ಪೂನಾದಲ್ಲಿ ತಪ್ಪಿಸಿಕೊಂಡಿದ್ದ ಕೊರೋನಾ ಶಂಕಿತ ವ್ಯಕ್ತಿ ಕಲಬುರ್ಗಿಯಲ್ಲಿ ಪ್ರತ್ಯಕ್ಷ - ಆಸ್ಪತ್ರೆಗೆ ದಾಖಲು

ಪೂನಾದ ಆಸ್ಪತ್ರೆಯಿಂದ ತಪ್ಪಿಸಿಕೊಂಡ ಬಳಿಕ ಆತನ ಸ್ನೇಹಿತರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಮದ್ಯದಿಂದ ಕೊರೋನಾ ವೈರಸ್ ದೂರ ಆಗುತ್ತೆ ಎನ್ನುವ ಕಾರಣಕ್ಕೆ ಹಿತ್ತಲಶಿರೂರ್ ಗ್ರಾಮಕ್ಕೆ‌ ನಸುಕಿನ ಜಾವಕ್ಕೆ ಆಗಮಿಸಿ ಕಂಠಪೂರ್ತಿ ಕುಡಿದಿದ್ದ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಲಬುರ್ಗಿ(ಮಾ. 23): ಪೂನಾದ ಆಸ್ಪತ್ರೆಯಿಂದ ತಪ್ಪಿಸಿಕೊಂಡ ಕೊರೋನಾ ಶಂಕಿತ ವ್ಯಕ್ತಿಯೊಬ್ಬ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಪ್ರತ್ಯಕ್ಷನಾಗಿದ್ದಾನೆ. ಅದೇ ಗ್ರಾಮದವನಾದ ಈತ ಪೂನಾದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೊರೋನಾ ವೈರಸ್​ನಿಂದ ಬಳಲುತ್ತಿರುವ ಶಂಕೆ ಹಿನ್ನಲೆಯಲ್ಲಿ ಈತನನ್ನು ಪೂನಾದ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು ಎನ್ನಲಾಗಿದೆ. 

  ನಿನ್ನೆ ರಾತ್ರಿ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಟ್ಯಾಕ್ಸಿ‌ ಚಾಲನೆ ಮಾಡಿಕೊಂಡು ಕಲಬುರಗಿಗೆ ಆಗಮಿಸಿದ್ದಾನೆ. ಬರುವಾಗ ಟ್ಯಾಕ್ಸಿಯಲ್ಲಿ ಐದು ಜನ ಪ್ರಯಾಣಿಕರನ್ನ ಕರೆದುಕೊಂಡು ಬಂದಿದ್ದ. ಈತ ಇಬ್ಬರನ್ನು ಮಹಾರಾಷ್ಟ್ರದ ಸೊಲ್ಲಾಪುರ ಬಳಿ ಡ್ರಾಪ್ ಮಾಡಿದ್ದ. ಇನ್ನಿಬ್ಬರನ್ನ ಮಹಾರಾಷ್ಟ್ರದ ಅಕ್ಕಲಕೋಟ್ ಡ್ರಾಪ್ ಮಾಡಿ, ಒಬ್ಬನನ್ನ ಕಲಬುರಗಿ ಜಿಲ್ಲೆಯ ಸ್ಟೆಷನ್ ಗಾಣಗಾಪುರಕ್ಕೆ ಡ್ರಾಪ್ ಮಾಡಿ, ಬೆಳಗ್ಗಿನ ಜಾವ ಐದು ಗಂಟೆಗೆ ಹಿತ್ತಲಶಿರೂರ ಗ್ರಾಮಕ್ಕೆ ತಲುಪಿದ್ದಾನೆ.

  ಪೂನಾದ ಆಸ್ಪತ್ರೆಯಿಂದ ತಪ್ಪಿಸಿಕೊಂಡ ಬಳಿಕ ಆತನ ಸ್ನೇಹಿತರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಮದ್ಯದಿಂದ ಕೊರೋನಾ ವೈರಸ್ ದೂರ ಆಗುತ್ತೆ ಎನ್ನುವ ಕಾರಣಕ್ಕೆ ಹಿತ್ತಲಶಿರೂರ್ ಗ್ರಾಮಕ್ಕೆ‌ ನಸುಕಿನ ಜಾವಕ್ಕೆ ಆಗಮಿಸಿ ಕಂಠಪೂರ್ತಿ ಕುಡಿದಿದ್ದ. ಬಳಿಕ ಗ್ರಾಮದ 25 ರಿಂದ 30 ಜನ ಸ್ನೇಹಿತರನ್ನ‌ ಭೇಟಿ ಮಾಡಿದ. ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರುವ ಮಾಹಿತಿ ಅರಿಯುತ್ತಿದ್ದಂತೆ ಊರಿನ ಕೆಲ ಜನರು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

  ಬಳಿಕ ತಾಲ್ಲೂಕು ಆರೋಗ್ಯ ಅಧಿಕಾರಿ ಆತನನ್ನು ತಪಾಸಣೆ ಮಾಡಿದ್ದಾರೆ.  ತಪಾಸಣೆ ಸಂದರ್ಭದಲ್ಲಿ ಕರೊನಾ ಶಂಕಿತ ಲಕ್ಷಣಗಳು ಪತ್ತೆ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್​​ ನಲ್ಲಿ ಕಲಬುರ್ಗಿಗೆ ಆರೋಗ್ಯ ಅಧಿಕಾರಿ ಕಳುಹಿಸಿಕೊಟ್ಟಿದ್ದಾರೆ. ಶಂಕಿತ ಕೊರೋನಾ ವೈರಸ್​ನಿಂದ ಬಳಲುತ್ತಿದ್ದಾನಾ ಎಂಬುವುದರ ಬಗ್ಗೆ ಪುನಾದ ಆಸ್ಪತ್ರೆಯಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುವಲ್ಲಿ ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ.

  ಇದನ್ನೂ ಓದಿ : ಆನೇಕಲ್​​​ ಸಮೀಪ ಮನೆ ನಿಗಾದಲ್ಲಿರಬೇಕಾದ ಇಬ್ಬರು ಸಾರ್ವಜನಿಕವಾಗಿ ಓಡಾಟ- ಆತಂಕದಲ್ಲಿ ಜನರು

  ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿದೆ. ಈ ಮೂಲಕ ಮುಂಬೈವೊಂದರಲ್ಲೇ ಮೂರು ವ್ಯಕ್ತಿಗಳು ಕೊರೋನಾಗೆ ಬಲಿಯಾದಂತಾಗಿದೆ. ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 27 ಹಾಗೂ ಭಾರತದಾದ್ಯಂತ ಪ್ರಕರಣಗಳ ಸಂಖ್ಯೆ 415 ದಾಟಿದೆ.
  First published: