ಮಾಜಿ ಸಿಎಂ ಸಿದ್ಧರಾಮಯ್ಯರಿಗೆ ಕೊರೋನಾ ಪಾಸಿಟೀವ್ ಪತ್ತೆ; ಮೊಮ್ಮಗ ಧವನ್ ಕ್ವಾರಂಟೈನ್

ಸಿದ್ದರಾಮ್ಯಯ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕಳೆದ ಎರಡು ದಿನದಿಂದ ಮೈಸೂರಿನಲ್ಲಿ ಅವರ ಜೊತೆಗೆ ಚೆಸ್‌ ಆಡಿದ್ದ ಹಾಗೂ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಅಣ್ಣನ ಮಗ ಧವನ್‌ ಅವರನ್ನು ಕ್ವಾರಂಟೈನ್‌ಗೆ ಒಳಗಾಗುವಂತೆ ಡಾ.ಯತೀಂದ್ರ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ.

news18-kannada
Updated:August 4, 2020, 4:58 PM IST
ಮಾಜಿ ಸಿಎಂ ಸಿದ್ಧರಾಮಯ್ಯರಿಗೆ ಕೊರೋನಾ ಪಾಸಿಟೀವ್ ಪತ್ತೆ; ಮೊಮ್ಮಗ ಧವನ್ ಕ್ವಾರಂಟೈನ್
ಮೊಮ್ಮಗನೊಂದಿಗೆ ಚೆಸ್ ಆಡುತ್ತಿರುವ ಸಿದ್ದರಾಮಯ್ಯ.
  • Share this:
ಬೆಂಗಳೂರು (ಆಗಸ್ಟ್‌ 04); ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ತಗುಲಿದೆ. ಈ ನಿಟ್ಟಿನಲ್ಲಿ ಕಳೆದ ಭಾನುವಾರ ಅವರ ಜೊತೆಗೆ ಚೆಸ್‌ ಆಡಿದ್ದ ತಮ್ಮ ಅಣ್ಣ ದಿವಂಗತ ರಾಕೇಶ್‌ ಅವರ ಮಗ ಧವನ್ ಕ್ವಾರಂಟೈನ್‌ಗೆ ಒಳಗಾಗುವಂತೆ ಡಾ.ಯತೀಂದ್ರ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಕೊರೋನಾ ಕಾರಣದಿಂದಾಗಿ ಮನೆಯಲ್ಲಿ ಕಾಲ ಕಳೆಯುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಸ್ಟ್‌ 02 ಭಾನುವಾರದಂದು ಮನೆಯಲ್ಲಿ ತಮ್ಮ ಮೊಮ್ಮಗ ಧವನ್‌ ಜೊತೆಗೆ ಚೆಸ್‌ ಆಟವಾಡಿದ್ದರು. ತಾತ-ಮೊಮ್ಮಗನ ಚೆಸ್‌ ಆಟದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಕುರಿತು ಮಾತನಾಡಿದ್ದ ಸಿದ್ದರಾಮಯ್ಯ, "ನನ್ನ ಮೊಮ್ಮಗ ದೊಡ್ಡ ಚೆಸ್‌ ಆಟಗಾರನಾಗುತ್ತಾನೆ, ನನ್ನಂತೆಯೇ ರಾಜಕೀಯಕ್ಕೂ ಧುಮುಕುತ್ತಾನೆ" ಎಂದು ಸಂತಸ ಹಂಚಿಕೊಂಡಿದ್ದರು.

ಆದರೆ, ಸೋಮವಾರದ ವೇಳೆಗೆ ಸಿದ್ದರಾಮ್ಯಯ ಅವರಿಗೂ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಹೀಗಾಗಿ ಇಂದು ಕೊರೋನಾ ಗುಣ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ತಗುಲಿರುವುದು ಖಚಿತವಾಗಿದೆ. ಹೀಗಾಗಿ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : Ayodhya Ram Mandir: ರಾಮ ಎಲ್ಲರಲ್ಲೂ ಇದ್ದಾನೆ, ಅಯೋಧ್ಯೆ ಕಾರ್ಯಕ್ರಮ ದೇಶದ ಏಕತೆಗೆ ದಾರಿಯಾಗಲಿ: ಪ್ರಿಯಾಂಕ ಗಾಂಧಿ

ಸಿದ್ದರಾಮ್ಯಯ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕಳೆದ ಎರಡು ದಿನದಿಂದ ಮೈಸೂರಿನಲ್ಲಿ ಅವರ ಜೊತೆಗೆ ಚೆಸ್‌ ಆಡಿದ್ದ ಹಾಗೂ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಅಣ್ಣನ ಮಗ ಧವನ್‌ ಅವರನ್ನು ಕ್ವಾರಂಟೈನ್‌ಗೆ ಒಳಗಾಗುವಂತೆ ಡಾ.ಯತೀಂದ್ರ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ.ಪ್ರಸ್ತುತ ಕೊರೋನಾ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌವ್ಹಾಣ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಅನೇಕ ಹಿರಿಯ ನಾಯಕರಿಗೂ ಸಹ ಕೊರೋನಾ ಸೋಂಕು ತಗುಲಿರುವುದು ಜನ ಸಾಮಾನ್ಯರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
Published by: MAshok Kumar
First published: August 4, 2020, 4:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading