• ಹೋಂ
  • »
  • ನ್ಯೂಸ್
  • »
  • Corona
  • »
  • ಕೊರೋನಾ ಭೀತಿ; ಇಂದಿನ ಮಂತ್ರಾಲಯ ಬಂದ್, 11ವರ್ಷದ ಬಳಿಕ ರಾಯರ ಭಕ್ತರಿಗಿಲ್ಲ ದರ್ಶನ ಭಾಗ್ಯ

ಕೊರೋನಾ ಭೀತಿ; ಇಂದಿನ ಮಂತ್ರಾಲಯ ಬಂದ್, 11ವರ್ಷದ ಬಳಿಕ ರಾಯರ ಭಕ್ತರಿಗಿಲ್ಲ ದರ್ಶನ ಭಾಗ್ಯ

ಮಂತ್ರಾಲಯ.

ಮಂತ್ರಾಲಯ.

ಈ ಹಿಂದೆ 2009 ಅಕ್ಟೋಬರ್ ತಿಂಗಳಲ್ಲಿ ಪ್ರವಾಹದಿಂದ ರಾಯರ ದರ್ಶನ ಬಂದ್ ಆಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಮಂತ್ರಾಲಯ ಬಂದ್ ಆಗಿದೆ. ಕೊರೋನಾ ವೈರಸ್‌ ಎಲ್ಲೆಡೆ ಮಿಂಚಿನ ವೇಗದಲ್ಲಿ ಹರಡುತ್ತಿದ್ದು ಜನ ಜೀವಕ್ಕೆ ಎರವಾಗುತ್ತಿದೆ. ಇದೇ ಕಾರಣಕ್ಕೆ ಮಂತ್ರಾಲಯವನ್ನು ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.

ಮುಂದೆ ಓದಿ ...
  • Share this:

ರಾಯಚೂರು (ಮಾರ್ಚ್‌ 19); ಮಾರಣಾಂತಿಕ ಕೊರೋನಾ ವೈರಸ್‌ ಹರಡುವ ಭೀತಿಯಿಂದ ರಾಜ್ಯದ ಪ್ರಸಿದ್ಧ ಮಂತ್ರಾಲಯ ದೇವಾಲಯವನ್ನು ಇಂದಿನಿಂದ ಅನಿರ್ದಿಷ್ಟಾವಧಿಯ ವರೆಗೆ ಮುಚ್ಚಲು ನಿರ್ಧರಿಸಲಾಗಿದೆ. ಹೀಗಾಗಿ 11 ವರ್ಷದ ಬಳಿಕ ರಾಯರ ಭಕ್ತರಿಗೆ ದರ್ಶನ ಭಾಗ್ಯ ಇಲ್ಲದಂತಾಗಿದೆ.


ಈ ಹಿಂದೆ 2009 ಅಕ್ಟೋಬರ್ ತಿಂಗಳಲ್ಲಿ ಪ್ರವಾಹದಿಂದ ರಾಯರ ದರ್ಶನ ಬಂದ್ ಆಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಮಂತ್ರಾಲಯ ಬಂದ್ ಆಗಿದೆ. ಕೊರೋನಾ ವೈರಸ್‌ ಎಲ್ಲೆಡೆ ಮಿಂಚಿನ ವೇಗದಲ್ಲಿ ಹರಡುತ್ತಿದ್ದು ಜನ ಜೀವಕ್ಕೆ ಎರವಾಗುತ್ತಿದೆ. ಇದೇ ಕಾರಣಕ್ಕೆ ಮಂತ್ರಾಲಯವನ್ನು ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಜನರಲ್ಲಿ ಮನವಿ ಮಾಡಿರುವ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು, "ರಾಷ್ಟ್ರದೆಲ್ಲೆಡೆ ಕರೊನಾ ಭೀತಿ ಮುಗಿಯುವರೆಗೂ ಮಂತ್ರಾಲಯಕ್ಕೆ ಬರಬೇಡಿ" ಎಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ. ಅಂತ ಶ್ರೀಮಠದ ಸ್ವಾಮೀಜಿ ಮನವಿ


ವಿಶ್ವದಾದ್ಯಂತ ಈಗಾಗಲೇ 7,000 ಕ್ಕೂ ಅಧಿಕ ಜನರ ಜೀವಕ್ಕೆ ಎರವಾಗಿರುವ ಕೊರೋನಾ ಭಾರತದಲ್ಲೂ ಈವರೆಗೆ 3 ಜನ ಬಲಿಯಾಗಿದ್ದಾರೆ. 150ಕ್ಕೂ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೂ ಕಲಬುರ್ಗಿಯಲ್ಲಿ ಅತಿಹೆಚ್ಚು ಸೋಂಕಿತರು ಕಂಡು ಬಂದಿರುವುದು ರಾಜ್ಯ ಸರ್ಕಾರದ ತಲೆನೋವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ : ಕೊರೋನಾ: ಇಂದಿನಿಂದ ಮಂಗಳೂರು-ಮಡಗಾಂವ್ ರೈಲು ಜತೆಗೆ ಮಂಗಳೂರು-ವಿಜಯಪುರ ಟ್ರೈನ್​​ ಕೂಡ ರದ್ದು

Published by:MAshok Kumar
First published: