Koppal: ಒಂದೇ ವಾರದಲ್ಲಿ 5 ರಿಂದ 155ಕ್ಕೇರಿದ ಸೋಂಕಿತರ ಸಂಖ್ಯೆ ಏರಿಕೆ; ನವೋದಯ ವಿದ್ಯಾಲಯಲ್ಲಿ ಕೊರೊನಾ ಸ್ಫೋಟ

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವಾರಂತ್ಯದ ವೇಳೆಗೆ ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 5 ಇತ್ತು. ಈ ವಾರಂತ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಸೋಂಕಿತರ (Corona Active Cases) ಸಂಖ್ಯೆ 155 ಕ್ಕೆ ಏರಿಕೆಯಾಗಿದೆ.

ಕೊರೊನಾ ಸ್ಫೋಟವಾಗಿರುವ ನವೋದಯ ವಿದ್ಯಾಲಯ

ಕೊರೊನಾ ಸ್ಫೋಟವಾಗಿರುವ ನವೋದಯ ವಿದ್ಯಾಲಯ

  • Share this:
ಕೊಪ್ಪಳ: ಕೊರೊನಾ ಮೊದಲು ಹಾಗೂ ಎರಡನೆಯ ಅಲೆಯು (Corona Wave) ಕೊಪ್ಪಳ (Koppal) ಜಿಲ್ಲೆಗೆ ಸ್ವಲ್ಪ ತಡವಾಗಿ ಎಂಟ್ರಿ ಕೊಟ್ಟರೂ ನಂತರ ಅಬ್ಬರಕ್ಕೆ ಇಡೀ ಜಿಲ್ಲೆ ನಲುಗುವಂತೆ ಮಾಡಿತ್ತು ಇದೇ ರೀತಿ ರಾಜ್ಯದಲ್ಲಿ ಕೊರೊನಾ ಮೂರನೆಯ ಅಲೆಯ (Corona Third Wave) ಅಬ್ಬರ ಆರಂಭವಾಗಿದ್ದರೂ, ಅತ್ಯಂತ ಕಡಿಮೆ ಇದ್ದ ಸೋಂಕಿತರ ಪ್ರಕರಣಗಳು ಕಳೆದೊಂದು ವಾರದಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ.  ಅದರಲ್ಲಿಯೂ ಕುಕನೂರಿನಲ್ಲಿ ನವೋದಯ ವಿದ್ಯಾಲಯದಲ್ಲಿ (Navodaya Vidyalaya) ಕೊರೊನಾ ಸ್ಫೋಟವಾಗಿದೆ. ಜಿಲ್ಲೆಯಲ್ಲಿ ಕೊರೊನಾ ಅಬ್ಬರಿಸುವ ಸಾಧ್ಯತೆ ಇದೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಕೈಗೊಳ್ಳಬೇಕಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವಾರಂತ್ಯದ ವೇಳೆಗೆ ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 5 ಇತ್ತು. ಈ ವಾರಂತ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಸೋಂಕಿತರ (Corona Active Cases) ಸಂಖ್ಯೆ 155 ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 150 ಕ್ಕೇರಿಕೆಯಾಗಿದೆ.

ಈ ಮೊದಲು ಒಂದಂಕಿಗಿಂತ ಕಡಿಮೆ ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಈಗ ಎರಡಂಕಿಗೆ ಏರಿಕೆಯಾಗಿದೆ. ಈ ಮಧ್ಯೆ ಈಗ ಜಿಲ್ಲೆಯ ವಿವಿದೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದ್ದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಇಲ್ಲಿಯವರೆಗೂ 65,8817 ಜನರ ಪರೀಕ್ಷೆ ಮಾಡಲಾಗಿದ್ದು ಶುಕ್ರವಾರ ವೇಳೆಗೆ 34,539 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದನ್ನೂ ಓದಿ:  ಎರಡನೇ ವಾರದ Weekend Curfew ; ಬೆಂಗಳೂರಿನಲ್ಲಿ ಮಾರುಕಟ್ಟೆ ಸ್ಥಳಾಂತರದ ಮಾಹಿತಿ ಇಲ್ಲಿದೆ

ಇಲ್ಲಿಯವರೆಗೆ ಒಟ್ಟು 33823 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, 551 ಜನರು ಸಾವನ್ನಪ್ಪಿದ್ದಾರೆ. ಈಗ ಜಿಲ್ಲೆಯಲ್ಲಿ 155 ಸಕ್ರಿಯ ಸೋಂಕಿತರ ಪ್ರಕರಣಗಳಿವೆ. ಆದರೆ ಈಗ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿರುವುದು ಸಮಾಧಾನ ತಂದಿದೆ.

ಕೊರೊನಾ ಪರೀಕ್ಷೆಗೆ ಜನರ ಹಿಂದೇಟು

155 ರಲ್ಲಿ ಒಬ್ಬರು ಮನೆಯಲ್ಲಿ ವೈದ್ಯಕೀಯ ಸೇವೆ ಪಡೆದುಕೊಳ್ಳುತ್ತಿದ್ದಾರೆ, 10 ಜನ ಆಸ್ಪತ್ರೆಗೆ ದಾಖಲಾಗಿದ್ದು, 144 ಜನ ಮನೆಯಲ್ಲಿ ಐಸೋಲೆಷನ್ ಆಗಿದ್ದಾರೆ. ಸಾಕಷ್ಟು ಜನ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೆ, ಅವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದು ಔಷಧಿ ಅಂಗಡಿಗಳಲ್ಲಿ ಮಾತ್ರೆಗಳನ್ನು ತೆಗೆದುಕೊಂಡು ಗುಣಮುಖರಾಗುತ್ತಿದ್ದಾರೆ. ಇಂಥವರ ಸಹ ಕೊರೊನಾ ಸೋಂಕು ಹರಡಲು ಕಾರಣವಾಗುತ್ತಾರೆ ಎನ್ನಲಾಗಿದೆ.

ಘಟ್ಟಿರಡ್ಡಿಹಾಳ ಗ್ರಾಮದ 15 ಜನಕ್ಕೆ ಕೊರೊನಾ ಸೋಂಕು

ಕೊಪ್ಪಳ ಜಿಲ್ಲೆಯ ಕಳೆದ ವಾರ ಘಟ್ಟಿರಡ್ಡಿಹಾಳ ಎಂಬ ಗ್ರಾಮದಲ್ಲಿ ಸುಮಾರು 15 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಗ್ರಾಮದ ವಿದ್ಯಾರ್ಥಿಯೊಬ್ಬರು ಗದಗ ಜಿಲ್ಲೆಯ ಮುಂಡರಗಿಯಲ್ಲಿ ಪರೀಕ್ಷೆಗೆ ಹೋಗಿ ಬಂದ ನಂತರ ಸೋಂಕು ಕಾಣಿಸಿಕೊಂಡಿದೆ. ಈ ಮಧ್ಯೆ ಗ್ರಾಮದಿಂದ ಮುಂಡರಗಿ ಖಾಸಗಿ ಶಾಲೆಗೆ ಹೋಗುತ್ತಿದ್ದ ಇಬ್ಬರು ಶಾಲಾ ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಇಡೀ ಗ್ರಾಮ ಹಾಗು ಸುತ್ತಲಿನ ಗ್ರಾಮದಲ್ಲಿ ಭಯ ಆವರಿಸಿದೆ.

ಇದನ್ನೂ ಓದಿ:  Health Tips: ಪ್ರತಿನಿತ್ಯ ಹೀಗೆ ಮಾಡಿದರೆ ಕೊರೋನಾ ನಿಮ್ಮ ಬಳಿಯೂ ಸುಳಿಯಲ್ಲ..!

ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಫೋಟ

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿರುವ ನವೋದಯ ವಿದ್ಯಾಲಯದಲ್ಲಿ ಕೊರೊನಾ ಸ್ಪೋಟವಾಗಿದೆ, ಹೊರರಾಜ್ಯದಿಂದ ಓದಲುವಿದ್ಯಾರ್ಥಿಗಳಲ್ಲಿ ಇಲ್ಲಿ ಬಂದಿದ್ದಾರೆ, 550 ವಿದ್ಯಾರ್ಥಿಗಳು 68 ಜನ ಶಿಕ್ಷಕರಿದ್ದಾರೆ, ಅವರೆಲ್ಲ ಗಂಟಲದ್ರವ ಪರೀಕ್ಷೆ ಮಾಡಲಾಗಿದ್ದು ಅವರಲ್ಲಿ ಜನವರಿ 12 ರಲ್ಲಿ 3 ಜನರಿಗೆ, ಜನವರಿ 13 ರಂದು 10 ಜನರು ಹಾಗು ಜನವರಿ 14 ರಂದು 20 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಲ್ಲಿ 10 ಜನರನ್ನು ತಳಕಲ್ಲಿನ ಕೊವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ.

ಕೊರೊನಾ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಜ್ಜು

ಕೊರೊನಾ ಮೂರನೆಯ ಅಲೆ ಏದುರಿಸಲು ಕೊಪ್ಪಳ ಜಿಲ್ಲಾಡಳಿತ ಸಜ್ಜಾಗಿದ್ದು 1,200 ಆಮ್ಲಜನಕಯುಕ್ತ ಹಾಸಿಗೆ ಆಸ್ಪತ್ರೆ, 163 ಸರಕಾರಿ ಆಸ್ಪತ್ರೆಗಲ್ಲಿ ವೆಂಟಿಲೇಟರ್, ಖಾಸಗಿಯಾಗಿಯೂ ಹಾಸಿಗೆ ಹಾಗು ವೆಂಟಿಲೇಟರ್ ಸಿದ್ದವಾಗಿಟ್ಟಿದ್ದಾರೆ. ಆಸ್ಪತ್ರೆಯಲ್ಲಿ 120 ಮಕ್ಕಳಿಗಾಗಿ ಆಮ್ಲಜನಕ ಹಾಗು ವೆಂಟಿಲೇಟರ್ ಯುಕ್ತ ಹಾಸಿಗೆ ಸಿದ್ದಪಡಿಸಿಕೊಂಡಿದ್ದಾರೆ.

ಈ ಮಧ್ಯೆ ಕೊಪ್ಪಳ ಜಿಲ್ಲೆಯಿಂದಲೇ ರಾಜ್ಯದ ವಿವಿಧಡೆ ಖಾಸಗಿ ಕಂಪನಿಗಳಿಂದ ಆಮ್ಲಜನಕ ಉತ್ಪಾದಿಸಿ ಕಳುಹಿಸಲಾಗುತ್ತಿದೆ, ಈ ಮಧ್ಯೆ ಜಿಲ್ಲಾಸ್ಪತ್ರೆ ಹಾಗು ತಾಲೂಕಾಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರಂಭಿಸಲಾಗಿದೆ.

ರಾಜ್ಯದಲ್ಲಿ ವಾರಂತ್ಯ ಕರ್ಫ್ಯೂ ಆರಂಭವಾಗಿದೆ, ಆದರೂ ಕೊಪ್ಪಳದಲ್ಲಿ ಕಾಟಾಚಾರಕ್ಕೆ ಎಂಬಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡು ಕೊರೊನಾವನ್ನು ಕಟ್ಟಿ ಹಾಕಬೇಕಿದೆ.
Published by:Mahmadrafik K
First published: