ಕಲಬುರ್ಗಿಯಲ್ಲಿ ಮತ್ತೊಂದು ಪಾಸಿಟಿವ್ - ನಿಜಾಮುದ್ದೀನ್ ಸಭೆಯಲ್ಲಿ ಭಾಗಿಯಾದವರಿಂದ ಹೆಚ್ಚಿದ ಆತಂಕ

ಧಾರ್ಮಿಕ ಸಭೆಯಲ್ಲಿ ಭಾಗಿಯಾದವರನ್ನು ಪತ್ತೆ ಹೆಚ್ಚಿರುವ ಜಿಲ್ಲಾಡಳಿತ. ಜಿಲ್ಲೆಯಿಂದ ಒಟ್ಟು 22 ಜನ ಧಾರ್ಮಿಕ ಸಭೆಗೆ ಹೋಗಿದ್ದರು ಎನ್ನಲಾಗಿದ್ದು, ಜಿಲ್ಲಾಡಳಿತ ಈವರೆಗೆ ಒಟ್ಟು 19 ಜನರನ್ನು ಗುರುತು ಮಾಡಿದೆ.

news18-kannada
Updated:April 1, 2020, 4:37 PM IST
ಕಲಬುರ್ಗಿಯಲ್ಲಿ ಮತ್ತೊಂದು ಪಾಸಿಟಿವ್ - ನಿಜಾಮುದ್ದೀನ್ ಸಭೆಯಲ್ಲಿ ಭಾಗಿಯಾದವರಿಂದ ಹೆಚ್ಚಿದ ಆತಂಕ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಏ.01): ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಬಂದಿದ್ದು, ಜನರ ಆತಂಕವನ್ನು ಹೆಚ್ಚಿಸಿದೆ. ಮೊನ್ನೆಯಷ್ಟೇ ಕೊರೋನಾ ಸೋಂಕು ಪೀಡಿತ ಮಹಿಳೆಯ ವರದಿ ನೆಗೆಟಿವ್ ಬಂದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಅದರ ಬೆನ್ನಲ್ಲೇ  ಮತ್ತೊಂದು ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯರ ಪತ್ನಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.

ಕೊರೋನಾ ಸೋಂಕು ದೃಢಪಟ್ಟ ನಂತರ ಚಿಕಿತ್ಸೆ ಪಡೆಯುತ್ತಿರುವ ವೈದ್ಯ, ಗುಣಮುಖ ಹೊಂದುತ್ತಿದ್ದಾನೆ. ಇಂತಹ ಸಂದರ್ಭದಲ್ಲಿಯೇ ಆತನ ಪತ್ನಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದು ಹೀಗಿರಬೇಕಾದರೆ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದವರು ಮತ್ತಷ್ಟು ಆತಂಕ ಸೃಷ್ಟಿಸಿದ್ದಾರೆ.

ಮಾರ್ಚ್ 13 ರಿಂದ 15ರವರೆಗೆ ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆ. ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಕಲಬುರ್ಗಿಯ ಕೆಲವರು ಮಾರ್ಚ್ 18 ರಂದು ನಗರಕ್ಕೆ ವಾಪಸ್ಸಾಗಿದ್ದರು. ಧಾರ್ಮಿಕ ಸಭೆಯಲ್ಲಿ ಭಾಗಿಯಾದವರನ್ನು ಪತ್ತೆ ಹೆಚ್ಚಿರುವ ಜಿಲ್ಲಾಡಳಿತ. ಜಿಲ್ಲೆಯಿಂದ ಒಟ್ಟು 22 ಜನ ಧಾರ್ಮಿಕ ಸಭೆಗೆ ಹೋಗಿದ್ದರು ಎನ್ನಲಾಗಿದ್ದು, ಜಿಲ್ಲಾಡಳಿತ ಈವರೆಗೆ ಒಟ್ಟು 19 ಜನರನ್ನು ಗುರುತು ಮಾಡಿದೆ.

ಕಲಬುರ್ಗಿ, ಆಳಂದ, ಶಹಾಬಾದ್, ಅಫಜಲಪುರ ಮತ್ತಿತರ ಕಡೆಗಳಿಂದ ಹೋಗಿ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳು. ಅವರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಗುರಿಪಡಿಸುತ್ತಿರುವ ಆರೋಗ್ಯ ಇಲಾಖೆ. ಒಬ್ಬೊಬ್ಬರನ್ನಾಗಿ ಇ.ಎಸ್.ಐ. ಕೊರೋನಾ ವಾರ್ಡ್ ಗೆ ದಾಖಲಿಸುತ್ತಿರುವ ಸಿಬ್ಬಂದಿ. ಕ್ವಾರಂಟೈನ್ ಮಾಡಿ ಅವರ ಮೇಲೆ ನಿಗಾ ಇಟ್ಟಿರುವ ಆರೋಗ್ಯ ಇಲಾಖೆ. ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ತೆಲಂಗಾಣದ ಆರು ಜನ, ರಾಜ್ಯದ ಒಬ್ಬರು ಸೇರಿ ಇಲ್ಲಿಯವರೆಗೂ 10 ಜನರ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಸಭೆಗೆ ಹೋದವರ ಮೇಲೆ ನಿಗಾ ಇಡಲಾಗಿದೆ.

ಗಂಟಿಲಿನ ಸ್ಯಾಂಪಲ್ ಸಂಗ್ರಹಿಸಿರುವ ಆರೋಗ್ಯ ಇಲಾಖೆ, ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿಕೊಟ್ಟಿದೆ. ಅಲ್ಲದೆ 19 ಜನ ದೆಹಲಿಯಿಂದ ಬಂದ ನಂತರ ಯಾರ ಯಾರ ಸಂಪರ್ಕ ಮಾಡಿದ್ದಾರೆ ಎನ್ನುವುದರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. 19 ಜನರ ಕುಟುಂಬದ ಸದಸ್ಯರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಕೊರೋನಾ ಒಂದಷ್ಟು ನಿಯಂತ್ರಣದಲ್ಲಿದೆ ಎನ್ನುತ್ತಿರುವಾಗಲೇ, ಮತ್ತೊಂದು ಪಾಸಿಟಿವ್ ಪ್ರಕರಣ ಬರುವ ಜೊತೆಗೆ, ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗಿಯಾದವರ ಸಂಖ್ಯೆ ಹೆಚ್ಚದು ಜನರ ಆತಂಕವನ್ನು ಹೆಚ್ಚಿಸಿದೆ.

19 ಜನರ ಮೇಲೂ ತೀವ್ರ ನಿಗಾ ವಹಿಸಿದ್ದೇವೆ ಎಂದ ಡಿಸಿಎಂ ಕಾರಜೋಳ

ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದ ಕಲಬುರ್ಗಿ ಜಿಲ್ಲೆಯ 19 ಜನರನ್ನು ಕ್ವಾರಂಟೈನ್​ಲ್ಲಿಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ. ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಲಾಗಿದೆ. ಭಾಗಿಯಾದ 19 ಜನರಿಗೂ ಇ.ಎಸ್.ಐ. ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿಟ್ಟು, ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಧಾರ್ಮಿಕ ಸಭೆಯಲ್ಲಿ ಭಾಗಿಯಾದ ಉಳಿದವರೂ ಸ್ವಯಂ ಪ್ರೇರಣೆಯಿಂದ ತಪಾಸಣೆಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.ಇದನ್ನೂ ಓದಿ : ಕೊರೋನಾ ಜಾಗೃತಿ ಮೂಡಿಸಲು ರಸ್ತೆಗಿಳಿದ ಸ್ವಾಮೀಜಿ - ಮನೆ ಮನೆಗೆ ತೆರಳಿ ಮಾಸ್ಕ್​​​​​ ವಿತರಣೆ

ನಿಮ್ಮ ಕುಟುಂಬದ ಸದಸ್ಯರಿಗೆ ಮತ್ತು ಇತರರಿಗೆ ತೊಂದರೆಯಾಗೋದನ್ನು ತಪ್ಪಿಸಬೇಕು. ಸರ್ಕಾರದ ವತಿಯಿಂದಲೇ ಕ್ವಾರಂಟೈನ್​​ಲ್ಲಿಟ್ಟು, ಚಿಕಿತ್ಸೆ ನೀಡಲಾಗುವುದು. ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ, ಕೊರೋನಾ ಸೋಂಕು ನಿಯಂತ್ರಣಕ್ಕೆ ಸಹಕರಿಸಿ ಎಂದು ಪ್ರಕಟಣೆ ಮೂಲಕ ಡಿಸಿಎಂ ಗೋವಿಂದ ಕಾರಜೋಳ ಮನವಿ ಮಾಡಿಕೊಂಡಿದ್ದಾರೆ.
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading