ರಾಮನಗರ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತನ ಹುಟ್ಟುಹಬ್ಬ ಆಚರಣೆ; ಡಿಸಿಎಂ ಅಶ್ವತ್ಥ್‌ ನಾರಾಯಣ್ ಮೆಚ್ಚುಗೆ

ಆರೋಗ್ಯ ಇಲಾಖೆಯ ಸಿಬ್ಬಂದಿಯೊಬ್ಬರಿಗೆ ಕಳೆದ ವಾರ ಸೋಂಕು ಪತ್ತೆಯಾಗಿತ್ತು. ಹೀಗಾಗಿ ರಾಮನಗರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆರೋಗ್ಯ ಇಲಾಖೆಯೊಂದಿಗೆ ಹಗಲಿರುಳು ಶ್ರಮಿಸಿದ್ದ ಇವರ ಹುಟ್ಟುಹಬ್ಬವನ್ನ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ.

news18-kannada
Updated:July 16, 2020, 2:01 PM IST
ರಾಮನಗರ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತನ ಹುಟ್ಟುಹಬ್ಬ ಆಚರಣೆ; ಡಿಸಿಎಂ ಅಶ್ವತ್ಥ್‌ ನಾರಾಯಣ್ ಮೆಚ್ಚುಗೆ
ಕೊರೋನಾ ರೋಗಿಯ ಹುಟ್ಟುಹಬ್ಬ ಆಚರಿಸುತ್ತಿರುವ ವೈದ್ಯರು.
  • Share this:
ರಾಮನಗರ (ಜುಲೈ 16); ರಾಮನಗರ ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವಂತಹ ಮಾವವೀಯ ಹಾಗೂ ಅಪರೂಪದ ಘಟನೆಯೊಂದು ರಾಮನಗರದಲ್ಲಿ ನಡೆದಿದೆ. ಕೋವಿಡ್ ಸೋಂಕಿತನ ಹುಟ್ಟು ಹಬ್ಬವನ್ನು‌ ಕೋವಿಡ್ ಆಸ್ಪತ್ರೆಯಲ್ಲಿಯೇ ಆರೋಗ್ಯ ಇಲಾಖೆ ನಿನ್ನೆ ಸಂಜೆ ನೆರವೇರಿಸಿದೆ ಈ ಮೂಲಕ ಎಲ್ಲರಿಗೂ ಮಾದರಿಯಾಗಿದೆ.

ಆರೋಗ್ಯ ಇಲಾಖೆಯ ಸಿಬ್ಬಂದಿಯೊಬ್ಬರಿಗೆ ಕಳೆದ ವಾರ ಸೋಂಕು ಪತ್ತೆಯಾಗಿತ್ತು. ಹೀಗಾಗಿ ರಾಮನಗರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆರೋಗ್ಯ ಇಲಾಖೆಯೊಂದಿಗೆ ಹಗಲಿರುಳು ಶ್ರಮಿಸಿದ್ದ ಇವರ ಹುಟ್ಟುಹಬ್ಬವನ್ನ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ. ಇನ್ನುಳಿದ ಕೋವಿಡ್ ಸೋಂಕಿತರಿಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಇದಾಗಿದೆ.

ಇನ್ನು ಈ ಸಂದರ್ಭದಲ್ಲಿ ಪಿಪಿಇ ಕೀಟ್ ಧರಿಸಿ, ಡಿಎಚ್ಓ ಡಾ.ನಿರಂಜನ್ ಸೇರಿದಂತೆ ಇತರೆ ಸಿಬ್ಬಂದಿಗಳು ತಮ್ಮ ಇಲಾಖೆ ಸಿಬ್ಬಂದಿಯ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಧೈರ್ಯ ತುಂಬಿರುವುದು ವಿಶೇಷ.

ಇದನ್ನೂ ಓದಿ : ಬಿಹಾರದಲ್ಲಿ ಉದ್ಘಾಟನೆಯಾದ ಒಂದು ತಿಂಗಳೊಳಗೆ ಕುಸಿದುಬಿದ್ದ ಸೇತುವೆಈ ಬಗ್ಗೆ ರಾಮನಗರ ಜಿಲ್ಲಾ ಪಂಚಾಯತ್ ಟ್ವೀಟರ್ ಅಕೌಂಟ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಹ್ಯಾಪಿ ಬರ್ತ್ ಡೇ ಹೀರೋ ಎಂದು ಕೋವಿಡ್ ಸೋಂಕಿತ ವ್ಯಕ್ತಿಗೆ ಶುಭಕೋರುವ ಮೂಲಕ ಯಾರು ಭಯಪಡಬೇಡಿ ಎನ್ನುವ ಸಂದೇಶ ಸಾರಲಾಗಿದೆ. ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಅಶ್ವಥ್ ನಾರಾಯಣ್ ಸಹ ಸೋಂಕಿತ ವ್ಯಕ್ತಿಗೆ ಶುಭಕೋರಿದ್ದಾರೆ. ಅಲ್ಲದೆ, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
Published by: MAshok Kumar
First published: July 16, 2020, 2:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading