ಯೋಗರಾಜ್ ಭಟ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಜೊತೆಗೂಡಿ ರಚಿಸಿದ ಕರೋನಾ ಜಾಗೃತಿ ಹಾಡು ಬಿಡುಗಡೆಯಾಗಿದೆ. ವಿಭಿನ್ನವಾದ ಹಾಡುಗಳಿಂದಲೇ ಹೆಸರು ಮಾಡಿರುವ ಯೋಗರಾಜ್ ಭಟ್ ಅವರು ಕೊರೋನಾ ಜಾಗೃತಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅವರ ರಚನೆಯ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದರೆ, ಗಾಯಕ ವಿಜಯ್ ಪ್ರಕಾಶ್ ದನಿಯಾಗಿದ್ದಾರೆ.
ಯೋಗರಾಜ್ ಭಟ್, ಅರ್ಜುನ್ ಜನ್ಯ ಹಾಗೂ ಗಾಯಕ ವಿಜಯ್ ಪ್ರಕಾಶ್ ಅವರ ಕಾಂಬಿನೇಷನ್ನ ಈ ಹಾಡು ಅದ್ಭುತವಾಗಿ ಮೂಡಿಬಂದಿದೆ. ಇಂತಹ ಸ್ಟಾರ್ ಜೋಡಿಗಳು ಒಟ್ಟಿಗೆ ಸೇರಿ ಕೊರೋನಾ ಕುರಿತಾಗಿ ಜಾಗೃತಿ ಮೂಡಿಸುವ ಹಾಡಿಗೆ ಜೀವ ಕೊಟ್ಟಿದ್ದಾರೆ.
Aamir Khan: ಲಾಕ್ಡೌನ್ನಲ್ಲಿ ಕುಟುಂಬದೊಂದಿಗೆ ವೆಬ್ ಸರಣಿ ವೀಕ್ಷಿಸಿದ ಅಮೀರ್ ಖಾನ್..!
ಕೊರೋನಾ ನಿಯಂತ್ರಣಕ್ಕೆ ಕೆಲಸಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ ಮೊದಲಾದವರನ್ನು ಬಳಸಿ ಶೂಟಿಂಗ್ಗೆ ಮಾಡಲಾಗಿದೆ. ಜೊತೆಗೆ ಪೊಲೀಸ್ ಕಮಿಷನರ್ ಹಾಗೂ ಡಿಸಿಪಿಗಳನ್ನ ಒಳಗೊಂಡು ಚಿತ್ರೀಕರಣವನ್ನ ಮಾಡಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಸ್ಯಾಂಡಲ್ವುಡ್ ನಟಿಯರ ಮೇಕಪ್ ಇಲ್ಲದ ಲುಕ್ ಇಲ್ಲಿದೆ..
ಅಷ್ಟೇ ಅಲ್ಲದೆ ಮಾಧ್ಯಮ ಪ್ರತಿನಿಧಿಗಳ ಕೆಲಸವನ್ನು ಕೂಡಾ ಯೋಗರಾಜ್ ಭಟ್ ಗುರುತಿಸಿದ್ದು, ಕೊರೋನಾ ವಾರಿಯರ್ಸ್ ಪರಿಶ್ರಮವನ್ನು ಹಾಡಿನ ಮೂಲಕ ತೋರಿದ್ದಾರೆ. ನ್ಯೂಸ್18 ಕನ್ನಡದ ಪೊಲಿಟಿಕಲ್ ಹೆಡ್ ಚಿದಾನಂದ ಪಟೇಲ್ ಸೇರಿದಂತೆ ಹಲವು ಮಾಧ್ಯಮ ಪ್ರತಿನಿಧಿಗಳು, ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ, ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮೊದಲಾದವರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ