ಕೊರೋನಾ ಭೀತಿ; ತವರಿಗೆ ಸೇರುವ ತವಕದಲ್ಲಿ ನಡೆದುಕೊಂಡೇ ಹುಟ್ಟೂರಿಗೆ ತೆರಳುತ್ತಿರುವ ಕಾರ್ಮಿಕರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಲಬುರ್ಗಿ(ಮಾ.30) : ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಹೊರ ರಾಜ್ಯಗಳಿಗೆ ಗುಳೇ ಕಾರ್ಮಿಕರು ಅತಂತ್ರಗೊಂಡಿದ್ದಾರೆ. ತಮ್ಮನ್ನು ತಾಯ್ನಾಡಿಗೆ ಕರೆಸುವಂತೆ ಗೋಗರೆದರೂ, ಜನಪ್ರತಿನಿಧಿಗಳ ಸ್ಪಂದನೆ ಮಾಡದಿರುವಕ್ಕೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರು, ಊಟಕ್ಕೂ ಪರದಾಡುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಾರ್ಮಿಕರ ನಡೆದುಕೊಂಡೇ ಬರಲಾರಂಭಿಸಿದ್ದಾರೆ.

  ಮುಂಬೈಯಿಂದ ಚಿಂಚೋಳಿ, ಚುತ್ತಾಪುರ, ಜೇವರ್ಗಿ, ಕಲಬುರ್ಗಿಗಳ ಕಡೆ ಪಯಾಣ ಆರಂಭಿಸಿದ್ದಾರೆ. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಕಾರ್ಮಿಕರು ನಡೆದುಕೊಂಡು ಬರುತ್ತಿದ್ದಾರೆ. ಈ ಪೈಕಿ ಕೆಲವರು ಬಾಣಂತಿಯರೂ ಇದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ರಾಜ್ಯದ ಕಾರ್ಮಿಕರು ನಡೆದುಕೊಂಡು ಬರುತ್ತಿದ್ದಾರೆ. ಹೊಟ್ಟೆಪಾಡಿಗೆಂದು ಹೋಗಿ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿರುವರೊ ಕಾರ್ಮಿಕರು, ಅನಿವಾರ್ಯವಾಗಿ ನಡೆದುಕೊಂಡೇ ತಮ್ಮ ಊರುಗಳತ್ತ ಸಾಗಿದ್ದಾರೆ.

  ರಾಜ್ಯದ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿರುವ ಕಾರ್ಮಿಕರು, ಚುನಾವಣೆ ಬಂದಾಗ ಮತ ಹಾಕಲು ನಾವು ಬೇಕು, ಈಗ ಬೇಡವೆಂದರೆ ಹೇಗೆಂದು ಪ್ರಶ್ನಿಸಿದ್ದಾರೆ. ಮೊನ್ನೆಯಿಂದಲೂ ತಮ್ಮನ್ನು ಕರೆದುಕೊಂಡು ಹೋಗುವಂತೆ ಕೇಳಿಕೊಳ್ಳುತ್ತಿದ್ದ ಕಾರ್ಮಿಕರು, ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಗಂಟು-ಮೂಟೆ ಹೊತ್ತುಕೊಂಡು ತಮ್ಮ ಊರುಗಳಿಗೆ ಪ್ರಯಾಣ ಆರಂಭಿಸಿದ್ದಾರೆ.

  ಕೊರೋನಾ ನಿಯಂತ್ರಣಕ್ಕೆ ಗಡಿಯಲ್ಲಿ ಬೇಲಿ 

  ಕೊರೋನಾ ಸೋಂಕು ವ್ಯಾಪಕಗೊಳ್ಳುತ್ತಿರೋ ಹಿನ್ನೆಲೆಯಲ್ಲಿ ಚಿಂಚೋಳಿ ಗಡಿಯಲ್ಲಿ ತಾಂಡಾಗಳಲ್ಲಿ ಭೀತಿ ವಾತಾವರಣ ಸೃಷ್ಟಿಯಾಗಿದೆ. ತೆಲಂಗಾಣ ಗಡಿಗೆ ಹೊಂದಿಕೊಂಡ ರಸ್ತೆ ಬಂದ್ ಮಾಡಲಾಗಿದೆ. ಚಿಂಚೋಳಿ ತಾಲೂಕಿನ ಸಂಗಾಪುರ ಗ್ರಾಮ ಮತ್ತು ತಾಂಡಾ ನಿವಾಸಿಗಳಿಂದ ರಸ್ತೆಗೆ ಬೇಲಿ ಹಾಕಲಾಗಿದೆ. ತೆಲಂಗಾಣದಿಂದ ಯಾರೂ ಬಾರದಿರುವಂತೆ ಕಾವಲು ಕಾಯಲಾಗುತ್ತಿದೆ. ಚಿಂಚೋಳಿ ತಾಲೂಕಿನ ಮೂರು ಕಡೆ ಮಾತ್ರ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಉಳಿದ ಕಡೆ ಚೆಕ್ ಪೋಸ್ಟ್ ಇಲ್ಲದೇ ಇರೋದ್ರಿಂದ ಆತಂಕಗೊಂಡ ಜನತೆ, ಸ್ವಯಂ ಪ್ರೇರಣೆಯಿಂದ ರಸ್ತೆಗೆ ಬೇಲಿ ಹಾಕಿದ್ದಾರೆ. ವಾಹನ ಸಂಚಾರಕ್ಕೆ ನಿರ್ಬಂಧ ಹಾಕಿ, ಸ್ವಯಂ ರಕ್ಷಣೆಗೆ ಮುಂದಾದ ಗಡಿ ಭಾಗದ ಜನತೆ.

  ಅನಗತ್ಯವಾಗಿ ಅಡ್ಡಾಡುವರಿಗೆ ತರಾಟೆ

  ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಿಸಿದ್ರೂ ಅನವಶ್ಯಕವಾಗಿ ರಸ್ತೆ ಮೇಲೆ ಓಡಾಡುವವರಿಗೆ ಪೊಲೀಸರಿಂದ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಲಬುರ್ಗಿ ನಗರದ ಸೂಪರ್ ಮಾರ್ಕೆಟ್ ನಲ್ಲಿ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ವಿಚಾರಿಸುತ್ತಿದ್ದಾರೆ. ರಸ್ತೆಗಳಲ್ಲಿ ಓಡಾಡುತ್ತಿರುವ ಪ್ರತಿಯೊಬ್ಬ ಸವಾರರ ತಪಾಸಣೆ ಮಾಡುತ್ತಿದ್ದಾರೆ. ಕೆಲಸವಿಲ್ಲದೆ ರಸ್ತೆಗಿಳಿದ ಸವಾರರ ವಾಹನಗಳನ್ನು ಸೀಜ್ ಮಾಡುತ್ತಿರುವ ಪೊಲೀಸರು. ಇಲ್ಲಿವರೆಗೆ 120ಕ್ಕೂ ಅಧಿಕ ವಾಹನಗಳನ್ನು ಸೀಜ್ ಮಾಡಿದ ಪೊಲೀಸರು, ಅನಗತ್ಯವಾಗಿ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.

  ಅಲೆಮಾರಿಗಳಿಗೆ ಉಚಿತ ಊಟ

  ಕೊರೋನಾ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆಯಿಂದಾಗಿ, ಅಲೆಮಾರಿ ಸಮುದಾಯ ಊಟಕ್ಕಾಗಿ ಪರದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಲೆಮಾರಿ ಜನಾಂಗಕ್ಕೆ, ಕಾರ್ಮಿಕರಿಗೆ ಉಚಿತ ಊಟ ವ್ಯವಸ್ಥೆ ಕಲ್ಪಿಸಲಾಗಿದೆ. ಜೆ.ಎಂ.ಕೊರಬು ಫೌಂಡೇಶನ್ ನಿಂದ ಅಫಜಲಪುರ ಪಟ್ಟಣದ ಹಲವು ಬಡಾವಣೆಗಳಲ್ಲಿ ಉಚಿತ ಊಟ ವ್ಯವಸ್ಥೆ ಮಾಡಲಾಗಿದೆ.

  ಇದನ್ನೂ ಓದಿ : ಕಿಮ್ಸ್ ನಲ್ಲಿ ಮಾಸ್ಕ್ ಕಳ್ಳತನ; ನರ್ಸ್​ಗೆ ಆಡಳಿತ ಮಂಡಳಿಯಿಂದ ನೋಟೀಸ್

  ಅಫಜಲಪುರ ಪಟ್ಟಣದಲ್ಲಿರುವ ಬಡವರಿಗೆ ಉಚಿತ ಊಟ ಹಂಚಿಕೆ ಮಾಡಲಾಗುತ್ತಿದೆ. ಲಾಕ್ ಡೌನ್ ಮುಗಿಯೋವರೆಗೂ ಉಚಿತ ಊಟದ ವ್ಯವಸ್ಥೆಗೆ ನಿರ್ಧರಿಸಲಾಗಿದೆ. ನಿರ್ಗತಿಕರ ಜೊತೆ ಚೆಕ್ ಪೋಸ್ಟ್ ಗಳಲ್ಲಿ ಹಗಲಿರುಳು ಕೆಲಸ ಮಾಡ್ತಿರೋ ಸಿಬ್ಬಂದಿಗೂ ಉಚಿತ ಊಟ ಕೊಡಲಾಗುತ್ತಿದೆ. ಈಗಾಗಲೇ ಅಫಜಲಪುರ ತಾಲೂಕಿನಲ್ಲಿ 20,000 ಕ್ಕೂ ಹೆಚ್ಚು ಮಾಸ್ಕ್  ಹಂಚಿದ್ದಾರೆ.
  First published: