Covid-19 ಜತೆಗೆ Cytokine Storms ನಿಂದ ಬಳಲುತ್ತಿದ್ದ ನಮನ್​ ಮಹೇಶ್ವರಿ: ಆಸ್ಪತ್ರೆಯಲ್ಲಿ 155 ದಿನ ಕಳೆದು ಸಾವನ್ನೇ ಗೆದ್ದು ಬಂದ ಯುವಕ..!​

ನಮನ್ ಅವರು ಒಂದಲ್ಲ, ಎರಡು ಸೈಟೋಕಿನ್ ಸ್ಟೊರ್ಮ್ ಒಳಗಾಗಿದ್ದರು. ಅದರಿಂಧಾಗಿ ತೀವ್ರವಾಗಿ ಹಾನಿಗೊಳಗಾದ ಶ್ವಾಸಕೋಶದಲ್ಲಿ ಮೂರು ತೂತುಗಳು ಆಗಿದ್ದವು, ಅಪಾಯಕಾರಿ ಗಿಲೈನ್ ಬಾರೆ ಸಿಂಡ್ರೋಮ್ ಕೂಡ ಆಗಿತ್ತು. ಅವರು ನಾಲ್ಕು ತಿಂಗಳು ಐಸಿಯುನಲ್ಲಿ ಮತ್ತು ಸುಮಾರು ಮೂರು ತಿಂಗಳು ವೆಂಟಿಲೇಟರ್‌ನಲ್ಲಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾ ಸಾಂಕ್ರಮಿಕದಿಂದ ಜೀವ ಬಿಟ್ಟರು ಬಹಳ ಮಂದಿಯಾದರೆ, ಅದರಿಂದ ಗುಣಮುಖರಾದವರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಗುಣಮುಖರಾಗುವ ಹಾದಿಯಲ್ಲಿ ಇರುವವರು ಹಠಾತ್ತಾಗಿ ಜೀವ ಬಿಟ್ಟದ್ದೂ ಇದೆ. ಇನ್ನು ಕೆಲವು ಕೋವಿಡ್ ರೋಗಿಗಳು ಇನ್ನು ಬದುಕುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಿಂದ ದಿಢೀರನೇ ಗುಣಮುಖರಾದದ್ದೂ ಇದೆ. 26 ವರ್ಷ ವಯಸ್ಸಿನ ನಮನ್ ಮಹೇಶ್ವರಿ ಅವರದ್ದು ಅಂತದ್ದೇ ಕಥೆ. ಕೋರೋನಾದಿಂದ ಗಂಭೀರವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಪವಾಡಸದೃಶ ರೀತಿಯಲ್ಲಿ ಗುಣಮುಖರಾಗಿದ್ದಾರೆ. ನಮನ್​ ಮಹೇಶ್ವರಿ ಅವರು ಇಡೀ ವರ್ಷದ ಅರ್ಧದಷ್ಟು ಆಸ್ಪತ್ರೆಯಲ್ಲಿಯೇ ಕಳೆದಿದ್ದಾರೆ. ನಿಖರವಾಗಿ ಹೇಳುವುದಾದರೆ ಅವರು ಆಸ್ಪತ್ರೆಯ ಕದ ತಟ್ಟಿ ಭಾನುವಾರಕ್ಕೆ 155 ದಿನಗಳಾಗುತ್ತವೆ. ಮಾರಣಾಂತಿಕ ಮಹಾಮಾರಿ ರೋಗವನ್ನು ಗೆದ್ದು ಅವರು ಈಗ ಗುಣಮುಖರಾಗಿದ್ದಾರೆ.

ವೃತ್ತಿಯಲ್ಲಿ ಚಾರ್ಟೆಡ್ ಅಕೌಟೆಂಟ್ ಆಗಿರುವ ರಾಜಸ್ಥಾನ ಯುವಕ ನಮನ್​ ಮಹೇಶ್ವರಿ ಬದುಕುಳಿಯಬೇಕೆಂಬ ಮಹದಾಸೆ ಮತ್ತು ಬದ್ಧತೆಯಿಂದಾಗಿ ಕೋವಿಡ್ -19 ಗೆಲ್ಲುವಲ್ಲಿ ಸಫಲರಾಗಿದ್ದು, ಇದೀಗ ಮಾತನಾಡಲು ಮತ್ತು ನಡೆಯಲು ಆರಂಭಿಸಿದ್ದಾರೆ. ಸದ್ಯದಲ್ಲಿಯೇ ಅವರು ಡಿಸ್ಚಾರ್ಜ್ ಆಗಿ, ಮನೆಗೆ ಮರಳಲಿದ್ದಾರೆ. ಅವರು ಪಾರಾಗಿರುವುದು ಒಂದಲ್ಲ , ಎರಡು ಸೈಟೋಕಿನ್ ಸ್ಟೊರ್ಮ್‍ಗಳಿಂದ. ಅದರಿಂದ ತೀವ್ರವಾಗಿ ಹಾನಿಗೊಳಗಾದ ಶ್ವಾಸಕೋಶದಲ್ಲಿ ಮೂರು ತೂತುಗಳು ಆಗಿದ್ದವು. ಅಪಾಯಕಾರಿ ಗಿಲೈನ್ ಬಾರೆ ಸಿಂಡ್ರೋಮ್ ಕೂಡ ಆಗಿತ್ತು. ಅವರು ನಾಲ್ಕು ತಿಂಗಳು ಐಸಿಯುನಲ್ಲಿ ಮತ್ತು ಸುಮಾರು ಮೂರು ತಿಂಗಳು ವೆಂಟಿಲೇಟರ್​ನಲ್ಲಿದ್ದರು.

covid -19, Guillain-Barré syndrome, Ahmedabad, Naman Maheshwari beats cytokine stormsಕೋವಿಡ್ -19, ಗಿಲೈನ್ ಬಾರೆ ಸಿಂಡ್ರೋಮ್, ಅಹಮದಾಬಾದ್, Corona Patient Naman Maheshwari recovered from cytokine storms
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಮನ್ ಮಹೇಶ್ವರಿ


ಇದೆಲ್ಲಾ ಒಂದು ಮಾಮೂಲಿ ಮೈಕೈ ನೋವು ಮತ್ತು ಜ್ವರದ ಮೂಲಕ ಆರಂಭವಾಗಿದ್ದನ್ನು ಅವರ ತಾಯಿ ಸುನೀತಾ ನೆನೆಸಿಕೊಳ್ಳುತ್ತಾರೆ. “ ಅವನ ಅಜ್ಜಿಯ ಬಳಿಕ, ಏಪ್ರಿಲ್ 23 ರಂದು ನಮನ್‍ಗೆ ಕೊರೋನಾ ಪಾಸಿಟಿವ್ ಇರುವುದು ತಿಳಿಯಿತು. ಅವನಿಗೆ ಉಸಿರಾಡುವುದು ಕಷ್ಟವಾಯಿತು ಮತ್ತು ನಾವು ಅವನನ್ನು ಉದಯಪುರದ ಒಂದು ಆಸ್ಪತ್ರೆಗೆ ದಾಖಲು ಮಾಡಬೇಕಾಯಿತು. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಮೊದಲೇ ಅವನನ್ನು ಅಹಮದಾಬಾದ್‍ಗೆ ಕರೆದುಕೊಂಡು ಬಂದೆವು” ಎನ್ನುತ್ತಾರೆ ಏಪ್ರಿಲ್ 28 ರಿಂದ ತನ್ನ ಒಬ್ಬನೇ ಮಗನೊಂದಿಗೆ ಎಪಿಕ್ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿರುವ ತಾಯಿ ಸುನೀತಾ.

ಇದನ್ನೂ ಓದಿ: Explained: ಕೋವಿಡ್‌ನಿಂದ ಚೇತರಿಸಿಕೊಂಡವರು ಹಲ್ಲು-ವಸಡುಗಳ ಬಗ್ಗೆ ಏಕೆ ಕಾಳಜಿ ವಹಿಸಬೇಕು ಗೊತ್ತಾ..?

ಮೇ ತಿಂಗಳ ಆರಂಭದಲ್ಲಿ, ಸೈಟೋಕಿನ್ ಸ್ಟೊರ್ಮ್ ಆಯಿತು. ಅದನ್ನು ಟೋಸಿಲಿಜುಮಾಬ್‍ನಿಂದ ನಿರ್ವಹಿಲಾಯಿತು. ಮುಂದಿನ ತಿಂಗಳು ಅವರು ಮತ್ತೆ ಭಯಾನಕ ಉರಿಯೂತದ ಪ್ರತಿಕ್ರಿಯೆಯನ್ನು ಅನುಭವಿಸಬೇಕಾಯಿತು. ಆದರೆ ಅವರು ಗುಣಮುಖರಾದರು.

“ ಆತ, ಏನೆಲ್ಲ ತೊಂದರೆಗಳು ಆಗಬಹುದು ಎಂಬುದರ ಕುರಿತ ಒಂದು ಪುಸ್ತಕವನ್ನೇ ಬರೆಯಬಹುದು. ಫಂಗ್ ಮತ್ತು ಬ್ಯಾಕ್ಟಿರಿಯಲ್ ಸೋಂಕು ಸೇರಿದಂತೆ ಅವರು ಅವರು ಅನೇಕ ಎರಡನೇ ಸೋಂಕುಗಳಿಗೆ ಒಳಗಾಗಿದ್ದರು. ಅವರಿಗೆ ಮೂರು ಬಾರಿ ಬರೋಟ್ರೋಮಾ ಅಥವಾ ಶ್ವಾಸಕೋಶದ ಛಿದ್ರ ಉಂಟಾಗಿತ್ತು. ಅವರು ತಮ್ಮ ಶ್ವಾಸಕೋಶದ ಅತ್ಯಧಿಕ ಹಾನಿಗೊಳಗಾದ ಬಾಹ್ಯ ಪದರದ ಭಾಗವನ್ನು ತೆಗೆಯಲು ಲ್ಯಾಪ್ರೋಸ್ಕೋಪಿಕ್ ಚಿಕಿತ್ಸೆಗೂ ಒಳಗಾಗಿದ್ದರು” ಎನ್ನುತ್ತಾರೆ ಎಪಿಕ್ ಆಸ್ಪತ್ರೆಯ ಪಲ್ಮನೋಲಜಿಸ್ಟ್ ಮತ್ತು ಕ್ರಿಟಿಕಲ್ ಕೇರ್ ತಜ್ಞ ಡಾ. ಅಜಯ್ ಜೈನ್.

“ಆಗಸ್ಟ್ ಸುಮಾರಿಗೆ ಅವರು, ಪ್ರತಿನಿರೋಧಕ ವ್ಯವಸ್ಥೆಯು ನರ ವ್ಯವಸ್ಥೆಗೆ ಆಕ್ರಮಣ ಮಾಡುವ ಮತ್ತು ಸ್ನಾಯುಗಳನ್ನು ದುರ್ಬಲ ಮತ್ತು ಜಡಗೊಳಿಸುವ ಗಿಲೈನ್ ಬಾರ್ ಸಿಂಡ್ರೊಮ್‍ಗೂ ಒಳಗಾಗತೊಡಗಿದ್ದರು. ನಮನ್ ಸುಮಾರು 4 ತಿಂಗಳು ಐಸಿಯುನಲ್ಲಿ ಕಳೆದರು. ಮೂರು ತಿಂಗಳು ವೆಂಟಿಲೇಟರ್‌ನಲ್ಲಿ ಇದ್ದರು. ಅವರ ಈ ಪರಿಸ್ಥಿತಿಯಿಂದಾಗಿ, ದ್ರವ ಆಹಾರ ನೀಡಲು ಗಂಟಲಿನಿಂದ ಹೊಟ್ಟೆಗೆ ಒಂದು ಟ್ಯೂಬನ್ನು ಅಳವಡಿಸಲಾಗಿತ್ತು. ಅವರಿಗೆ ಇನ್ನೂ ಆಮ್ಲಜನಕದ ಅಗತ್ಯ ಇದೆ. ಆದರೂ ಈಗ ಅವರು ತಾವಾಗಿಯೇ ನಡೆದಾಡಬಲ್ಲರು, ಊಟ ಮಾಡಬಲ್ಲರು ಮತ್ತು ನಿರ್ದಿಷ್ಟ ಸಮಯದ ವರೆಗೆ ಮಾತನಾಡಬಲ್ಲರು. ನಮನ್‍ ಅವರ ಈ ಚೇತರಿಕೆಗೆ ಕಾರಣ ಅವರ ಕುಟುಂಬದ ಬೆಂಬಲ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: Pooja Hegde: ಕೋವಿಡ್​ನಿಂದ ಗುಣಮುಖರಾದ ನಂತರ ಮೇಕಪ್​ ಇಲ್ಲದ ಫೋಟೋ ಶೇರ್​ ಮಾಡಿದ ಪೂಜಾ ಹೆಗ್ಡೆ

“ಇದು ಅತ್ಯಂತ ಯಾತನಾಮಯ ಹಾಗೂ ಕಷ್ಟಕರ ಪಯಣವಾಗಿತ್ತು. ಆದರೆ ಆರಂಭದಿಂದಲೇ ದೀರ್ಘ ಕಾಲ ಆಸ್ಪತ್ರೆಯಲ್ಲಿ ಇರಲು ನಾನು ಸ್ವಯಂ ಸಿದ್ಧನಾಗಿದ್ದೆ. ನಾನು ದಿನಗಣನೆ ಮಾಡಲಿಲ್ಲ ಮತ್ತು ನನ್ನ ಪರಿಸ್ಥಿತಿಯನ್ನು ದೂರಲಿಲ್ಲ. ನನಗೆ ವೈದ್ಯರು ಮತ್ತು ದೇವರಲ್ಲಿ ನಂಬಿಕೆ ಇತ್ತು. ಈ ಪ್ರಕರಣ ಏಪ್ರಿಲ್‍ನಿಂದಲೂ ಜೊತೆಗಿದ್ದು ನನ್ನ ಚೇತರಿಕೆಗೆ ಪ್ರಾರ್ಥಿಸುತ್ತಿದ್ದ ಹೆತ್ತವರಿಗೆ ನಾನು ಇನ್ನಷ್ಟು ಹತ್ತಿರ ಆಗುವಂತೆ ಮಾಡಿತು” ಎನ್ನುತ್ತಾರೆ ನಮನ್.

“ನಾನು ಎಲ್ಲರಿಗೂ ನೀಡಲು ಬಯಸುವ ಸಂದೇಶ ಒಂದೇ- ಕೋವಿಡನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಸಂರಕ್ಷಣೆ ವಹಿಸಿ. ಕೋವಿಡ್ ಅಲ್ಲದಿದ್ದರೂ, ಕೆಲವು ವರ್ಷಗಳ ಬಳಿಕ ಇನ್ನೇನಾದರೂ ಬರಬಹುದು. ಸ್ವಚ್ಚತೆಯ ನಿಯಮಗಳನ್ನು ಪಾಲಿಸಿ ಮತ್ತು ವ್ಯಾಯಾಮ ಮಾಡಿ” ಎನ್ನುತ್ತಾರೆ ನಮನ್.
Published by:Anitha E
First published: