ಬೆಂಗಳೂರು (ಜೂ.27): ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ (Corona) ಸೋಂಕು ಹೆಚ್ಚಾಗುತ್ತಿದೆ. ಮಾಸ್ಕ್ ಕಡ್ಡಾಯಗೊಳಿಸಿದರು ಸಾರ್ವಜನಿಕರು ಕ್ಯಾರೆ ಎನ್ನುತ್ತಿಲ್ಲ. ಸೋಂಕು ಹರಡದಂತೆ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆ (Health Department) ಅಲರ್ಟ್ ಆಗಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳದಿದ್ರೆ ಮಾಸ್ಕ್ (Mask) ದಂಡ ಅಸ್ತ್ರ ಪ್ರಯೋಗ ಈ ವಾರದಿಂದಲೇ ಶುರು ಆಗಲಿದೆ. ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ (Mask Mandatory) ಎಂದು ಆದೇಶಿಸಿದ್ರು ಜನ ಮಾಸ್ಕ್ ಬಳಕೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಾಸ್ಕ್ ಹಾಕದಿದ್ದರೆ ದಂಡ ಪ್ರಯೋಗಿಸಿ ಎಂದ ತಾಂತ್ರಿಕ ಸಲಹಾ ಸಮಿತಿ ಸಲಹೆ ಹಿನ್ನೆಲೆ ಮಾಸ್ಕ್ ಕಡ್ಡಾಯ ಪಾಲಿಸಲು ದಂಡ ಪ್ರಯೋಗ ಅನಿವಾರ್ಯ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ. ರಂದೀಪ್ ಹೇಳಿದ್ದಾರೆ. ಮಾಸ್ಕ್ ದಂಡದ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ನಿರ್ಧಾರಕೈಗೊಳ್ಳಲಿದೆ
ಮಾಸ್ಕ್ ದಂಡದ ಬಗ್ಗೆ ಶೀಘ್ರವೇ ಅಂತಿಮ ನಿರ್ಧಾರ
ಆರೋಗ್ಯ ಇಲಾಖೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸುಗಳನ್ನ ಸರ್ಕಾರದ ಮುಂದೆ ಸಲ್ಲಿಸಲು ಮುಂದಾಗಿದೆ. ವರದಿಯನ್ನು ಸಂಜೆ ವೇಳೆಗೆ ಆರೋಗ್ಯ ಇಲಾಖೆ ವರದಿಯನ್ನು ಸರ್ಕಾರಕ್ಕೆ ತಲುಪಿಸಲಿದೆ. ದಂಡದ ಪ್ರಸ್ತಾವನೆ ಕುರಿತು ಸರ್ಕಾರದ ಮಟ್ಟದಲ್ಲಿ ಸಭೆ ನಡೆಯಲಿದೆ. ಸರ್ಕಾರ ಸಭೆ ನಡೆಸಿ ಮಾಸ್ಕ್ ದಂಡದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ವಾರದಲ್ಲಿಯೇ ಸರ್ಕಾರದಿಂದ ಮಾಸ್ಕ್ ದಂಡದ ಬಗ್ಗೆ ನಿರ್ಧಾರ ತೆಗೆದುಕೊಳ್ಳೋ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ. ರಂದೀಪ್ ಹೇಳಿದ್ದಾರೆ.
ಒಟ್ಟು 33 ಕಂಟೈನ್ಮೆಂಟ್ ಜೋನ್
ಸದ್ಯ ನಗರದಲ್ಲಿ ಒಟ್ಟು 33 ಕಂಟೈನ್ಮೆಂಟ್ ಜೋನ್ ಗಳಿವೆ. ಅದರಲ್ಲಿ ನಿನ್ನೆ ಒಂದೇ ದಿನ ಮಹದೇವಪುರದಲ್ಲಿ ಹೊಸ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಶೇ.3.88ರಷ್ಟಿದೆ. ಮಹದೇವಪುರ ವಲಯದಲ್ಲಿ 31 ಮತ್ತು ಆರ್ ಆರ್ ನಗರ ವಲಯದಲ್ಲಿ 2 ಕಂಟೈನ್ಮೆಂಟ್ ವಲಯಗಳಿವೆ. ಶನಿವಾರದ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ನಗರದಲ್ಲಿ 236 ಹೊಸ ಪ್ರಕರಣಗಳು ವರದಿಯಾಗಿವೆ.
ಕೊರೊನಾ ಪರೀಕ್ಷೆ ಹೆಚ್ಚಳ
ನಗರದಲ್ಲಿ 17,693 ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 13,675 RTPCR ಹಾಗೂ 4018 ಜನರಿಗೆ ರಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗಿದೆ. ಶನಿವಾರ ಒಟ್ಟು 14,553 ಮಂದಿ ಕೋವಿಡ್ ವ್ಯಾಕ್ಸಿನ್ ಪಡೆದಿದ್ದಾರೆ. 1063 ಮಂದಿ ಮೊದಲ ಡೋಸ್, 4996 ಜನ ಎರಡನೇ ಡೋಸ್ ಮತ್ತು 8494 ಜನ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಏರಿಕೆ
ಇದನ್ನೂ ಓದಿ: Norovirus Alert: ಏನಿದು ನೊರೊವೈರಸ್? ಬರದಂತೆ ತಡೆಯುವುದು ಹೇಗೆ? ಸೋಂಕು ತಗುಲಿದರೆ ಏನು ಮಾಡಬೇಕು?
ಶನಿವಾರದಂದು ಐಸಿಎಂಆರ್ ಪೋರ್ಟಲ್ನಲ್ಲಿನ ದೋಷದಿಂದಾಗಿ ಪಟ್ಟಿ ಮಾಡಲು ಸಾಧ್ಯವಾಗದ ಪ್ರಕರಣಗಳನ್ನು ಸಹ ದಿನದ ಲೆಕ್ಕಾಚಾರಕ್ಕೆ ಸೇರಿಸಲಾಗಿದೆ. ಈ ಕಾರಣದಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,493 ರಷ್ಟು ಹೆಚ್ಚಾಗಿದೆ. ಸದ್ಯ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 24,608 ಆಗಿದೆ. ಇಲ್ಲಿಯವರೆಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 77,90,153 ಆಗಿದೆ.
ಇನ್ನೂ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಉಪ-ವ್ಯತ್ಯಯ ಪ್ರಕರಣಗಳು ದಾಖಲಾಗಿವೆ. ಪುಣೆಯ BJ ವೈದ್ಯಕೀಯ ಕಾಲೇಜಿನ ಇತ್ತೀಚಿನ ವರದಿಯು ಮುಂಬೈನಲ್ಲಿ BA.5 ನ ಮೂವರು ಮತ್ತು BA.4 ಉಪ-ವೇರಿಯಂಟ್ನ ಇಬ್ಬರು ರೋಗಿಗಳು ಕಂಡುಬಂದಿದೆ ಎಂದು ಹೇಳಿದೆ. ಎಲ್ಲಾ ಮಾದರಿಗಳನ್ನು ಜೂನ್ 10-20 ಅವಧಿಯಲ್ಲಿ ಸಂಗ್ರಹಿಸಲಾಗಿದೆ. ಇದರೊಂದಿಗೆ ಬಿಎ.4 ಮತ್ತು ಬಿಎ.5 ಪ್ರಕರಣಗಳ ಸಂಖ್ಯೆ 54ಕ್ಕೆ ಏರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ