ಹೆದರದಿರಿ..! ಜ್ವರ ಇಲ್ಲದವರು, ಗುಣಮುಖರಾದವರಿಂದ ಕೊರೋನಾ ಸೋಂಕು ಹರಡೋದಿಲ್ಲ

ಇವೆರೆಡೂ ಅಧ್ಯಯನ ನಿಜವೇ ಆದಲ್ಲಿ ಕೊರೋನಾ ಸೋಂಕು ವಿರುದ್ಧದ ಹೋರಾಟದಲ್ಲಿ ನಿರೀಕ್ಷೆಗಿಂತ ಮುಂಚೆಯೇ ನಾವು ಜಯ ಸಾಧಿಸುವುದು ಬಹುತೇಕ ನಿಶ್ಚಿತ ಎನಿಸುತ್ತದೆ.

Vijayasarthy SN | news18-kannada
Updated:May 23, 2020, 2:28 PM IST
ಹೆದರದಿರಿ..! ಜ್ವರ ಇಲ್ಲದವರು, ಗುಣಮುಖರಾದವರಿಂದ ಕೊರೋನಾ ಸೋಂಕು ಹರಡೋದಿಲ್ಲ
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ಸೋಂಕಿನ ವಿಚಾರ ಸಾಕಷ್ಟು ಊಹಾಪೋಹ, ಭಯಗಳಿಗೆ ಎಡೆ ಮಾಡಿಕೊಟ್ಟಿದೆ. ಸೋಂಕು ಹೇಗೆ ಬೇಕಾದರೂ ಹರಡಬಹುದು ಎಂದು ಹತಾಶಗೊಂಡವರಿದ್ದಾರೆ. ಆದರೆ, ಕೊರೋನಾ ವೈರಸ್ ಅನ್ನು ತೀರಾ ನಿರ್ಲಕ್ಷಿಸಲೂ ಸಾಧ್ಯವಿಲ್ಲ, ತೀರಾ ತಲೆಗೆ ಹಚ್ಚಿಕೊಳ್ಳುವುದೂ ಸಾಧುವಲ್ಲ ಎಂದು ತಜ್ಞರು ಹೇಳುತ್ತಾರೆ. ಇತ್ತೀಚಿನ ಅಧ್ಯಯನಗಳಿಂದ ಕೆಲವೊಂದು ಆಸಕ್ತಿಕರ ವಿಚಾರಗಳು ಬೆಳಕಿಗೆ ಬಂದಿವೆ. ಜ್ವರ ಲಕ್ಷಣ ಇಲ್ಲದವರಿಂದ ಸೋಂಕು ಹರಡುವುದಿಲ್ಲ ಎಂದು ಒಂದು ಅಧ್ಯಯನ ಹೇಳುತ್ತಿದೆ. ಎರಡನೇ ಬಾರಿ ಸೋಂಕು ತಗುಲಿಸಿಕೊಂಡವರಿಂದಲೂ ಸೋಂಕು ಹರಡುವುದಿಲ್ಲ ಎಂದು ಮತ್ತೊಂದು ಅಧ್ಯಯನ ಹೇಳಿದೆ.

ಇವೆರೆಡೂ ಅಧ್ಯಯನ ನಿಜವೇ ಆದಲ್ಲಿ ಕೊರೋನಾ ಸೋಂಕು ವಿರುದ್ಧದ ಹೋರಾಟದಲ್ಲಿ ನಿರೀಕ್ಷೆಗಿಂತ ಮುಂಚೆಯೇ ನಾವು ಜಯ ಸಾಧಿಸುವುದು ಬಹುತೇಕ ನಿಶ್ಚಿತ ಎನಿಸುತ್ತದೆ.

ಭಾರತದಲ್ಲಿ ಕಾಣಿಸಿಕೊಂಡಿರುವ ಬಹುತೇಕ ಕೊರೋನಾ ಸೋಂಕು ಪ್ರಕರಣಗಳಲ್ಲಿ ರೋಗಿಗಳಿಗೆ ರೋಗಲಕ್ಷಗಳೇ ಇಲ್ಲವೆನ್ನಲಾಗಿದೆ. ರೋಗ ಲಕ್ಷಣಗಳಿಲ್ಲದೇ ಇರುವ ಅದೆಷ್ಟೋ ಜನರು ನಮ್ಮ ಸುತ್ತಮುತ್ತಲೇ ಇರಬಹುದು ಎಂದು ಆತಂಕ ಮೂಡುವುದು ಸಹಜ. ಆದರೆ, ಜ್ವರ ಇರುವ ಸೋಂಕಿತ ವ್ಯಕ್ತಿಗಳು ಮಾತ್ರ ಸೋಂಕು ಹರಡಬಲ್ಲವರಾಗಿರುತ್ತಾರೆ. ಅಂದರೆ ನಾವು ಜ್ವರ ಲಕ್ಷಣ ಇದ್ದವರಿಂದ, ಜ್ವರ ಬಂದವರಿಂದ ದೂರವೇ ಉಳಿದುಕೊಳ್ಳಬಹುದು. ಬಸ್ಸು, ರೈಲು, ಕಚೇರಿ, ಪಾರ್ಕ್, ಮಳಿಗೆ, ಅಪಾರ್ಟ್ಮೆಂಟ್ ಹೀಗೆ ಸಾಧ್ಯವಾದಷ್ಟು ಸ್ಥಳಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನೂ ಟೆಂಪರೇಚರ್ ಪರೀಕ್ಷೆ ಮಾಡಲಾಗುತ್ತಿದು. ಇದು ಸರಿಯಾದ ಕ್ರಮ ಎಂಬುದು ಈ ಅಧ್ಯಯನದಿಂದ ತೋರುತ್ತದೆ. ಕೇಂದ್ರ ಆರೋಗ್ಯ ಇಲಾಖೆ ಕೂಡ ಈ ಮಾಹಿತಿಯನ್ನು ದೃಢಪಡಿಸಿದೆ ಎಂದು ಮನಿ ಕಂಟ್ರೋಲ್ ತಾಣದ ಸುದ್ದಿಯೊಂದರಲ್ಲಿ ವರದಿಯಾಗಿದೆ.

ಇದನ್ನೂ ಓದಿ: Planet Birth - ಮೊದಲ ಬಾರಿಗೆ ಗ್ರಹ ಜನಿಸುವ ದೃಶ್ಯ ಕಂಡ ಮಾನವ; ವಿಜ್ಞಾನಿಗಳು ರೋಮಾಂಚನ

ಇನ್ನು, ಈಗಾಗಲೇ ಸೋಂಕು ತಗುಲಿ ಗುಣಮುಖರಾಗಿ ಬಂದವರತ್ತ ಜನರು ಬಹಳ ಅನುಮಾನವಾಗಿ ನೋಡುತ್ತಾರೆ. ವೈರಸ್ ಅನ್ನು ಕಣ್ಣಿಂದ ನೋಡಿದಂತೆ ಬೆಚ್ಚಿಬೀಳುತ್ತಾರೆ. ರೋಗದಿಂದ ಗುಣಮುಖರಾದರೂ ಕಳಂಕ ಅಳಿಸುತ್ತಿಲ್ಲವೆಂದು ಆ ವ್ಯಕ್ತಿ ಭಾವಿಸುವಂತಾಗುತ್ತದೆ. ಆದರೆ, ಕೊರಿಯಾ ದೇಶದ ಅಧ್ಯಯನವೊಂದು ಒಳ್ಳೆಯ ವಿಚಾರವನ್ನ ಬೆಳಕಿಗೆ ತಂದಿದೆ. ಅದರ ಪ್ರಕಾರ, ಸೋಂಕಿನಿಂದ ಗುಣಮುಖಗೊಂಡವರಿಂದ ಯಾವತ್ತೂ ಕೂಡ ಬೇರೊಬ್ಬರಿಗೆ ಸೋಂಕು ಹರಡುವುದಿಲ್ಲವಂತೆ. ಅವರು ಎರಡನೇ ಬಾರಿ ಸೋಂಕಿತರಾದರೂ ಕೂಡ ಅವರಿಂದ ಇನ್ನೊಬ್ಬರಿಗೆ ಸೋಂಕು ತಗುಲುವಿದಲ್ಲವೆಂದು ಇವರು ಹೇಳುತ್ತಿದ್ದಾರೆ.

ಆದರೆ, ಇವೆರಡು ಅಧ್ಯಯನದ ಅಂಶದ ಬಗ್ಗೆ ವಿಶ್ವ ಸಂಸ್ಥೆಯಿಂದ ಇನ್ನೂ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಅಲ್ಲಿಯವರೆಗೂ ಎಚ್ಚರಿಕೆಯಲ್ಲೇ ಇರಬೇಕಾಗುತ್ತದೆ.

First published: May 23, 2020, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading