• Home
  • »
  • News
  • »
  • coronavirus-latest-news
  • »
  • ಮೈಸೂರನ್ನೂ ಬಿಡದ ಕೊರೊನಾ; ಮಾಸ್ಕ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!

ಮೈಸೂರನ್ನೂ ಬಿಡದ ಕೊರೊನಾ; ಮಾಸ್ಕ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!

ಕೊರೋನಾ ಮಾಸ್ಕ್​ಗಳ ದಾಸ್ತಾನು.

ಕೊರೋನಾ ಮಾಸ್ಕ್​ಗಳ ದಾಸ್ತಾನು.

ಕರೋನ ವೈರಸ್‌ ಕುರಿತು ಎಚ್ಚೆತ್ತುಕೊಂಡಿರುವ ಮೈಸೂರು ಜಿಲ್ಲಾಡಳಿತ ಕೆ.ಆರ್.ಆಸ್ಪತ್ರೆಯಲ್ಲಿ ಕೊರೋನ ವಾರ್ಡ್ ಸ್ಥಾಪಿಸಿ, ಇಡೀ ಮೈಸೂರಿನಾದ್ಯಂತ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಪರಿಣಾಮ ಸಾರ್ವಜನಿಕರಲ್ಲೂ ಈ ಕುರಿತ ಭಯ ಹೆಚ್ಚಾಗಿದ್ದು ಆ ಭಯದ ಎಫೆಕ್ಟ್‌ನಿಂದಾಗಿ ಕರೋನ ಮಾಸ್ಕ್ ಭರ್ಜರಿ ಸೇಲಾಗುತ್ತಿದೆ ಎನ್ನಲಾಗುತ್ತಿದೆ.

ಮುಂದೆ ಓದಿ ...
  • Share this:

ಮೈಸೂರು: ಕೊರೊನಾ ವೈರಸ್ ಭಯ ಎಷ್ಟರಮಟ್ಟಿಗೆ ಶುರುವಾಗಿದೆ ಅಂದ್ರೆ ಮೆಡಿಕಲ್‌ನಲ್ಲಿ ಕೊರೊನಾಗೆ ಅಂತ ಬಂದಿರೋ ಮಾಸ್ಕ್‌ಗಳು ಮಾರ್ಕೆಟ್‌ನಲ್ಲಿ ಶಾರ್ಟೆಜ್ ಆಗುವಷ್ಟರ ಮಟ್ಟಿಗೆ ಇದರ ಭಯ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮೆಡಿಕಲ್ ಸ್ಟೋರ್‌ಗಳ ಮಾಲೀಕರೇ ಮತ್ತೊಂದು ಮೆಡಿಕಲ್ ಸ್ಟೋರ್‌ಗೆ ಕರೆ ಮಾಡಿ ಈ ಮಾಸ್ಕ್ ಇದ್ಯಾ.? ಎಂದು ಕೇಳುವ ಹಂತಕ್ಕೆ ಪರಿಸ್ಥಿತಿ ಬಂದಿದೆ. ಮೈಸೂರಿನಲ್ಲಂತೂ ಕೊರೊನಾ ಮಾಸ್ಕ್‌ಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. 


ಕೊರೊನಾ ಭಯ ಆರಂಭವಾದ ನಂತರ ಯಾವ ಆಸ್ಪತ್ರೆಯಲ್ಲಿ ನೋಡಿದ್ರು ಮಾಸ್ಕ್ ಹಾಕೊಂಡಿರೋ ಸಿಬ್ಬಂದಿಗಳು ಹಾಗೂ ವೈದ್ಯರು ಕಾಣಿಸುತ್ತಿದ್ದಾರೆ. ವೈದ್ಯರು ಸಿಬ್ಬಂದಿಗಳು ಮಾಸ್ಕ್ ಧರಿಸೋದು ಸಹಜ, ಆದ್ರೆ ಕೊರೋನಾ ಭಯದಿಂದ ಸಾಮಾನ್ಯರೇ ಈಗ ಮಾಸ್ಕ್‌ ಧರಿಸೋಕೆ ಆರಂಭಿಸಿದ್ದುಇದರಿಂದಾಗಿ ಮೈಸೂರಿನಲ್ಲಿ ಕೊರೋನ ಮಾಸ್ಕ್‌ಗೆ ಸಖತ್‌ ಡಿಮ್ಯಾಂಡ್ ಎದುರಾಗಿದೆ.


ಕರೋನ ವೈರಸ್‌ ಕುರಿತು ಎಚ್ಚೆತ್ತುಕೊಂಡಿರುವ ಮೈಸೂರು ಜಿಲ್ಲಾಡಳಿತ ಕೆ.ಆರ್.ಆಸ್ಪತ್ರೆಯಲ್ಲಿ ಕೊರೋನ ವಾರ್ಡ್ ಸ್ಥಾಪಿಸಿ, ಇಡೀ ಮೈಸೂರಿನಾದ್ಯಂತ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಪರಿಣಾಮ ಸಾರ್ವಜನಿಕರಲ್ಲೂ ಈ ಕುರಿತ ಭಯ ಹೆಚ್ಚಾಗಿದ್ದು ಆ ಭಯದ ಎಫೆಕ್ಟ್‌ನಿಂದಾಗಿ ಕರೋನ ಮಾಸ್ಕ್ ಭರ್ಜರಿ ಸೇಲಾಗುತ್ತಿದೆ ಎನ್ನಲಾಗುತ್ತಿದೆ. ಎಷ್ಟರ ಮಟ್ಟಿಗೆ ಈ ಮಾಸ್ಕ್‌ಗಳು ಸೇಲ್ ಆಗ್ತಿದೆ ಅಂದ್ರೆ ಮಾರಾಟದಲ್ಲೇ ತಾತ್ಕಾಲಿಕವಾಗಿ ಶಾರ್ಟೇಜ್ ಉಂಟಾಗುವ ರೀತಿಯಲ್ಲಿ ಮಾರಾಟವಾಗುತ್ತಿವೆ.


ಇನ್ನೂ ಚೀನಾ ಸೇರಿದಂತೆ ವಿದೇಶಗಳಿಂದ ಮೈಸೂರಿಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿರುವುದೂ ಸಹ ಈ ಮಾಸ್ಕ್​ಗಳ ಬೇಡಿಕೆ ಹೆಚ್ಚಲು ಕಾರಣ ಎನ್ನಲಾಗುತ್ತಿದೆ. ಪರಿಣಾಮ ಬೇಡಿಕೆ ತಕ್ಕ ಪೂರೈಕೆ ಇಲ್ಲದಾಗಿ ಇವುಗಳ ಬೆಲೆಯಲ್ಲೂ ಗಣನೀಯ ಏರಿಕೆ ಕಾಣುತ್ತಿದೆ. ಆದರೆ, ಇಡೀ ಚೀನಾವನ್ನೇ ಬೆಚ್ಚಿ ಬೀಳಿಸಿದ್ದ ಕೊರೋನ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಈ ಪರಿಯ ಭೀತಿಗೆ ಕಾರಣವಾಗುತ್ತದೆ ಎಂದು ಯಾರೆಂದರೂ ಯಾರೂ ಊಹಿಸಿರಲಿಲ್ಲ. ಇದನ್ನೇ ಅಲ್ಲವೇ ವಿಪರ್ಯಾಸ ಎಂಬುದು.


ಇದನ್ನೂ ಓದಿ : ಮೋದಿ ಒಬ್ಬ ಆಧುನಿಕ ಭಸ್ಮಾಸುರ; ಮಾಜಿ ಸಂಸದ ಉಗ್ರಪ್ಪ ವಾಗ್ದಾಳಿ

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು