ಕೊರೋನಾ ಸೋಂಕಿತರನ್ನು ಖಾಸಗಿಯಿಂದ ಜಿಲ್ಲಾಸ್ಪತ್ರೆಗೆ ಶಿಫ್ಟ್‌; ಅನುಮಾನಕ್ಕೀಡಾದ ಕೋಲಾರ ಜಿಲ್ಲಾಡಳಿತದ ನಡೆ

ಮೇ 12 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಒಂದೇ ದಿನ 5 ಪ್ರಕರಣಗಳು ಪತ್ತೆಯಾದ ಹಿನ್ನಲೆ 5 ಸೋಂಕಿತರನ್ನ ಸೇರಿ 24 ಮಂದಿಗೆ ಜಾಲಪ್ಪ ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ಮಾಡಲಾಗಿದೆ.

news18-kannada
Updated:May 18, 2020, 10:19 PM IST
ಕೊರೋನಾ ಸೋಂಕಿತರನ್ನು ಖಾಸಗಿಯಿಂದ ಜಿಲ್ಲಾಸ್ಪತ್ರೆಗೆ ಶಿಫ್ಟ್‌; ಅನುಮಾನಕ್ಕೀಡಾದ ಕೋಲಾರ ಜಿಲ್ಲಾಡಳಿತದ ನಡೆ
ಕೋಲಾರ ಜಿಲ್ಲಾ ಆಸ್ಪತ್ರೆ.
  • Share this:
ಕೋಲಾರ (ಮೇ 18); ಮಹಾಮಾರಿ ಕೊರೊನಾ ಸೋಂಕು ಕೋಲಾರದಲ್ಲೂ ಕಾಣಿಸಿಕೊಂಡಿದ್ದು, ಪ್ರಸ್ತುತ 6 ಪ್ರಕರಣಗಳ ಪೈಕಿ ಓರ್ವ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಯಲ್ಲೂ 5 ಜನರನ್ನು ಖಾಸಗಿ ಆಸ್ಪತ್ರೆಯಲ್ಲೂ ದಾಖಲಿಸಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಈ ನಡುವೆ ಉಳಿದ ಐದು ಜನರನ್ನೂ ಸಹ ಸರ್ಕಾರಿ ಆಸ್ಪತ್ರೆಗೆ ರವಾನಿಸಲು ಜಿಲ್ಲಾಡಳಿತ ಮುಂದಾಗಿದೆ.

ಕೋಲಾರ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳ ಜೊತೆಗೆ ಸಭೆ ನಡೆಸಿರುವ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಸರ್ಕಾರಿ ಆಸ್ಪತ್ರೆಗೆ ರೋಗಿಗಳನ್ನ ಸ್ತಳಾಂತರ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ಈ ಐವರೂ ರೋಗಿಗಳ ದಿಢೀರ್‌ ಸ್ಥಳಾಂತರಕ್ಕೆ ಕಾರಣ ಏನು? ಎಂಬ ಅನುಮಾನ ಇದೀಗ ಎಲ್ಲೆಡೆ ಮೂಡಿದೆ.

ಮೇ 12 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಒಂದೇ ದಿನ 5 ಪ್ರಕರಣಗಳು ಪತ್ತೆಯಾದ ಹಿನ್ನಲೆ 5 ಸೋಂಕಿತರನ್ನ ಸೇರಿ 24 ಮಂದಿಗೆ ಜಾಲಪ್ಪ ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಇದರ ಬಳಿಕ ಕೆಜಿಎಪ್ ತಾಲೂಕಿನಲ್ಲಿ ಪತ್ತೆಯಾದ 1 ಪ್ರಕರಣವನ್ನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

ಈ ನಡುವೆ ಅಂತರಾಜ್ಯ ಗಡಿ ಹಂಚಿಕೊಂಡಿರುವ ಕೋಲಾರ ಜಿಲ್ಲೆಗೆ ಕೊರೊನಾ ಮಹಾಮಾರಿ ಅಪ್ಪಳಿಸಿದೆ. ಮುಂದೆ ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಾಗುವ ಆತಂಕದಿಂದ ಜಿಲ್ಲಾಡಳಿತ ಸರ್ಕಾರಕ್ಕೆ ಈ ಹಿಂದೆಯೇ ಲ್ಯಾಬ್ ನಿರ್ಮಿಸಲು ಅನುಮತಿ ಕೋರಿ ಪತ್ರವನ್ನು ಬರೆದಿತ್ತು. ಅದರಂತೆ  ಕೊರೊನಾ ಟೆಸ್ಟ್ ಲ್ಯಾಬ್ ಸ್ತಾಪಿಸಲು ಸರ್ಕಾರ ಒಪ್ಪಿಗೆ ನೀಡಿದ್ದು ಮೇ 20 ರಂದು ಅಧಿಕೃತವಾಗಿ ಲ್ಯಾಬ್ ಗೆ ಚಾಲನೆ ಸಿಗುವ ಸಾಧ್ಯತೆಯಿದೆ ಎಂದು ಕೋಲಾರ ಅಪರ ಡಿಸಿ ಬಿ ಶಿವಸ್ವಾಮಿ ತಿಳಿಸಿದ್ದಾರೆ.

(ವರದಿ - ರಘುರಾಜ್ ಕೋಲಾರ) 

ಇದನ್ನೂ ಓದಿ : ಚನ್ನಪಟ್ಟಣದಲ್ಲಿ ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶ; ರೈತರಿಗೆ ಅವಾಜ್ ಹಾಕಿದ ತಹಶೀಲ್ದಾರ್‌
First published: May 18, 2020, 10:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading