HOME » NEWS » Coronavirus-latest-news » CORONA OUT OF CONTROL IN KERALA THE NUMBER OF PEOPLE INFECTED WITH THE DISEASE IS INCREASED MAK

ಕೇರಳದಲ್ಲಿ ನಿಯಂತ್ರಣಕ್ಕೆ ಸಿಗದ ಕೊರೋನಾ; ಮತ್ತೆ 21 ಜನರಿಗೆ ತಗುಲಿದ ಸೋಂಕು, ಏರುತ್ತಲೇ ಇದೆ ರೋಗ ಪೀಡಿತರ ಸಂಖ್ಯೆ!

ಕೇರಳದಲ್ಲಿಈವರೆಗೆ 286 ಜನರಿಗೆ ರೋಗ ದೃಡಪಡಿಸಲಾಗಿದೆ. ಪ್ರಸ್ತುತ 256 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,65,934 ಜನರು ವೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,65,291 ಮಂದಿ ಮನೆಗಳಲ್ಲಿ ಮತ್ತು 643 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.

MAshok Kumar | news18-kannada
Updated:April 3, 2020, 7:59 AM IST
ಕೇರಳದಲ್ಲಿ ನಿಯಂತ್ರಣಕ್ಕೆ ಸಿಗದ ಕೊರೋನಾ; ಮತ್ತೆ 21 ಜನರಿಗೆ ತಗುಲಿದ ಸೋಂಕು, ಏರುತ್ತಲೇ ಇದೆ ರೋಗ ಪೀಡಿತರ ಸಂಖ್ಯೆ!
ಪ್ರಾತಿನಿಧಿಕ ಚಿತ್ರ.
  • Share this:
ಕೊಚ್ಚಿ (ಏಪ್ರಿಲ್ 03); ಮಾರಣಾಂತಿಕ ಕೋರೋನಾ ವೈರಸ್ ನೆರೆಯ ಕೇರಳ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಸಹ ರಾಜ್ಯದಲ್ಲಿ ಗುರುವಾರ ಮತ್ತೆ 21 ಜನರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಕಾಸರ್‌ಗೋಡು ಜಿಲ್ಲೆಯಿಂದ 8 ಜನರಿಗೆ, ಇಡುಕ್ಕಿ ಜಿಲ್ಲೆಯಲ್ಲಿ 5, ಕೊಲ್ಲಂ ಜಿಲ್ಲೆಯಲ್ಲಿ 2 ಮತ್ತು ತಿರುವನಂತಪುರಂ, ಪಥನಮತ್ತಿಟ್ಟ, ತ್ರಿಶೂರ್, ಮಲಪ್ಪುರಂ, ಕೋಳಿಕೋಡ್ ಮತ್ತು ಕಣ್ಣೂರು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಡಪಡಿಸಲಾಗಿದೆ. ಈ ಪೈಕಿ 9 ಮಂದಿ ವಿದೇಶದಿಂದ ರಾಜ್ಯಕ್ಕೆ ಆಗಮಿಸಿದ್ದವರಾಗಿದ್ದರೆ, ಇಬ್ಬರು ನಿಜಾಮುದ್ದೀನ್ ನಿಂದ ಮತ್ತು ಒಬ್ಬರು ಗುಜರಾತ್ ನಿಂದ ಬಂದವರು. ಉಳಿದ ಒಂಬತ್ತು ಜನ ಇತರರ ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಕೇರಳದಲ್ಲಿಈವರೆಗೆ 286 ಜನರಿಗೆ ರೋಗ ದೃಡಪಡಿಸಲಾಗಿದೆ. ಪ್ರಸ್ತುತ 256 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,65,934 ಜನರು ವೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,65,291 ಮಂದಿ ಮನೆಗಳಲ್ಲಿ ಮತ್ತು 643 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.

ಗುರುವಾರ ಹೊಸದಾಗಿ 145 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ರೋಗಲಕ್ಷಣಗಳನ್ನು ಹೊಂದಿರುವ 8,456 ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ ಪರೀಕ್ಷಿಸಿದ 7,622 ಮಾದರಿಗಳ ಫಲಿತಾಂಶ ನೆಗೆಟಿವ್ ಆಗಿದೆ. ಆದರೆ, ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವೆ 28 ಜನ ಚಿಕಿತ್ಸೆಗೆ ಒಳಗಾಗಿ ರೋಗದಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರೆ, ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ : ಕೊರೋನಾ ಬಿಕ್ಕಟ್ಟು; ಇಂದು 9 ಗಂಟೆಗೆ ದೇಶದ ಜನರಿಗಾಗಿ ವಿಡಿಯೋ ಸಂದೇಶ ಹಂಚಿಕೊಳ್ಳಲಿರುವ ಪ್ರಧಾನಿ ಮೋದಿ
Youtube Video
First published: April 3, 2020, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories