ತಾವೇ ಬೀಸಿದ ಬಲೆಗೆ ಬಿದ್ದ ಬೇಟೆಗಾರರು - 11 ಜನರನ್ನ ಬಂಧಿಸಿದ ಅರಣ್ಯಾಧಿಕಾರಿಗಳು
ಮೊಲ, ನರಿ, ಕಾಡುಹಂದಿಗಳನ್ನು ಬೇಟೆಯಾಡುತ್ತಿದ್ದ ಡೋಣಿ ಗ್ರಾಮದ 11 ಜನ ಸಿಕ್ಕುಬಿದ್ದಿದ್ದು, ಇವರಿಂದ ಅರಣ್ಯಾಧಿಕಾರಿಗಳು11 ಬೇಟೆಯಾಡುವ ಬಲೆ, 8 ಬೈಕ್ ವಶಕ್ಕೆ ಪಡೆದಿದ್ದಾರೆ.
news18-kannada Updated:April 23, 2020, 5:47 PM IST

ಭೇಟೆಗಾರರನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಸಿಬ್ಬಂದಿ
- News18 Kannada
- Last Updated: April 23, 2020, 5:47 PM IST
ಗದಗ(ಏ.23): ಪ್ರಾಣಿಗಳ ಹಿಡಿಯುವುದಕ್ಕೆ ಬಲೆ ಬೀಸಿದ್ದ ಬೇಟೆಗಾರರು ತಾವೇ ಬಲೆಗೆ ಬಿದ್ದಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದಲ್ಲಿ ಈ ಘಟನೆ ನಡೆದಿದೆ. ಬೇಟೆಯಾಡಲು ಹೋಗಿದ್ದ 11 ಜನರನ್ನು ಆರ್ಎಫ್ಒ ಶಿವರಾತ್ರೀಶ್ವರ್ ನೇತೃತ್ವದ ತಂಡ ಬಂಧಿಸಿದೆ.
ಕಪ್ಪತ್ತಗುಡ್ಡದಲ್ಲಿ ಮೂಕ ಪ್ರಾಣಿಗಳನ್ನು ಬೇಟೆಯಾಡುವುದು ಹೆಚ್ಚಾಗುತ್ತಿದೆ. ಇಲ್ಲಿ ಜಿಂಕೆಗಳು, ಕೃಷ್ಣ ಮೃಗಗಳು, ಕಾಡು ಹಂದಿಗಳು, ಮೊಲ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿಗಳು ವಾಸಮಾಡುತ್ತಿವೆ. ಇಲ್ಲಿ ಮಾತ್ರ ಶಿಕಾರಿಗಳ ಅಟ್ಟಹಾಸಕ್ಕೆ ಅದೆಷ್ಟೋ ವನ್ಯಜೀವಿ ಪ್ರಾಣಿಗಳು ಬಲಿಯಾಗಿವೆ. ಮೊಲ, ನರಿ, ಕಾಡುಹಂದಿಗಳನ್ನು ಬೇಟೆಯಾಡುತ್ತಿದ್ದ ಡೋಣಿ ಗ್ರಾಮದ 11 ಜನ ಸಿಕ್ಕುಬಿದ್ದಿದ್ದು, ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರಿಂದ ಅರಣ್ಯಾಧಿಕಾರಿಗಳು 11 ಬೇಟೆಯಾಡುವ ಬಲೆ, 8 ಬೈಕ್ ವಶಕ್ಕೆ ಪಡೆದಿದ್ದಾರೆ. ಮುದ್ದಾದ ಮೊಲವನ್ನು ಬಲೆಗೆ ಕೆಡವಲು ಹೊಂಚು ಹಾಕಿದ್ದವರೇ ಈಗ ಅರಣ್ಯ ಇಲಾಖೆ ಬಲೆಗೆ ಬಿದ್ದು ಕಂಬಿ ಎಣಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಹೆಸರುವಾಸಿಯಾಗಿರುವ ಕಪ್ಪತ್ತಗುಡ್ಡ ಮುಂಗಾರು ಮಳೆಯ ಸಿಂಚನದಿಂದ ಇದೀಗ ಕಂಗೊಳಿಸುತ್ತಿದೆ. ಈಗ ಇಲ್ಲಿಗೆ ಬಂದರೆ ಅಕ್ಷರಶಃ ಮಲೆನಾಡಿನ ವಾತಾವರಣ, ಶ್ರಾವಣದಲ್ಲಿ ಅಧ್ಯಾತ್ಮಿಕತೆಯ ಸಿಂಚನ ಅನುಭವಕ್ಕೆ ಬರುತ್ತದೆ. ಕಪ್ಪತಗಿರಿಯಲ್ಲಿರುವ ವಿರಕ್ತ ಯತಿಗಳ ಗುಹೆಗಳು, ಆಯುರ್ವೇದಿಯ ಸಸ್ಯರಾಶಿ ಬೆಟ್ಟದ ತುದಿಗೆ ಕಾಲಿಡುತ್ತಿದ್ದಂತೆ ಮನೋಲ್ಲಾಸ ನೀಡುತ್ತಿವೆ.
ಕಪ್ಪತ್ತಗುಡ್ಡ ಜೀವ ವೈವಿಧ್ಯಗಳು ಹಾಗೂ ಪಾರಂಪರಿಕ ಔಷಧೀಯ ಸಸ್ಯಗಳು, ಕೆರೆ ಕೊಳ್ಳಗಳು, ಪುರಾತನ ದೇವಾಲಯಗಳನ್ನು ಒಳಗೊಂಡಿರುವ ನಿಸರ್ಗ ಸಂಪತ್ತು. ನಯನ ಮನೋಹರವಾದ ಈ ಗುಡ್ಡ ಸಾವಿರಾರು ನೆಸರ್ಗಿಕ ಗಿಡಮೂಲಿಕೆಗಳನ್ನು ಒಳಗೊಂಡಿದ್ದು, ಹಲವು ಅಪರೂಪದ ವನ್ಯ ಮಗಗಳು, ಸರೀಸೃಪಗಳ ತಾಣವಾಗಿದೆ. ನೈಸರ್ಗಿಕ ಸಂಪತ್ತಿನ ಆಗರವಾಗಿರುವ ಕಪ್ಪತ್ತಗುಡ್ಡ ಗದಗ, ಮುಂಡರಗಿ, ಶಿರಹಟ್ಟಿ ತಾಲೂಕುಗಳಲ್ಲಿ 33,000 ಕಿ.ಮೀ. ವಿಸ್ತೀರ್ಣ ಹೊಂದಿದೆ. ಕಪ್ಪತ್ತಗುಡ್ಡ ಬೆಟ್ಟದ ಸಾಲು ಅರಣ್ಯ ಇಲಾಖೆ ಸಂರಕ್ಷಣೆಯಲ್ಲಿದೆ. ಪ್ರಾಣಿ, ಪಕ್ಷಿಗಳ ಬೇಟೆಯಿಂದ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತ ನಡೆದಿದೆ.
ಇದನ್ನೂ ಓದಿ : ಲಾಕ್ ಡೌನ್ ನಿಂದ ಅದ್ಧೂರಿ ಮದುವೆಗೆ ಬ್ರೇಕ್ - ಸರಳ ವಿವಾಹವಾಗಿ ಮಾದರಿಯಾದ ಅಂತಾರಾಷ್ಟ್ರೀಯ ಕುಸ್ತಿಪಟು
ಇತ್ತೀಚೆಗೆ ಮತ್ತೇ ಮೂಕ ಪ್ರಾಣಿಗಳನ್ನು ಬೇಟೆಯಾಡಲು ಬೇಟೆಗಾರರು ಪ್ರವೇಶಿಸಿದ್ದಾರೆ. ಈಗಾಗಲೇ ಕೊರೋನಾ ವೈರಸ್ ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಬ್ಯೂಸಿ ಇರುವ ಕಾರಣ. ಅರಣ್ಯ ಪ್ರದೇಶಕ್ಕೆ ಕಾಲಿಟ್ಟು ಪ್ರಾಣಿಗಳ ಬೇಟೆಗೆ ನಿಂತಿದ್ದಾರೆ. ಹೀಗಾಗಿ ಬೇಟೆಗಾರರ ಸಂಚಿಗೆ ಅದೆಷ್ಟೋ ಪ್ರಾಣಿಗಳು ಬಲಿಯಾಗಿವೆ ಗೊತ್ತಿಲ್ಲ.
ಕಪ್ಪತ್ತಗುಡ್ಡದಲ್ಲಿ ಮೂಕ ಪ್ರಾಣಿಗಳನ್ನು ಬೇಟೆಯಾಡುವುದು ಹೆಚ್ಚಾಗುತ್ತಿದೆ. ಇಲ್ಲಿ ಜಿಂಕೆಗಳು, ಕೃಷ್ಣ ಮೃಗಗಳು, ಕಾಡು ಹಂದಿಗಳು, ಮೊಲ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿಗಳು ವಾಸಮಾಡುತ್ತಿವೆ. ಇಲ್ಲಿ ಮಾತ್ರ ಶಿಕಾರಿಗಳ ಅಟ್ಟಹಾಸಕ್ಕೆ ಅದೆಷ್ಟೋ ವನ್ಯಜೀವಿ ಪ್ರಾಣಿಗಳು ಬಲಿಯಾಗಿವೆ.