ಹೋಂ ಕ್ವಾರಂಟೈನ್​ನಲ್ಲಿರುವ ಕೊರೋನಾ ಶಂಕಿತರು ಹೋಟೆಲ್​ಗಳಿಗೆ ಶಿಫ್ಟ್​​

ಈ ಹೋಂ ಕ್ವಾರಂಟೈನ್​ನಲ್ಲಿರುವವರನ್ನು ಸ್ಥಳಾಂತರಿಸಲು ಬೆಂಗಳೂರಿನ 16 ಹೋಟೆಲ್​ಗಳನ್ನು ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ನಗರದ ಗಾಂಧಿನಗರ, ಜಯನಗರ, ಕೋರಮಂಗಲ, ಬಿಟಿಎಂ‌ ಲೇಔಟ್, ಸುಧಾಮನಗರ ಸೇರಿ ನಗರದ ವಿವಿಧದೆಡೆ ಇರುವ ಖಾಸಗಿ ಹೋಟೆಲ್​​ನಲ್ಲಿ ಕೊರೋನಾ ಶಂಕಿತರಿಗೆ ತಂಗುವ ವ್ಯವಸ್ಥೆ ಮಾಡಲಾಗಿದೆ.

news18-kannada
Updated:March 30, 2020, 10:45 AM IST
ಹೋಂ ಕ್ವಾರಂಟೈನ್​ನಲ್ಲಿರುವ ಕೊರೋನಾ ಶಂಕಿತರು ಹೋಟೆಲ್​ಗಳಿಗೆ ಶಿಫ್ಟ್​​
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮಾ.30): ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾಗಿರುವ ಹಿನ್ನೆಲೆ, ಸರ್ಕಾರವು ಹಲವಾರು ಸೂಕ್ತ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ಈಗ ಆರೋಗ್ಯ ಇಲಾಖೆಯು ಇನ್ನೊಂದು ಕ್ರಮ ಕೈಗೊಂಡಿದೆ.  ಸದ್ಯ ಮನೆಯಲ್ಲಿರುವ ಕೊರೋನಾ ಶಂಕಿತರನ್ನು ಬೇರೆಡೆಗೆ ಶಿಫ್ಟ್​ ಮಾಡಲು ಆರೋಗ್ಯ ಇಲಾಖೆ ಸಜ್ಜಾಗಿದೆ.

ಅಂದರೆ ಇನ್ನೂ 14 ದಿನಗಳ ಕಾಲ ಹೋಂ ಕ್ವಾರಂಟೈನ್​ ಮುಗಿಸದ ಶಂಕಿತರನ್ನು ಹೋಟೆಲ್​​ ಮತ್ತು ಹಾಸ್ಟೆಲ್​​​ಗಳಿಗೆ ಸ್ಥಳಾಂತರಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. 60 ವರ್ಷ ದಾಟಿರದ, ಕೊರೋನಾ ಸೋಂಕು ಕಾಣದ, ಸಕ್ಕರೆ ಕಾಯಿಲೆ(ಮಧುಮೇಹ), ಹೈಪರ್ ಟೆನ್ಷನ್​, ಬಿಪಿ-ರಕ್ತದೊತ್ತಡ, ಅಂಗಾಂಗ ಕಸಿ ಮಾಡಿಸಿಕೊಳ್ಳದ ಶಂಕಿತರನ್ನು ಹೋಟೆಲ್​​ ಮತ್ತು ಹಾಸ್ಟೆಲ್​​ಗಳಿಗೆ ಶಿಫ್ಟ್​ ಮಾಡಲು ನಿರ್ಧಾರ ಮಾಡಲಾಗಿದೆ.

ನಂಜನಗೂಡಿನ ಸೋಂಕಿತರ ಜೊತೆ ಹಾಸನದ 10 ಮಂದಿ ಸಂಪರ್ಕ; ಅವರಲ್ಲಿ ಮೂವರು ನಾಪತ್ತೆ

ಈ ಹೋಂ ಕ್ವಾರಂಟೈನ್​ನಲ್ಲಿರುವವರನ್ನು ಸ್ಥಳಾಂತರಿಸಲು ಬೆಂಗಳೂರಿನ 16 ಹೋಟೆಲ್​ಗಳನ್ನು ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ನಗರದ ಗಾಂಧಿನಗರ, ಜಯನಗರ, ಕೋರಮಂಗಲ, ಬಿಟಿಎಂ‌ ಲೇಔಟ್, ಸುಧಾಮನಗರ ಸೇರಿ ನಗರದ ವಿವಿಧದೆಡೆ ಇರುವ ಖಾಸಗಿ ಹೋಟೆಲ್​​ನಲ್ಲಿ ಕೊರೋನಾ ಶಂಕಿತರಿಗೆ ತಂಗುವ ವ್ಯವಸ್ಥೆ ಮಾಡಲಾಗಿದೆ.

ಇನ್ನು, ಹೋಟೆಲ್​​ನಲ್ಲಿ 6 ಅಡಿ ಅಂತರದಲ್ಲಿ ಬೆಡ್​ ವ್ಯವಸ್ಥೆ, 24/7 ವೈದ್ಯರ ಲಭ್ಯತೆ, ಪ್ಯಾರಾ ಮೆಡಿಕಲ್(ಅರೆ ವೈದ್ಯಕೀಯ) ಸಿಬ್ಬಂದಿ, ಪಿಪಿಇ ಕಿಟ್​ ಮತ್ತು ಔಷಧಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಹೋಟೆಲ್​ಗಳ ಎಸಿ ರೂಮ್​ಗಳಲ್ಲಿ ಎಸಿ ಬಳಸದಿರಲು ಸೂಚನೆ ನೀಡಲಾಗಿದೆ.

ಎಲ್ಲಾ ಪ್ರಾಥಮಿಕ ಕೊರೋನಾ ಶಂಕಿತರನ್ನು ತಕ್ಷಣದಿಂದಲೇ ಹೋಟೆಲ್​ಗೆ ಶಿಫ್ಟ್​​ ಮಾಡಲು ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಇನ್ನು, ಹೋಟೆಲ್​ ಬಾಡಿಗೆ ಸೆಟಲ್​ಮೆಂಟ್​​ ಸಂಬಂಧ ಕರ್ನಾಟಕ ವಿಪತ್ತು ನಿರ್ವಹಣಾ ಕೇಂದ್ರ ಕ್ರಮ ಕೈಗೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಕೊರೋನಾಗೆ ಮತ್ತೊಂದು ಬಲಿ; ದೇಶದಲ್ಲಿ ಸಾವಿನ ಸಂಖ್ಯೆ 27ಕ್ಕೆ ಏರಿಕೆ
First published:March 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading