ಬಂದ್ ಆಗಿದ್ದ ಮದ್ಯದಂಗಡಿ ತೆರೆಯಲು ಗ್ರೀನ್ ಸಿಗ್ನಲ್​​ : ವೈನ್​ ಶಾಪ್ ತೆರೆಯಲು ವರ್ತಕರಿಂದ ಸಿದ್ಧತೆ

ಬ್ಯಾರಿಕೇಡ್ ನ ಒಳಭಾಗದಲ್ಲಿ ಕೇವಲ ಐದು ಜನರು ಮಾತ್ರ ಇರಬೇಕು. ಪೊಲೀಸರು ಅಂಗಡಿ ಬಳಿ ಇದ್ದರೂ, ಅಂಗಡಿ ಮಾಲೀಕರು ಅವರದ್ದೇ ಸ್ವಂತ ಖರ್ಚಿನಲ್ಲಿ ಭದ್ರತಾ ಸಿಬ್ಭಂದಿಗಳನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶಿವಮೊಗ್ಗ(ಮೇ.03): ಕೊರೋನಾ ಹಾವಳಿಯಿಂದ ದೇಶವೇ ಲಾಕ್ ಡೌನ್ ಆಗಿ 40 ದಿನಗಳು ಕಳೆದಿವೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳು ಸಹ ಬಂದ್ ಆಗಿದ್ದವು. ಮದ್ಯ ಇಲ್ಲದೇ ಹಲವರು ಪರದಾಡಿದ ಸಂಗತಿಗಳು ದೇಶದಲ್ಲಿ ನಡೆದಿವೆ.  ಈಗ ನಾಳೆಯಿಂದ ಸರ್ಕಾರ ಮದ್ಯದ ಅಂಗಡಿಗಳು ಬಾಗಿಲು ತೆರೆಯಲು ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕಾಗಿ ಮದ್ಯ ಮಾರಾಟ ವರ್ತಕರು ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದಾರೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಸಹ ಮದ್ಯ ಮಾರಾಟಕ್ಕೆ ಸಿದ್ಧತೆಗಳು ನಡೆದಿವೆ. ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಮಾರಾಟ ಅಂಗಡಿಗಳ ವರ್ತಕರ ಜೊತೆ ಸಭೆ ನಡೆಸಿದ್ದಾರೆ. ನಗರದ 260 ಅಂಗಡಿಗಳ ಪೈಕಿ 155 ಅಂಗಡಿಗಳನ್ನು ತೆರೆಯಲು ಅಬಕಾರಿ ಇಲಾಖೆ ಅವಕಾಶ ಕಲ್ಪಿಸಿದೆ.

ಶಿವಮೊಗ್ಗ ಅಬಕಾರಿ ಡಿ.ಸಿ. ಕ್ಯಾ. ಅಜಿತ್ ಕುಮಾರ್ ಮತ್ತು ಪೊಲೀಸರು, ಪ್ರತಿ ಮದ್ಯದಂಗಡಿ ಮುಂಭಾಗ ಬ್ಯಾರಿಕೇಡ್ ಅಳವಡಿಸಲು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಬ್ಯಾರಿಕೇಡ್ ನ ಒಳಭಾಗದಲ್ಲಿ ಕೇವಲ ಐದು ಜನರು ಮಾತ್ರ ಇರಬೇಕು. ಪೊಲೀಸರು ಅಂಗಡಿ ಬಳಿ ಇದ್ದರೂ, ಅಂಗಡಿ ಮಾಲೀಕರು ಅವರದ್ದೇ ಸ್ವಂತ ಖರ್ಚಿನಲ್ಲಿ ಭದ್ರತಾ ಸಿಬ್ಭಂದಿಗಳನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ.

ಒಬ್ಬರಿಗೆ 2.3 ಲೀ. (6 ಕ್ವಾಟರ್), (ಒಂದುವರೆ ಫುಲ್ ಬಾಟಲ್) ಮಾತ್ರ ನೀಡುವಂತೆ ಆದೇಶ ನೀಡಿದ್ದಾರೆ. ಅಲ್ಲದೇ, ಒಬ್ಬರಿಗೆ, 4 ಫುಲ್ ಬಾಟಲ್ ಬೀರ್ ಅಥವಾ 6 ಪಿಂಟ್ ಬಾಟಲಿಗಳನ್ನು ಮಾತ್ರ ನೀಡಲು ನಿರ್ದೇಶನ ಮಾಡಲಾಗಿದೆ. ಮದ್ಯದಂಗಡಿ ಪಕ್ಕದ ಗೂಡಂಗಡಿಗಳಲ್ಲಿಯೂ ಮದ್ಯ ಸೇವನೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕೌಂಟರ್ ನಲ್ಲಿ ಮದ್ಯ ಹೊರತುಪಡಿಸಿ ಬೇರೆ ಯಾವ ಪದಾರ್ಥ ಮಾರಾಟ ಮಾಡುವಂತಿಲ್ಲ. ಮದ್ಯ ಮಾರಾಟಗಾರರು, ಕೈಗವಸು ಮತ್ತು ಮಾಸ್ಕ್ ಬಳಸುವುದು ಕಡ್ಡಾಯ ಮಾಡಲಾಗಿದೆ. ಮದ್ಯ ಅಂಗಡಿ ಮುಂಭಾಗ ಯಾವುದೇ ಗೊಂದಲ-ಗದ್ದಲವಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ಮದ್ಯದಂಗಡಿ ಮುಂಭಾಗದಲ್ಲಿ ಸಿ.ಸಿ. ಟಿವಿ ಅಳವಡಿಕೆ ಕಡ್ಡಾಯ ಮಾಡಲಾಗಿದೆ.

ಜೊತೆಗೆ, ಇಲಾಖೆಯ ನಿರ್ದೇಶನ ಪಾಲಿಸಲು ಎಲ್ಲಾ ಮದ್ಯ ಅಂಗಡಿಯ ಸನ್ನದ್ದುದಾರರಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ. ಸನ್ನದ್ದುದಾರರು ಇಲಾಖೆಯ ಸೂಚನೆಗಳನ್ನು ಪಾಲಿಸುವುದಿಲ್ಲ ಅನ್ನುವುದು ಕಂಡುಬಂದರೇ  ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ.

ಇದನ್ನೂ ಓದಿ :  kalaburgi Coronavirus: ಒಂದೇ ದಿನ ಆರು ಪಾಸಿಟಿವ್ ; ಕಲಬುರ್ಗಿ ಜನತೆಯಲ್ಲಿ ಹೆಚ್ಚಿದ ಆತಂಕ

ಈಗಾಗಲೇ ಮದ್ಯ ಮಾರಾಟಗಾರರು ಸಹ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಇಷ್ಟು ದಿನ ಎಣ್ಣೆ ಇಲ್ಲದೇ ಬೇಸರದಲ್ಲಿದ್ದ ಮದ್ಯ ಪ್ರೀಯರಿಗೆ ನಾಳೆಯಿಂದ ಕಿಕ್  ಏರುವುದು ಗ್ಯಾರಂಟಿ.
First published: