ಕೊರೋನಾ ಟಫ್ ರೂಲ್ಸ್ ನಡುವೆಯು ಬೆಂಗಳೂರು ಹೊರವಲಯದ ಚಂದಾಪುರ ಸಂತೆಯಲ್ಲಿ ಜನಜಂಗುಳಿ!

ಸಂತೆಯಲ್ಲಿ ಜಾತ್ರೆಯಂತೆ ಜನ ಸೇರಿದ್ದಾರೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಖರೀದಿಯಲ್ಲಿ ಮಗ್ನರಾಗಿದ್ದಾರೆ. ಇಷ್ಟೆಲ್ಲಾ ಕೊರೋನಾ ರೂಲ್ಸ್ ಉಲ್ಲಂಘನೆ ಆಗುತ್ತಿದ್ದರೂ ಪುರಸಭೆ ಅಧಿಕಾರಿಗಳು ಮಾತ್ರ ನಾಪತ್ತೆಯಾಗಿರುವುದು ಮಾತ್ರ ದುರಂತ.

ಚಂದಾಪುರ ಸಂತೆಯಲ್ಲಿ ಕೊರೋನಾ ನಿಯಮಾವಳಿ ಉಲ್ಲಂಘನೆಯಾಗಿರುವುದು.

ಚಂದಾಪುರ ಸಂತೆಯಲ್ಲಿ ಕೊರೋನಾ ನಿಯಮಾವಳಿ ಉಲ್ಲಂಘನೆಯಾಗಿರುವುದು.

  • Share this:
ಆನೇಕಲ್: ಸರ್ಕಾರ ಪದೇ ಪದೇ ಸಾರ್ವಜನಿಕರಲ್ಲಿ ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಮನವಿ ಮಾಡುತ್ತಿದೆ . ಆದರೆ ಜನ ಯಾಕೋ ಸರ್ಕಾರದ ಸಲಹೆ ಸೂಚನೆಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹೌದು ಕೊರೋನಾ ರಾಜ್ಯಾದ್ಯಂತ ಅದರಲ್ಲೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಣಕೇಕೆ ಹಾಕುತ್ತಿದ್ದರು . ಜನ ಮಾತ್ರ ಸಂತೆಯಲ್ಲಿ ಗುಂಪು ಗುಂಪಾಗಿ ಸೇರಿ ಖರೀದಿಯಲ್ಲಿ ಮಗ್ನರಾಗಿದ್ದಾರೆ . ಅಷ್ಟಕ್ಕೂ ಕೊರೋನಾ ಆರ್ಭಟದ ನಡುವೆಯು ಸಂತೆ ಜನಜಂಗುಳಿ ಸೇರಿದ್ದಾದರೂ ಎಲ್ಲಿ ಅಂತೀರಾ? ಈ ಸ್ಟೋರಿ ಓದಿ.

ಹೌದು, ಹೀಗೆ ಬೆಳ್ಳಂಬೆಳಗ್ಗೆ ಸಂತೆಯಲ್ಲಿ ಜನಜಾತ್ರೆ ಸೇರಿರುವ ದೃಶ್ಯ ಕಂಡು ಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರ ಸಂತೆಯಲ್ಲಿ . ಪ್ರತಿ ಶನಿವಾರ ಚಂದಾಪುರದಲ್ಲಿ ಸಂತೆ ನಡೆಯುತ್ತದೆ . ಇಲ್ಲಿ ಕುರಿ ಮೇಕೆಗಳನ್ನು ಕೊಳ್ಳಲು ಮತ್ತು ಮಾರಾಟ ಮಾಡಲು ತಮಿಳುನಾಡು ಸೇರಿದಂತೆ ರಾಜ್ಯದ ಬೇರೆ ಬೇ ರೆ ಜಿಲ್ಲೆಗಳಿಂದ ನೂರಾರು ಮಂದಿ ಆಗಮಿಸುತ್ತಾರೆ. ಇಂದು ಸಹ ಯುಗಾದಿ ಹಬ್ಬದ ಬಳಿಕ ಮೊದಲ ಸಂತೆಯಾದ್ದರಿಂದ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಆದರೆ ಬಹುತೇಕ ಮಂದಿ ಈ ಕೊರೋನಾ ರೂಲ್ಸ್ ಉಲ್ಲಂಘನೆ ಮಾಡುತ್ತಿದ್ದಾರೆ. ಸಾಮಾಜಿಕ ಅಂತರ ನಗಣ್ಯವಾಗಿದೆ. ಬಹುತೇಕ ಮಂದಿ ಮಾಸ್ಕ್ ಸಹ ಧರಿಸಿಲ್ಲ. ಕೆಲವರು ಮಾಸ್ಕ್ ಧರಿಸಿದ್ದರು ಸಮರ್ಪಕವಾಗಿ ಬಾಯಿ ಮೂಗು ಮುಚ್ಚದೇ ಕಾಟಾಚಾರಕ್ಕೆ ಮಾಸ್ಕ್ ಹಾಕಿದ್ದಾರೆ.

ಇದನ್ನು ಓದಿ: ನೆರೆ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹೈಟೆಕ್ ಡ್ರೋಣ್ ಬಳಕೆಗೆ ಮುಂದಾದ ಉತ್ತರ ಕನ್ನಡ ಜಿಲ್ಲಾಡಳಿತ

ಇನ್ನೂ ಹಳ್ಳಿಗಾಡಿನ ಜನ ತಿಳಿವಳಿಕೆ ಕಡಿಮೆ ಇದೆ. ಹಾಗಾಗಿ ಎಷ್ಟೇ ತಿಳಿಸಿ ಹೇಳಿದರು ಕೆಲವರು ಕೊರೋನಾ ರೂಲ್ಸ್ ಪಾಲೋ ಮಾಡುತ್ತಿಲ್ಲ. ಉಳಿದಂತೆ ಎಲ್ಲರೂ ಮಾಸ್ಕ್ ಧರಿಸಿದ್ದಾರೆ. ಸದ್ಯ ಎಲ್ಲಾ ದಿನ ಉಪಯೋಗಿ ವಸ್ತುಗಳು ಗಗನಕ್ಕೆ ಏರಿವೆ. ಇಂತಹ ಸಂದರ್ಭದಲ್ಲಿ ಕೊರೋನಾ ನೆಪವೊಡ್ಡಿ ಬಡವರ ಹೊಟ್ಟೆ ಮೇಲೆ ಹೊಡೆಯಬಾರದು. ಜನರಿಗೆ ಸರ್ಕಾರ ಅರಿವು ಮೂಡಿಸಬೇಕು. ಒಂದು ವೇಳೆ ಸರ್ಕಾರ ಸಣ್ಣ ತಪ್ಪುಗಳನ್ನು ನೆಪವಾಗಿಟ್ಟುಕೊಂಡು ಲಾಕ್ ಡೌನ್ ಮಾಡಿದರೆ ಜನ ಮತ್ತೆ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ವ್ಯಾಪಾರಿ ರಾಮು ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಂತೆಯಲ್ಲಿ ಜಾತ್ರೆಯಂತೆ ಜನ ಸೇರಿದ್ದಾರೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಖರೀದಿಯಲ್ಲಿ ಮಗ್ನರಾಗಿದ್ದಾರೆ. ಇಷ್ಟೆಲ್ಲಾ ಕೊರೋನಾ ರೂಲ್ಸ್ ಉಲ್ಲಂಘನೆ ಆಗುತ್ತಿದ್ದರೂ ಪುರಸಭೆ ಅಧಿಕಾರಿಗಳು ಮಾತ್ರ ನಾಪತ್ತೆಯಾಗಿರುವುದು ಮಾತ್ರ ದುರಂತ.

ವರದಿ :  ಆದೂರು ಚಂದ್ರು 
Published by:HR Ramesh
First published: