.

ಇದನ್ನೂ ಓದಿ:Delta Plus Variant in India: ಮೂರು ರಾಜ್ಯಗಳಲ್ಲಿ ಭಯಾನಕ ಡೆಲ್ಟಾ ಪ್ಲಸ್​ ರೂಪಾಂತರಿ ವೈರಸ್ ಪತ್ತೆ

“ಈ ಭಾಗದಲ್ಲಿ ನಡೆದಿರುವ 900 ಸಾವುನೋವುಗಳಲ್ಲಿ ಎರಡೂ ಲಸಿಕೆಗಳನ್ನು ತೆಗೆದುಕೊಂಡ ಮೇಲೂ ಮೃತಪಟ್ಟವರು ಕೇವಲ ಒಬ್ಬ ವ್ಯಕ್ತಿ ಮಾತ್ರ. ಅದೂ ಅವರ ಸಾವು ಅನಾರೋಗ್ಯದಿಂದ ಬಂದ ಬೇರೆ ಸಮಸ್ಯೆಗಳಿಂದ ಆಗಿದೆ” ಎನ್ನುತ್ತಾರೆ ಡಿಸಿ.


ಇದೀಗ ಜಿಲ್ಲಾಧಿಕಾರಿಯ ಮೊಹಾಲಿ ಮಾದರಿ ನಿಧಾನವಾಗಿ ಯಶಸ್ಸೂ ಕಾಣುತ್ತಿದೆ. ಉಳಿದ ಜಿಲ್ಲೆಗಳಿಗೂ ಸ್ಫೂರ್ತಿಯಾಗುತ್ತಿದೆ.Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by: Latha CG
First published: June 22, 2021, 10:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories