ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾದ ಕೊರೋನಾ; ಮತ್ತೆ ಲಾಕ್​ಡೌನ್​ ಆಗಲಿದೆಯಾ ಜಿಲ್ಲೆ?

ಕೊರೋನಾ ಮುಂದಿನ ದಿನಗಳಲ್ಲಿ ಭಾರೀ ಹೆಚ್ಚಾಗುವ ಸಾಧ್ಯತೆಯನ್ನು ವೈದ್ಯಾಧಿಕಾರಿಗಳು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುಂಬರುವ ಸಂಭಾವ್ಯ ಅಪಾಯವನ್ನು ಎದುರಿಸಲು ಜಿಲ್ಲಾಡಳಿತವೂ ಸಜ್ಜಾಗಿದೆ. ಜಿಲ್ಲೆ ಈಗಾಗಲೇ 2282 ಬೆಡ್ ಗಳನ್ನು ಜಿಲ್ಲಾಡಳಿತ ಮೀಸಲಿಟ್ಟಿದೆ.

news18-kannada
Updated:July 12, 2020, 3:57 PM IST
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾದ ಕೊರೋನಾ; ಮತ್ತೆ ಲಾಕ್​ಡೌನ್​ ಆಗಲಿದೆಯಾ ಜಿಲ್ಲೆ?
ಸಾಂದರ್ಭಿಕ ಚಿತ್ರ
  • Share this:
ದಕ್ಷಿಣ ಕನ್ನಡ(ಜು.12): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಜನರನ್ನು ದಂಗುಬಡಿಸಿದೆ. ದಿನದಿಂದ ದಿನಕ್ಕೆ ಕೇಸ್​ಗಳು ಜಾಸ್ತಿಯಾಗುತ್ತಿದ್ದು, ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ. ಕರಾವಳಿಯಲ್ಲಿ ಕೊರೋನಾ ಸಮುದಾಯಕ್ಕೆ ಹರಡಿರುವ ಭಯ ಉಂಟಾಗಿದ್ದು, ಬೆಂಗಳೂರು ರೀತಿಯಲ್ಲೇ ಮಂಗಳೂರನ್ನೂ ಲಾಕ್ ಡೌನ್ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಕರಾವಳಿಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಆರ್ಭಟಿಸುತ್ತಿದೆ. ವಾರದಿಂದ ಪ್ರತಿದಿನ‌ 180ಕ್ಕಿಂತ ಹೆಚ್ಚು ಕೊರೊನಾ ಕೇಸ್ ಗಳು ಪತ್ತೆಯಾಗುತ್ತಿವೆ. ಸದ್ಯ ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಮಂಗಳೂರಿನಲ್ಲೇ ಅತೀ ಹೆಚ್ಚು ಕೇಸ್ ಗಳು ಪತ್ತೆಯಾಗುತ್ತಿದ್ದು, ಬೆಂಗಳೂರಿನ ರೀತಿ ಮಂಗಳೂರಿನ್ನೂ ಲಾಕ್ ಡೌನ್ ಮಾಡಬೇಕೆಂಬ ಒತ್ತಾಯ ಜೋರಾಗಿದೆ‌.‌

ಎರಡು ಸಾವಿರಕ್ಕಿಂತ ಹೆಚ್ಚು ಕೊರೋನಾ ಕೇಸ್ ಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿದ್ದು, ಈವರೆಗೆ 41 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಕೊರೋನಾ ಆತಂಕ ದುಪ್ಪಟ್ಟಾಗಿದ್ದು, ಜನರೇ ಸ್ವಯಂ ಪ್ರೇರಿತ ರಾಗಿ ಲಾಕ್ ಡೌನ್ ಮಾಡಿಕೊಳ್ಳುತ್ತಿದ್ದಾರೆ. ಬೆಳ್ತಂಗಡಿ ತಾಲೂಕು ಮುಂದಿನ‌ 15 ದಿನಗಳ ಕಾಲ ಮಧ್ಯಾಹ್ನ 2 ಗಂಟೆಯಿಂದ ಸಂಪೂರ್ಣ ಲಾಕ್ ಆಗಲಿದೆ. ಉಳ್ಳಾಲ ಭಾಗದಲ್ಲೂ ಜನ ಸ್ವಯಂ ಲಾಕ್ ಡೌನ್ ಮಾಡಿಕೊಂಡಿದ್ದಾರೆ. ಸ್ವರ್ಣೋದ್ಯಮಿಗಳು, ಬ್ಯೂಟಿ ಪಾರ್ಲರ್ ಗಳ ಮಾಲೀಕರು ಒಂದು ವಾರಗಳ ತಮ್ಮ ವಹಿವಾಟು ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ.ಹೀಗಾಗಿ ಸರ್ಕಾರವೇ ಮುಂದಾಗಿ ಲಾಕ್ ಡೌನ್ ಮಾಡಬೇಕೆಂದು ಜನ  ಒತ್ತಾಯ ಮಾಡಿದ್ದಾರೆ.

ಮೈಸೂರಿನಲ್ಲಿ ದಿನಕ್ಕೆ 5 ಸಾವು, 50 ಪಾಸಿಟಿವ್ ಕೇಸ್; ವಾರದಿಂದ ಕೊರೋನಾ ವೇಗಕ್ಕೆ ಕಡಿವಾಣವೇ ಇಲ್ಲ

ಕೊರೋನಾ ಮುಂದಿನ ದಿನಗಳಲ್ಲಿ ಭಾರೀ ಹೆಚ್ಚಾಗುವ ಸಾಧ್ಯತೆಯನ್ನು ವೈದ್ಯಾಧಿಕಾರಿಗಳು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುಂಬರುವ ಸಂಭಾವ್ಯ ಅಪಾಯವನ್ನು ಎದುರಿಸಲು ಜಿಲ್ಲಾಡಳಿತವೂ ಸಜ್ಜಾಗಿದೆ. ಜಿಲ್ಲೆ ಈಗಾಗಲೇ 2282 ಬೆಡ್ ಗಳನ್ನು ಜಿಲ್ಲಾಡಳಿತ ಮೀಸಲಿಟ್ಟಿದೆ. 34 ವೆಂಟಿಲೇಟರ್ ಗಳು ಸದ್ಯ ರೆಡಿಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪೈಕಿ ಉಳ್ಳಾಲದಲ್ಲೇ ಅತೀ ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ. ಹೀಗಾಗಿ ಮತ್ತೆ ಲಾಕ್ ಡೌನ್ ಜಿಲ್ಲೆಯಲ್ಲಿ ಅನಿವಾರ್ಯವಾಗಿದೆ.

ಇನ್ನು ಲಾಕ್ ಡೌನ್ ಬಗ್ಗೆ ಜಿಲ್ಲೆಯ ಸಂಸದರು,ಶಾಸಕರು,ಅಧಿಕಾರಿಗಳ ಜೊತೆ ಚರ್ಚಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನಾಳೆ ಸಿಎಂ ‌ಸಭೆ ಬಳಿಕ ಲಾಕ್ ಡೌನ್ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಆತಂಕ ದುಪ್ಪಾಟ್ಟಾಗುತ್ತಿದ್ದು, ಕೊರೋನಾ ಸಮುದಾಯದ ಹಂತಕ್ಕೆ ತಲುಪುವ ಭೀತಿ ಜಾಸ್ತಿಯಾಗಿದೆ. ಸರ್ಕಾರದ ಲಾಕ್ ಡೌನ್​ನಿಂದ ಹರಡುವಿಕೆಯ ಪ್ರಮಾಣ ಕಡಿಮೆಯಾಗುವ ವಿಶ್ವಾಸ ಜನರದ್ದಾಗಿದೆ.
Published by: Latha CG
First published: July 12, 2020, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading