• Home
  • »
  • News
  • »
  • coronavirus-latest-news
  • »
  • ಸೌದಿ ಅರೇಬಿಯಾದಿಂದ ಬಂದಿದ್ದ ವೃದ್ಧನಿಗೆ ಕೊರೋನಾ ಶಂಕೆ; ವಿಕ್ಟೋರಿಯಾ ಪ್ರಯೋಗಾಲಯಕ್ಕೆ ಗಂಟಲ ದ್ರವ ಮಾದರಿ ರವಾನೆ

ಸೌದಿ ಅರೇಬಿಯಾದಿಂದ ಬಂದಿದ್ದ ವೃದ್ಧನಿಗೆ ಕೊರೋನಾ ಶಂಕೆ; ವಿಕ್ಟೋರಿಯಾ ಪ್ರಯೋಗಾಲಯಕ್ಕೆ ಗಂಟಲ ದ್ರವ ಮಾದರಿ ರವಾನೆ

ಕೊರೋನಾ ವಾರ್ಡ್​​

ಕೊರೋನಾ ವಾರ್ಡ್​​

ಫೆಬ್ರವರಿ 29 ರಂದು ಸೌದಿ ಅರೇಬಿಯಾದಿಂದ ಬಂದಿದ್ದ ವೃದ್ದನಿಗೆ ಮಾರ್ಚ್ 5 ರಂದು ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕೊರೋನಾ ಲಕ್ಷಣಗಳು ಕಂಡ ಹಿನ್ನೆಲೆಯಲ್ಲಿ  ವಿಶೇಷ ಚಿಕಿತ್ಸೆ ನೀಡಿದ ವೈದ್ಯರು, ಕುಟುಂಬಸ್ಥರನ್ನು ಕೂಡಾ ತಪಾಸಣೆ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಕಲಬುರ್ಗಿ(ಮಾ.10) : ಕಲಬುರ್ಗಿ ನಗರದಲ್ಲಿ ವೃದ್ದರೊಬ್ಬರಿಗೆ ಕೊರೋನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದೆ. ಸೌದಿ ಅರೇಬಿಯಾದಿಂದ ಬಂದಿದ್ದ 75 ವರ್ಷದ ವೃದ್ದನಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅವರ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್ ಗೆ ಕಳುಹಿಸಲಾಗಿದ್ದು, ವರದಿಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಕಾಯುತ್ತಿದೆ. 


ಫೆಬ್ರವರಿ 29 ರಂದು ಸೌದಿ ಅರೇಬಿಯಾದಿಂದ ಬಂದಿದ್ದ ವೃದ್ದನಿಗೆ ಮಾರ್ಚ್ 5 ರಂದು ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕೊರೋನಾ ಲಕ್ಷಣಗಳು ಕಂಡ ಹಿನ್ನೆಲೆಯಲ್ಲಿ  ವಿಶೇಷ ಚಿಕಿತ್ಸೆ ನೀಡಿದ ವೈದ್ಯರು, ಕುಟುಂಬಸ್ಥರನ್ನು ಕೂಡಾ ತಪಾಸಣೆ ಮಾಡಿದ್ದಾರೆ. ಚಿಕಿತ್ಸೆ ಪಡೆದುಕೊಂಡಿರುವ ವೃದ್ಧ ಸದ್ಯ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.


ಹೋಳಿಯ ಮೇಲೂ ಕೊರೋನಾ ಪರಿಣಾಮ:


ಇಂದು ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಸಂಭ್ರಮ. ಆದರೆ ಪ್ರತಿ ವರ್ಷಕ್ಕೆ ಹೋಲಿಸಿ ನೋಡಿದಲ್ಲಿ ಈ ವರ್ಷ ರಂಗುರಂಗಿನ ಹಬ್ಬ ಕಳೆಗುಂದಿದೆ ಎಂದೇ ಹೇಳಬಹುದು. ಅದಕ್ಕೆ ಮುಖ್ಯ ಕಾರಣ ಕೊರೋನಾ ವೈರಸ್ ಭೀತಿ. ಮಕ್ಕಳಿಂದ ಹಿಡಿದು ವಯೋವೃದ್ಧವರೆಗೂ ಹೋಳಿ ಹಬ್ಬದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಈ ವರ್ಷ ಮಕ್ಕಳು ಪಾಲ್ಗೊಳ್ಳುವಿಕೆ ಮಾತ್ರ ಹೆಚ್ಚಾಗಿ ಕಾಣುತ್ತಿದೆ. ಯಾವುದೇ ರಸ್ತೆಗೆ ಹೋದರೂ ಹಲಗೆ ಸದ್ದು, ಬಾಯಿ ಬಡಿದುಕೊಳ್ಳೋ ಸದ್ದು ಕೇಳುತ್ತಿತ್ತು. ಆದರೆ ಈ ಬಾರಿ ನಗರದ ಪ್ರಮುಖ ಬೀದಿಗಳು ಬಿಕೋ ಎನ್ನುತ್ತಿವೆ.


holi
ಹೋಳಿ ಆಚರಣೆ


ದೇವಸ್ಥಾನ, ಪ್ರವಾಸಿ ತಾಣಗಳಿಗೂ ಕರೋನಾ ಭೀತಿ :


ಕಲಬುರ್ಗಿ ಜಿಲ್ಲೆಯಲ್ಲಿ ಧಾರ್ಮಿಕ ಕೇಂದ್ರ, ಪ್ರವಾಸಿ ತಾಣಗಳ ಮೇಲೆ ಕರೋನಾ ಎಫೆಕ್ಟ್ ಕಾಣಿಸುತ್ತಿದೆ. ದೇವಸ್ಥಾನ, ಪ್ರವಾಸಿ ತಾಣ ಮತ್ತಿತರ ಕಡೆ ಬರುವವರ ಸಂಖ್ಯೆ ಇಳಿಮುಖವಾಗಿದೆ. ಜನನಿಬಿಡ ಸ್ಥಳಗಳು ಈಗ ಬಿಕೋ ಎನ್ನುತ್ತಿವೆ. ಕಲಬುರ್ಗಿ ಆರಾಧ್ಯ ದೈವ ಶರಣ ಬಸವೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮಾರ್ಚ್ 12 ಕ್ಕೆ ಶರಣಬಸವೇಶ್ವರರ ಉಚ್ಛಾಯವಿದ್ದು, ಮಾರ್ಚ್ 13 ಕ್ಕೆ ಶರಣಬಸವೇಶ್ವರರ ಮಹಾ ರಥೋತ್ಸವವಿದೆ. ಜಾತ್ರೆಯ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ.


ಇದನ್ನೂ ಓದಿ : ರಾಜ್ಯದಲ್ಲಿ ನಾಲ್ಕು ಜನರಿಗೆ ಕೊರೋನಾ ವೈರಸ್​ ಪಾಸಿಟಿವ್​; ದೃಢಪಡಿಸಿದ ಆರೋಗ್ಯ ಇಲಾಖೆ


ಈ ವೇಳೆಗೆ ಹೆಚ್ಚು ಹೆಚ್ಚು ಭಕ್ತರು ದೇವಸ್ಥಾನಕ್ಕೆ ಬರೋದು ವಾಡಿಕೆ. ಆದರೆ, ಕೊರೋನ ಎಫೆಕ್ಟ್ ನಿಂದ ಭಕ್ತರ ಬರುವಿಕೆಯಲ್ಲಿ ಇಳಿಮುಖವಾಗಿದೆ. ಜಿಲ್ಲೆಯ ಗಾಣಗಾಪುರ ದೇವಸ್ಥಾನ ಮತ್ತಿತರ ಕಡೆಯೂ ಕರೋನಾ ಪರಿಣಾಮ ಬೀರಿದೆ. ಇತರೆ ಪ್ರವಾಸಿ ತಾಣಗಳಲ್ಲಿಯೂ ಇದೇ ಪರಿಸ್ಥಿತಿಯಿದೆ. ಜಿಲ್ಲೆಯ ಪ್ರಮುಖ ದೇವಸ್ಥಾನಗೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ.

Published by:G Hareeshkumar
First published: