HOME » NEWS » Coronavirus-latest-news » CORONA POSITIVE TO STAFF OF THE RAJYA SABHA PARLIAMENT HOUSE SEALDOWN MAK

ರಾಜ್ಯಸಭಾ ಸಚಿವಾಲಯದ ಸಿಬ್ಬಂದಿಗೆ ಕೊರೋನಾ ಪಾಸಿಟಿವ್; ಸಂಸತ್ ಭವನ ಸೀಲ್‌ಡೌನ್

ಕೇಂದ್ರ ಸರ್ಕಾರ ಸಂಸತ್‌ ಭವನದಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ನೌಕರರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿತ್ತು. ಇಂದು ಪರೀಕ್ಷೆ ವರದಿ ಸಿಕ್ಕಿದ್ದು, ರಾಜ್ಯಸಭಾ ಸಚಿವಾಲಯದ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

news18-kannada
Updated:May 29, 2020, 5:17 PM IST
ರಾಜ್ಯಸಭಾ ಸಚಿವಾಲಯದ ಸಿಬ್ಬಂದಿಗೆ ಕೊರೋನಾ ಪಾಸಿಟಿವ್; ಸಂಸತ್ ಭವನ ಸೀಲ್‌ಡೌನ್
ಸಂಸತ್​ ಚಿತ್ರಣ
  • Share this:
ನವ ದೆಹಲಿ (ಮೇ 29); ರಾಜ್ಯಸಭಾ ಸಚಿವಾಲಯದ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಂಸತ್ ಭವನವನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಎರಡು ತಿಂಗಳಿನಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದ್ದರೂ ಸಹ ಸಂಸತ್‌ ಭವನ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು. ಹೀಗಾಗಿ ಕೇಂದ್ರ ಸರ್ಕಾರ ಸಂಸತ್‌ ಭವನದಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ನೌಕರರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿತ್ತು. ಇಂದು ಪರೀಕ್ಷೆ ವರದಿ ಸಿಕ್ಕಿದ್ದು, ರಾಜ್ಯಸಭಾ ಸಚಿವಾಲಯದ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಇದಲ್ಲದೆ, ಸಿಬ್ಬಂದಿಯ ಮಡದಿ ಮಕ್ಕಳಲ್ಲೂ ಕೊರೋನಾ ರೋಗ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಸಂಸತ್ ಭವನದಲ್ಲಿ ಕೊರೋನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ‌ ಕೆಲಸ ಮಾಡುತ್ತಿದ್ದ ಸಂಸತ್ ಭವನದ ಅನೆಕ್ಸ್ ಕಟ್ಟಡದ 5ನೇ ಫ್ಲೋರ್ ಅನ್ನು ಸದ್ಯಕ್ಕೆ ಸೀಲ್‌ಡೌನ್ ಮಾಡಲಾಗಿದೆ. ಸಿಬ್ಬಂದಿ ಸಂಪರ್ಕದಲ್ಲಿದ್ದವರಿಗೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಲಾಕ್‌ಡೌನ್‌ ಎಫೆಕ್ಟ್; ಮಾರ್ಚ್‌ ತ್ರೈಮಾಸಿಕದಲ್ಲಿ ಪಾತಾಳಕ್ಕೆ ಕುಸಿದ ಭಾರತದ ಆರ್ಥಿಕ ದರ
Youtube Video
First published: May 29, 2020, 5:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories