ಮಂಡ್ಯ ಬಳಿಕ ತಮಿಳುನಾಡಿನಲ್ಲಿ ಕೊರೋನಾ ದೇವಿಗೆ ವಿಶೇಷ ಪೂಜೆ; ಕೊಯಿಮತ್ತೂರಿನಲ್ಲಿ ದೇವಾಲಯ ನಿರ್ಮಾಣ

ಮಳವಳ್ಳಿ ಪಟ್ಟಣದ ಎನ್‌ಇಎಸ್ ಬಡಾವಣೆಯ ಜನರು ತಮ್ಮ ಬಡಾವಣೆಯ ರಸ್ತೆಗಳಲ್ಲಿ ಕೊರೋನಾ ನಿವಾರಣೆ ಮಾಡುವಂತೆ ದಂಡಿನ ಮಾರಮ್ಮನ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದರು.

ಕೊರೋನಾ ದೇವಿ ದೇವಸ್ಥಾನ

ಕೊರೋನಾ ದೇವಿ ದೇವಸ್ಥಾನ

 • Share this:
  ಚೆನ್ನೈ (ಮೇ. 20):  ವ್ಯಕ್ತಿ ಪೂಜೆ ದೈವಗಳ ಆರಾಧನೆಯಲ್ಲಿ ತಮಿಳುನಾಡು ವಿಶೇಷ. ಜನರನ್ನು ದೇವರೆಂದು ಬಿಂಬಿಸಿ, ಅವರಿಗೆ ಪೂಜ್ಯನೀಯ ಸ್ಥಾನ ನೀಡಿ ದೇವಾಯಗಳನ್ನು ಕಟ್ಟುವ ವಿಶಿಷ್ಠ ಸಂಸ್ಕೃತಿ ಅದು ತಮಿಳುನಾಡಿನಲ್ಲಿ ಮಾತ್ರ ಕಾಣಲು ಸಾಧ್ಯ. ಸಿನಿಮಾ ನಟರಿಂದ ರಾಜಕೀಯ ನಾಯಕರವರೆಗೆ ವ್ಯಕ್ತಿಗಳಿಗೆ ದೈವತ್ವದ ಸ್ಥಾನವನ್ನು ನೀಡುತ್ತಾರೆ. ಸದ್ಯ ಈಗ ತಮಿಳುನಾಡಿನಲ್ಲಿ ವ್ಯಕ್ತಿ ಹೊರತಾಗಿ ದೇವರ ಸ್ಥಾನ ಪಡೆದಿರುವುದು ಕೊರೋನಾ. ಅಚ್ಚರಿಯಾದರೂ ನಿಜ. ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೋನಾಗೆ ಈಗ ತಮಿಳುನಾಡಿನಲ್ಲಿ ದೇವರ ಸ್ವರೂಪ ನೀಡಲಾಗಿದೆ. ಈ ಮೂಲಕ ಕೊರೋನಾ ಆರ್ಭಟವನ್ನು ತಣ್ಣಾಗಾಗಿಸುವಂತೆ ಕೊರೋನಾ ಅಮ್ಮನಿಗೆ ವಿಶೇಷ ಪೂಜೆ ನಡೆಸಲಾಗುತ್ತಿದೆ.

  ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕಣ್ಣಿಗೆ ಕಾಣದ ವೈರಸ್​ ಕೊರೋನಾಗೆ ಇಡೀ ಮನುಷ್ಯ ಸಂಕುಲ ಬೆಚ್ಚಿದೆ. ಈ ವೈರಸ್​ ಹರಡದಂತೆ ಜನರ ರಕ್ಷಣೆಗೆ ಸರ್ಕಾರ ಲಾಕ್​ಡೌನ್​ ನಂತಹ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆದರೂ ಕೂಡ ಸೋಂಕಿನ ಆರ್ಭಟ ಮಾತ್ರ ಕೊಂಚವೂ ಕ್ಷೀಣಿಸಿಲ್ಲ. ಇದೇ ಕಾರಣಕ್ಕೆ ಸೋಂಕು ನಿವಾರಣೆಗಾಗಿ ಈಗ ವಿಶೇಷ ಪೂಜೆಗೆ ಮೊರೆ ಹೋಗಿದ್ದಾರೆ ತಮಿಳುನಾಡಿನ ಕೊಯಿಮತ್ತೂರಿನ ಜನ. ಕೊಯಿಮತ್ತೂರಿನ ಹೆಸರಾಂತ ಕಾಮಾಚಿಪುರಿ ಅಧೀನಂ ಪೀಠ ಕೋವಿಡ್​ ಸೋಂಕಿಗೆಗಾಗಿ ವಿಶೇಷವಾಗಿ ಕೊರೋನಾ ದೇವಿ ದೇಗುಲವನ್ನು ನಿರ್ಮಿಸಿದೆ. ಈ ದೇವಾಲಯದಲ್ಲಿ ಕೊರೋನಾ ದೇವರನ್ನು ಶಾಂತಗೊಳಿಸಿ, ಸೋಂಕು ನಿವಾರಣೆಯಾಗುವಂತೆ ದಿನನಿತ್ಯ ಪೂಜೆ ನಡೆಸಲಾಗುತ್ತಿದೆ.

  ಈಗಾಗಲೇ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರೆವೇರಿಸಲಾಗುತ್ತಿದ್ದು, ಈ ದೇವಾಲದಯಲ್ಲಿ 48 ದಿನಗಳ ಕಾಲ ವಿಶೇಷ ಪೂಜೆ ಮತ್ತು ಪುನಸ್ಕಾರಗಳು ನಡೆಯಲಿದೆ. ಇದರ ಜೊತೆಗೆ ವಿಶೇಷ ಮಹಾಯಾಗವನ್ನು ಆಯೋಜಿಸಿದ್ದು, ಈ ಮೂಲಕ ದೇವರನ್ನು ಸಂತೃಪ್ತಿಗೊಳಿಸಿ ಶಾಂತವಾಗುವಂತೆ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಅಧೀನಂನ ಮುಖ್ಯಸ್ಥ ಶಿವಲಿಂಗೇಶ್ವರ್​ ತಿಳಿಸಿದ್ದಾರೆ.

  ಇದನ್ನು ಓದಿ: ಅತಿಯಾದ ವಿಟಮಿನ್​ ಡಿ ವಿಷಕಾರಿಯಾಗಬಲ್ಲದು; ಸೂರ್ಯನ ಬೆಳಕು ದೇಹಕ್ಕೆ ಎಷ್ಟು ಬೇಕು?

  ತಮಿಳುನಾಡಿನಲ್ಲಿ ಈ ಹಿಂದೆ ಸಾಂಕ್ರಾಮಿಕ ರೋಗಗಳು ಬಂದಾಗ ಅವುಗಳನ್ನು ದೇವಿ ರೂಪದಲ್ಲಿ ಆರಾಧಿಸಿ ದೇವಸ್ಥಾನ ನಿರ್ಮಿಸಲಾಗಿದೆ. ಈ ಹಿಂದೆ ಪ್ಲೇಗ್ ಜನರನ್ನು ಇನ್ನಿಲ್ಲಂತೆ ಕಾಡಿದಾಗ ಪ್ಲೇಗ್​​ ಮಾರಿಯಮ್ಮ ದೇವಾಲಯವನ್ನು ಕೊಯಿಮತ್ತೂರಿನಲ್ಲಿ ನಿರ್ಮಿಸಿ, ಪೂಜೆ ಸಲ್ಲಿಸಲಾಗಿತ್ತು.

  ಇದನ್ನು ಓದಿ: ಸೋಂಕಿನಿಂದ ಗುಣಮುಖರಾದ ಮೂರು ತಿಂಗಳ ಬಳಿಕ ಲಸಿಕೆ ಸೂಕ್ತ; ಹಾಲುಣಿಸುವ ತಾಯಂದಿರು ಪಡೆಯಬಹುದು ಲಸಿಕೆ

  ಮಂಡ್ಯದಲ್ಲಿ ಕೊರೋನಾ ಮಾರಿಗೆ ಕೋಳಿ ಬಲಿಕೊಟ್ಟಿದ್ದ ಭಕ್ತರು

  ಕೊರೋನ ಎರಡನೇ ಅಲೆ ಆರ್ಭಟ ರಾಜ್ಯದಲ್ಲಿ ಹೆಚ್ಚಾಗಿರುವ ಹಿನ್ನಲೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲೂ ಜನರು  ದಂಡಿನ ಮಾರಮ್ಮನ ಮೊರೆ ಹೋಗಿದ್ದರು. ಮಳವಳ್ಳಿ ಪಟ್ಟಣದ ಎನ್‌ಇಎಸ್ ಬಡಾವಣೆಯ ಜನರು ತಮ್ಮ ಬಡಾವಣೆಯ ರಸ್ತೆಗಳಲ್ಲಿ ಕೊರೋನಾ ನಿವಾರಣೆ ಮಾಡುವಂತೆ ದಂಡಿನ ಮಾರಮ್ಮನ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದರು. ರಸ್ತೆಗಳ ಮಧ್ಯೆ ಕಲ್ಲುಗಳನ್ನು ಇಟ್ಟು ಅದರ ಮೇಲೆ ಬೇವಿನ ಸೊಪ್ಪು ಅರಿಶಿಣ ಕುಂಕುಮಗಳನ್ನ ಹಾಕಿ ದೀಪದಾರತಿಗಳನ್ನು ಬೆಳಗಿ ವಿಶೇಷ ಪೂಜೆ ಸಲ್ಲಿಸಿದ್ದರು.

  ಈ ವೇಳೆ ದಂಡಿನ ಮಾರಮ್ಮನಿಗೆ ಕೊಳಿ ಬಲಿ ಕೊಟ್ಟಿದ್ದರು. ಈ ರೀತಿ ಪ್ರಾಣಿ ಬಲಿ ಕೊಟ್ಟು ಶಾಂತಿ ಮಾಡುವುದರ ಜೊತೆಗೆ ವಿಶೇಷ ಪೂಜೆ ಮಾಡೋದರಿಂದ ಕೊರೋನಾ ಮಹಾಮಾರಿ ತೊಲಗುತ್ತದೆ ಎಂದು ಇಲ್ಲಿನ ಜನರು ತಿಳಿಸಿದ್ದರು. ಇದೇ ಹಿನ್ನಲೆ ಇಡೀ ಬಡಾವಣೆ ಜನರು ದಂಡಿ ಮಾರಮ್ಮನ ಶಾಂತ ಗೊಳಿಸಲು ಪ್ರಾರ್ಥಿಸಿದರು. ಈ ಮೂಲಕ ಪ್ರಪಂಚವನ್ನು ನಲುಗಿಸುತ್ತಿರುವ ಕೊರೋನಾ ಸೋಂಕು ನಾಶವಾಗಲಿ ಎಂದು ಅವರು ತಿಳಿಸಿದ್ದರು.
  Published by:Seema R
  First published: