ಬೆಂಗಳೂರು (ಏಪ್ರಿಲ್ 22); ಭಾರತದಲ್ಲಿ ಕೊರೋನಾ ಎರಡನೇ ಅಲೆ ಮಿತಿ ಮೀರಿದೆ. ಇಂದು ಒಂದೇ ದಿನ ಕನಿಷ್ಟ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಎಲ್ಲಾ ಹಳೆಯ ದಾಖಲೆಗಳೂ ಮೀರಿ ಕೊರೋನಾ ಕೈಮೀರುತ್ತಿದೆ. ಇನ್ನೂ ಕರ್ನಾಟಕದಲ್ಲೂ ಸಹ ಪರಿಸ್ಥಿತಿ ಭಿನ್ನವಾಗೇನು ಇಲ್ಲ. ರಾಜ್ಯದಲ್ಲೂ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದು, ಅವರಗೆ ಆಸ್ಪತ್ರೆ ಬೆಡ್ ಒದಗಿಸುವುದು ಸಹ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಕೊರೋನಾದಿಂದ ಸಾಯುವವರಿಗಿಂತ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಮತ್ತು ಆಕ್ಸಿಜನ್ ಸಿಗದೆ ಸಾಯುವವರ ಸಂಖ್ಯೆ ಅಧಿಕವಾಗುತ್ತಿದೆ. ಇನ್ನೂ ಮೃತರ ಅಂತ್ಯಕ್ರಿಯೆಯೂ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಆದರೆ, ಸಮಸ್ಯೆ ಬಗೆಹರಿಸಬೇಕಿದ್ದ ಸಚಿವರುಗಳು ಮಾತ್ರ ಉಪ ಚುನಾವಣೆ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಸಚಿವರುಗಳ ಈ ನಡೆಗೆ ಟ್ವಿಟರ್ ಮೂಲಕ ಕಿಡಿಕಾರಿರುವ ಕಾಂಗ್ರೆಸ್ ರಾಜ್ಯ ಘಟಕ, "ಇದು ಕೊಲೆಗಡುಕ ಸರ್ಕಾರ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದು "ಕೊಲೆಗಡುಕ ಸರ್ಕಾರ"
ಸಚಿವರು ಹೆಣವನ್ನು ಕುಕ್ಕಿ ತಿನ್ನುವ ರಣ ಹದ್ದುಗಳಂತೆ ಭಾಸವಾಗುತ್ತಿದ್ದಾರೆ
ರಾಜ್ಯ ಅತೀ ಭಯಂಕರವಾಗಿ ನರಳುತ್ತಿರುವಾಗಲೇ ಕುಂದುಕೊರತೆಗಳನ್ನು ನೋಡಬೇಕಿದ್ದ ಸಚಿವರಾದ @sriramulubjp ಒಂದು ಕಡೆ, ಡಿಸಿಎಂ @drashwathcn ಮತ್ತೊಂದು ಕಡೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಾರೆ.
ಇದು #ಸೋಂಕಿತಸರ್ಕಾರ ಅಲ್ಲದೆ ಇನ್ನೇನು? pic.twitter.com/sCXyKsVyeO
— Karnataka Congress (@INCKarnataka) April 22, 2021
ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಇರುವ ವ್ಯವಸ್ಥೆಯೊಳಗೆ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವವರೂ ವೈದ್ಯರು ಮುತುವರ್ಜಿ ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
- @DKShivakumar #ಸೋಂಕಿತಸರ್ಕಾರ pic.twitter.com/KbRAMAIkve
— Karnataka Congress (@INCKarnataka) April 22, 2021
ಕರೋನಾ ಸಾವುಗಳೆಲ್ಲವೂ "ಬಿಜೆಪಿ ಪ್ರಾಯೋಜಿತ ಮಾರಣಹೋಮ"
ಕರೋನಾ ಬಂದು ಒಂದು ವರ್ಷವಾದರೂ ಸೂಕ್ತ ವೈದ್ಯಕೀಯ ವ್ಯವಸ್ಥೆಗಳನ್ನು ರೋಪಿಸದೆ, ಆಂತರಿಕ ಕಚ್ಚಾಟ, ಖಾತೆ ಕಿತ್ತಾಟ, ಸಿಡಿ ಚೆಲ್ಲಾಟ, ವರ್ಗಾವಣೆ ದಂಧೆ, ಭ್ರಷ್ಟಾಚಾರದಲ್ಲಿ ಮುಳುಗಿದ ಈ #ಸೋಂಕಿತಸರ್ಕಾರ ದ ನಿರ್ಲಕ್ಷ್ಯ, ಬೇಜವಾಬ್ದಾರಿತನ, ಭ್ರಷ್ಟಾಚಾರಗಳೇ ಇಂದಿನ ಭೀಕರ ಸ್ಥಿತಿಗೆ ಕಾರಣ. pic.twitter.com/GaPiq1jFjz
— Karnataka Congress (@INCKarnataka) April 22, 2021
ರಾಜ್ಯಾದ್ಯಂತ ಚಿಕಿತ್ಸೆ, ಲಸಿಕೆ, ಆಕ್ಸಿಜನ್, ಬೆಡ್ ಎಲ್ಲದರ ಕೊರತೆಯಿಂದ ಸೋಂಕಿತರ ಆಕ್ರಂದನ ಮುಗಿಲು ಮುಟ್ಟಿದೆ.
ಎಲ್ಲಾ ಸಚಿವರು ಸಮರೋಪಾದಿಯಲ್ಲಿ ಸಂಕಷ್ಟ ನೀಗಿಸುವ ಕೆಲಸ ಮಾಡುವುದನ್ನು ಬಿಟ್ಟು @sriramulubjp ಜನ ಸೇರಿಸಿ ಚುನಾವಣಾ ಪ್ರಚಾರದ ಮೆರವಣಿಗೆ ಮೂಲಕ ಸೂಪರ್ ಸ್ಪ್ರೆಡರ್ ಆಗಿದ್ದಾರೆ.
ಇದು #ಸೋಂಕಿತಸರ್ಕಾರ ಅಲ್ಲದೆ ಮತ್ತಿನ್ನೇನು? pic.twitter.com/WaOa3Dy0CF
— Karnataka Congress (@INCKarnataka) April 22, 2021
ಒಂದು ವರ್ಷ ಸಮಯವಿದ್ದರೂ ರಾಜ್ಯ @BJP4Karnataka ಸರ್ಕಾರ ಕೋವಿಡ್ 2ನೇ ಅಲೆ ಎದುರಿಸಲು ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ.
ಕೇಂದ್ರ - ರಾಜ್ಯ ಬಿಜೆಪಿ ಸರ್ಕಾರಗಳ ನಿರ್ಲಕ್ಷ್ಯ ಜನಸಾಮಾನ್ಯರನ್ನು ಬಲಿಪಡೆಯುತ್ತಿದೆ.
ಜನರ ಜೀವ ಉಳಿಸಲು ಈ ಸರ್ಕಾರಗಳು ಇದ್ದ ಯಾವ ಅವಕಾಶಗಳನ್ನೂ ಉಪಯೋಗಿಸಿಕೊಳ್ಳಲಿಲ್ಲ. #ಸೋಂಕಿತಸರ್ಕಾರ
- @DKShivakumar pic.twitter.com/bNeDGaceCa
— Karnataka Congress (@INCKarnataka) April 22, 2021
'@BJP4Karnataka ಸರ್ಕಾರದಿಂದ ರೋಗಿಗಳಿಗೆ ಔಷಧಿ, ಹಾಸಿಗೆ, ಐಸಿಯು, ಆಕ್ಸಿಜನ್, ವೆಂಟಿಲೇಟರ್ ಕೊಡಲು ಆಗಲಿಲ್ಲ.
ಕನಿಷ್ಟ ಪಕ್ಷ ಮೃತರಿಗೆ ಗೌರವಯುತ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡಲಿಲ್ಲ.
ಕಳೆದೊಂದು ವರ್ಷದಿಂದ ಜನರ ಯಾವ ಸಂಕಷ್ಟಗಳಿಗೂ ಈ #ಸೋಂಕಿತಸರ್ಕಾರ ಸ್ಪಂದಿಸಲಿಲ್ಲ.
- @DKShivakumar
— Karnataka Congress (@INCKarnataka) April 22, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ