• Home
 • »
 • News
 • »
 • coronavirus-latest-news
 • »
 • ಮುಸ್ಲಿಮ್ ವ್ಯಕ್ತಿಯಿಂದ ಪಾರ್ಸಲ್ ಪಡೆಯಲು ನಿರಾಕರಣೆ: ಮಹಾರಾಷ್ಟ್ರದಲ್ಲಿ ಒಬ್ಬನ ಬಂಧನ

ಮುಸ್ಲಿಮ್ ವ್ಯಕ್ತಿಯಿಂದ ಪಾರ್ಸಲ್ ಪಡೆಯಲು ನಿರಾಕರಣೆ: ಮಹಾರಾಷ್ಟ್ರದಲ್ಲಿ ಒಬ್ಬನ ಬಂಧನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡೆಲಿವರಿ ಮ್ಯಾನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಚತುರ್ವೇದಿಯವರನ್ನು ಬಂಧಿಸಲಾಗಿದೆ

 • Share this:

  ಡೆಲಿವರಿಗೆ ಬಂದ ಮುಸ್ಲಿಂ ವ್ಯಕ್ತಿಯೊಬ್ಬರಿಂದ ವಸ್ತುಗಳನ್ನು ಪಡೆಯಲು ನಿರಾಕರಿಸಿದ ಆರೋಪದ ಮೇಲೆ ಕಾಶಿಮೀರಾ ಪ್ರದೇಶದ ನಿವಾಸಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

  ಗಜಾನನ್ ಚತುರ್ವೇದಿ (51) ವಿರುದ್ಧ ಮಂಗಳವಾರ ರಾತ್ರಿ ಐಪಿಸಿ ಸೆಕ್ಷನ್ 295 (ಎ) (ಧಾರ್ಮಿಕ ಭಾವನೆಗಳನ್ನು ಮೀರಿಸುವ ದುರುದ್ದೇಶಪೂರಿತ ಕೃತ್ಯ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಡೆಲಿವರಿಮ್ಯಾನ್ ನೀಡಿದ ದೂರಿನ ಪ್ರಕಾರ, ಮಂಗಳವಾರ ಬೆಳಗ್ಗೆ ಚತುರ್ವೇದಿಯವರ ಮನೆಗೆ ಕೆಲವು ಸರಕುಗಳನ್ನು ತಲುಪಿಸಲು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಚತುರ್ವೇದಿ ತನ್ನ ಹೆಸರನ್ನು ಕೇಳಿದರು. ತಾನು ಹೆಸರು ಹೇಳಿದಾಗ ಮುಸಲ್ಮಾನರಿಂದ ಏನನ್ನೂ ಮುಟ್ಟುವುದಿಲ್ಲ ಎಂದು ಚತುರ್ವೇದಿ ಸರಕನ್ನು ತಿರಸ್ಕರಿಸಿದರು ಎಂದು ಆರೋಪಿಸಲಾಗಿದೆ.

  ಇದನ್ನೂ ಓದಿ : ನಿರಾಶ್ರಿತರಿಗೆ ಮಾಸ್ಕ್ ಹೊಲಿದು ಕೊಟ್ಟ ರಾಷ್ಟ್ರಪತಿ ಪತ್ನಿ ಸವಿತಾ ಕೋವಿಂದ್

  ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಹಜಾರೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಡೆಲಿವರಿ ಮ್ಯಾನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಚತುರ್ವೇದಿಯವರನ್ನು ಬಂಧಿಸಲಾಗಿದ್ದು, ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  First published: