HOME » NEWS » Coronavirus-latest-news » CORONA SECOND WAVE BBMP PROPOSES 1 THOUSAND BED COVID 19 HOSPITAL TO GOVERNMENT MAK

ಕೊರೋನಾ ಎರಡನೇ ಅಲೆ: ಸರ್ಕಾರಕ್ಕೆ 1 ಸಾವಿರ ಹಾಸಿಗೆಯ ಕೋವಿಡ್ ಆಸ್ಪತ್ರೆಯ ಪ್ರಸ್ತಾವನೆ ಇಟ್ಟ ಬಿಬಿಎಂಪಿ.!

ಇತ್ತ ಕೊರೋನಾ ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಂತ್ಯ ಸಂಸ್ಕಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ. ಹೀಗಾಗಿ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ 12 ಚಿತಾಗಾರ ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗೆಂದೇ ಬಿಬಿಎಂಪಿ ಮೀಸಲಿಟ್ಟು ಆದೇಶ ಹೊರಡಿಸಿದೆ.

news18-kannada
Updated:April 22, 2021, 7:42 PM IST
ಕೊರೋನಾ ಎರಡನೇ ಅಲೆ: ಸರ್ಕಾರಕ್ಕೆ 1 ಸಾವಿರ ಹಾಸಿಗೆಯ ಕೋವಿಡ್ ಆಸ್ಪತ್ರೆಯ ಪ್ರಸ್ತಾವನೆ ಇಟ್ಟ ಬಿಬಿಎಂಪಿ.!
ಬಿಬಿಎಂಪಿ
  • Share this:
ಬೆಂಗಳೂರು: ಕೊರೋನಾ ವೈರಸ್ ಈ ಬಾರಿ ನಮ್ಮ ವೈದ್ಯಕೀಯ ವ್ಯವಸ್ಥೆಯನ್ನು ಅಣಕಿಸಿದೆ. ಹಾಸಿಗೆ, ಆಕ್ಸಿಜನ್, ಐಸಿಯೂ ಹೀಗೆ ಗಂಭೀರವಾಗಿದ್ದ ವಿಚಾರಗಳೆಲ್ಲವೂ ಈಗ ಸರಳ ಮಾತಾಗಿ ಹೋಗಿದೆ. ಹೌದು..ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಅನ್ನುವುದು ಈಗ ಗೌಪ್ಯವಾಗಿ ಉಳಿದಿಲ್ಲ. ಹೀಗಾಗಿ ಬಿಬಿಎಂಪಿ ತಾತ್ಕಾಲಿಕ ಕೋವಿಡ್ ಕೇರ್​ ಸೆಂಟರ್​ಗಳನ್ನು ತೆರೆಯುವ ಚಿಂತನೆ ನಡೆಸಿದ್ದು, ರಾಜ್ಯ ಸರ್ಕಾರದ ಎದುರು 1 ಸಾವಿರ ಬೆಡ್​ ಸಾಮರ್ಥ್ಯ ಉಳ್ಳ ಕೋವಿಡ್​ ಕೇರ್​ ಸೆಂಟರ್​ ಬೇಡಿಕೆ ಇಟ್ಟಿದೆ.

ಸರ್ಕಾರದ ಮುಂದೆ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ನಿರ್ಮಾಣದ ಪ್ರಸ್ತಾವನೆ ಇಟ್ಟ ಬಿಬಿಎಂಪಿ.!!

ಕೊರೋನಾ ಎರಡನೇ ಅಲೆ ಬೆಂಗಳೂರಿಗರಿಗೆ ಅಕ್ಷರಶಃ ನರಕ ದರ್ಶನ ಮಾಡಿಸುತ್ತಿದೆ. ಎಲ್ಲೆಂದರಲ್ಲಿ ಸೋಂಕಿತರು ಬಿದ್ದು ಹೊರಳಾಡುವ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ. ಮೃತ ಸೋಂಕಿತರ ಶರೀರವನ್ನು ಅಂತ್ಯಸಂಸ್ಕಾರ ಮಾಡಲೂ ಪರದಾಡುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಬೆಡ್‌ಗಳು ಸೂಕ್ತ ಪ್ರಮಾಣದಲ್ಲಿ ಪೂರೈಕೆ ಮಾಡಲಾಗ್ತಿದೆ ಅಂತ ಸರ್ಕಾರ ಹಾಗೂ ಆಳಿತ ವರ್ಗ ಹೇಳುತ್ತಿದೆಯಾದರೂ ಬೆಡ್ ಗಾಗಿ ರೋಗಿಗಳ ಪರದಾಟ ಮಾತ್ರ ನಿಂತಿಲ್ಲ. ಹೀಗಾಗಿ ಬಿಬಿಎಂಪಿ ನೂತನ ಲೆಕ್ಕಾಚಾರದೊಂದಿಗೆ ಮುಂದೆ ಬಂದಿದೆ. ತಾತ್ಕಾಲಿಕ ಐಸಿಯೂ ವ್ಯವಸ್ಥೆ ಇರುವ ಕೋವಿಡ್ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಬಿಬಿಎಂಪಿ ಸರ್ಕಾರದ ಮುಂದೆ ಇಟ್ಟಿದೆ.

1 ಸಾವಿರ ಹಾಸಿಗೆಯುಳ್ಳ ತಾತ್ಕಾಲಿಕ ಕೋವಿಡ್ ಆಸ್ಪತ್ರೆ.!!

ಹೌದು, ಬಿಬಿಎಂಪಿಗೆ ಕೆಟ್ಟ ಮೇಲೆ ಬುದ್ದಿ ಬಂದಂತಿದೆ. ಇಷ್ಟೆಲ್ಲ ಅವಾಂತರಗಳಾದ ಮೇಲೆ ಸಕರಾತ್ಮ ಪ್ರಸ್ತಾವನೆಯೊಂದನ್ನೆ ಸರ್ಕಾರದ ಮುಂದಿಟ್ಟಿದೆ. ಕೋವಿಡ್ ಶಮನಕ್ಕೆ ಸುಸಜ್ಜಿತ ಐಸಿಯೂ ಸೌಲಭ್ಯಗಳುಳ್ಳ ತಾತ್ಕಾಲಿಕ ಆಸ್ಪತ್ರೆಯನ್ನು ತೆರೆಯುವ ಚಿಂತನೆ ಮಾಡಿದೆ. ಈ ತಾತ್ಕಾಲಿಕ ಆಸ್ಪತ್ರೆ ಸುಮಾರು 1 ಸಾವಿರ ಹಾಸಿಗೆ ಹೊಂದಿರಲಿದೆ. ಜಾಗ ಹಾಗೂ ಇದಕ್ಕೆ ಬೇಕಾಗಿರುವ ಬಜೆಟ್ ಬಗ್ಗೆ ಸದ್ಯ ಚರ್ಚೆಗಳು ನಡೆಯುತ್ತಿದ್ದು, ಮೊದಲ ಹಂತದ ಪ್ರಸ್ತಾವನೆಯಷ್ಟೇ ಸದ್ಯಕ್ಕೆ ಬಿಬಿಎಂಪಿ ಸರ್ಕಾರದ ಮುಂದೆ ಇಟ್ಟಿದೆ.

ಇದನ್ನೂ ಓದಿ: COVID Guideline | ಕೊರೋನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ; ಯಾವುದಕ್ಕೆ ನಿರ್ಬಂಧ, ಯಾವುದಕ್ಕೆ ನಿಷೇಧ?

ಹಾಸಿಗೆ ನೀಡದೆ ಕಳ್ಳಾಟ ಆಡಿದ 66 ಖಾಸಗಿ ಆಸ್ಪತ್ರೆಗೆ ಪಾಲಿಕೆ ನೋಟೀಸ್.!!ಬೆಂಗಳೂರಿನಲ್ಲಿ ಸದ್ಯ 600 ಐಸಿಯೂ ಬೆಡ್ ವ್ಯವಸ್ಥೆ ಇದೆ. ಇದರ ಹೊರತಾಗಿ ತುರ್ತು 200 ಐಸಿಯೂ ಬೆಡ್ ಗಳ ವ್ಯವಸ್ಥೆ ಮಾಡಲು ಬಿಬಿಎಂಪಿ ಹೊರಟಿದೆ. ಆದರೂ ಬೆಡ್ ಗಳು ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಈತನ್ಮಧ್ಯೆ ಖಾಸಗಿ ಆಸ್ಪತ್ರೆಗಳ ಹಾಸಿಗೆ ನೀಡದೆ ಸತಾಯಿಸು ತ್ತಿರುವುದು ವಾಸ್ತವ. ಈ ಸಂಬಂಧ ಈಗಾಗಲೇ 66 ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್ ಇಶ್ಯೂ ಮಾಡಿದೆ. 50% ರಷ್ಟು ಹಾಸಿಗೆಗಳನ್ನು ಕಡ್ಡಾಯವಾಗಿ ಕೋವಿಡ್ ರೋಗಿಗಳಿಗೆ ಮೀಸಲಿಡಲೇ ಬೇಕು ಅಂತ ತಾಕೀತು ಮಾಡಿದೆ. ಇಲ್ಲದಿದ್ದಲ್ಲಿ ಓಪಿಡಿ ಕ್ಲೋಸ್ ಮಾಡುವ ಖಡಕ್ ಎಚ್ಚರಿಕೆಯನ್ನೂ ಬಿಬಿಎಂಪಿ ಕೊಟ್ಟಿದೆ.

ಮೃತ ಸೋಂಕಿತರ ಅಂತ್ಯಕ್ರಿಯೆಗೆ ನಗರದ 12 ಚಿತಾಗಾರ ಮೀಸಲು.!!

ಇತ್ತ ಕೊರೋನಾ ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಂತ್ಯ ಸಂಸ್ಕಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ. ಹೀಗಾಗಿ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ 12 ಚಿತಾಗಾರ ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗೆಂದೇ ಬಿಬಿಎಂಪಿ ಮೀಸಲಿಟ್ಟು ಆದೇಶ ಹೊರಡಿಸಿದೆ. ಅಲ್ದೇ, ಅಂತ್ಯ ಕ್ರಿಯೆಗೆ ಸಿಬ್ಬಂದಿಗಳಿಗೆ ಸೋಂಕಿತರ ಕುಟುಂಬ ಸ್ಥರಿಂದ ಹಣ ವಸೂಲಿ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ಸೇರಿದಂತೆ ಒಂದಿಷ್ಡು ಮಾರ್ಗ ಸೂಚಿಗಳನ್ನು ಜಾರಿ ಮಾಡಿದೆ. ಒಟ್ಟಾರೆ ಕೊರೋನಾ ಮತ್ತೊಮ್ಮೆ ಕಂಗೆಡುವಂತೆ ಮಾಡಿದ್ದು, ಸರ್ಕಾರ ಬಿಬಿಎಂಪಿ ಎಲ್ಲಾ ಆಡಳಿತ ಯಂತ್ರವೂ ಬಕ್ಬರಾಲು ಬೀಳುತ್ತಿದೆ.

(ವರದಿ - ಆಶಿಕ್ ಮುಲ್ಕಿ)
Published by: MAshok Kumar
First published: April 22, 2021, 7:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories