ವಿಕಾಸಸೌಧ, ಶಕ್ತಿಸೌಧಕ್ಕೂ ಕಾಲಿಟ್ಟ ಕೊರೋನಾ; ಕಚೇರಿಗಳು ಸೀಲ್‌ಡೌನ್, ಆತಂಕದಲ್ಲಿ ವಿಧಾನಸೌಧ ಸಿಬ್ಬಂದಿಗಳು

ವಿಕಾಸಸೌಧದ ಆಹಾರ ಇಲಾಖೆ ಮಹಿಳಾ ಸಿಬ್ಬಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಕುರಿತು ವರದಿ ಇಂದು ಹೊರ ಬಂದಿದ್ದು ಪಾಸಿಟಿವ್ ಆಗಿದೆ. ಪರಿಣಾಮ ಇದೀಗ ಇಡೀ ವಿಕಾಸಸೌಧ ಹಾಗೂ ಶಕ್ತಿಸೌಧದ ಸಿಬ್ಬಂದಿಗಳು ಕೊರೋನಾ ಆತಂಕಕ್ಕೆ ಒಳಗಾಗಿದ್ದಾರೆ. ಪರಿಣಾಮ ಆಹಾರ ಇಲಾಖೆ ಕಚೇರಿ ಸೇರಿದಂತೆ ಅನೇಕ ಪ್ರಮುಖ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ವಿಕಾಸಸೌಧ.

ವಿಕಾಸಸೌಧ.

  • Share this:
ಬೆಂಗಳೂರು (ಜೂನ್‌ 16); ವಿಕಾಸಸೌಧ ಮತ್ತು ಶಕ್ತಿಸೌಧ ಸಿಬ್ಬಂದಿಗಳಿಗೂ ಕೊರೋನಾ ಸೋಂಕು ಆವರಿಸಿದ್ದು ಇದೀಗ ಎರಡೂ ಕಟ್ಟಡವನ್ನು ಸೀಲ್‌ಡೌನ್ ಮಾಡಲಾಗಿದೆ. ಪರಿಣಾಮ ವಿಧಾನಸೌಧವೂ ಇದೀಗ ಕೊರೋನಾ ಭೀತಿ ಎದುರಿಸುವಂತಾಗಿದೆ.

ವಿಕಾಸಸೌಧದ ಆಹಾರ ಇಲಾಖೆ ಮಹಿಳಾ ಸಿಬ್ಬಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಕುರಿತು ವರದಿ ಇಂದು ಹೊರ ಬಂದಿದ್ದು ಪಾಸಿಟಿವ್ ಆಗಿದೆ. ಪರಿಣಾಮ ಇದೀಗ ಇಡೀ ವಿಕಾಸಸೌಧ ಹಾಗೂ ಶಕ್ತಿಸೌಧದ ಸಿಬ್ಬಂದಿಗಳು ಕೊರೋನಾ ಆತಂಕಕ್ಕೆ ಒಳಗಾಗಿದ್ದಾರೆ. ಪರಿಣಾಮ ಆಹಾರ ಇಲಾಖೆ ಕಚೇರಿ ಸೇರಿದಂತೆ ಅನೇಕ ಪ್ರಮುಖ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಇದನ್ನೂ ಓದಿ : ಮಾನಸಿಕ ಆರೋಗ್ಯಕ್ಕೆ ವಿಮಾ ರಕ್ಷಣೆ ಏಕಿಲ್ಲ?; ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್

ಪರಿಣಾಮ ವಿಧಾನಸೌಧದ ನೌಕರರು ಸಹ ಆತಂಕ್ಕೆ ಒಳಗಾಗಿದ್ದು, ಎಲ್ಲಾ ಸಿಬ್ಬಂದಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿರುವ ಸಚಿವಾಲಯದ ನೌಕರ ಸಂಘದ ಅಧ್ಯಕ್ಷ ಗುರುಸ್ವಾಮಿ ಮತ್ತು ನಿಯೋಗ ಇಂದು ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
First published: