ಮೇಕೆಗೂ ಹಾಕಿದ್ರು ಮಾಸ್ಕ್; ಮಾನಸಿಕ ಅಸ್ವಸ್ಥನ ಬಳಿಯೂ ಮಾಸ್ಕ್; ಜಾಗೃತಗೊಂಡ ಬೆಳಗಾವಿ ಜನ

ಆಹಾರಕ್ಕೆ ಗತಿ ಇಲ್ಲದಿದ್ದರೂ ಈ ಭಿಕ್ಷುಕನಿಗೆ ಕೊರೋನಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಇದೆ. ಮಾಸ್ಕ್ ಹಾಕಿಕೊಳ್ಳುವ ಈ ಭಿಕ್ಷುಕ ಹಲವರಿಗೆ ಮಾದರಿಯಾಗಿದ್ದಾನೆ.

ಕುರಿಗಾಯಿ ಜೊತೆ ಮಾನಸಿಕ ಅಸ್ವಸ್ಥ

ಕುರಿಗಾಯಿ ಜೊತೆ ಮಾನಸಿಕ ಅಸ್ವಸ್ಥ

  • Share this:
ಬೆಳಗಾವಿ(ಮಾ. 31): ದೇಶಾದ್ಯಂತ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಸದ್ಯ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಹಾಗೂ ಸ್ಯಾನಿಟೈಜರ್ ಬಳಕೆ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕುರಿಗಾಯಿಯೊಬ್ಬ ತನ್ನ ಮೇಕೆಗೆ ಮಾಸ್ಕ್ ಹಾಕಿ ಗಮನ ಸೆಳೆದಿದ್ದಾನೆ.

ಬೆಳಗಾವಿ ತಾಲೂಕಿನ ಬಾಬಾನವಾಡಿ ಗ್ರಾಮದ ಬಳಿಯ ಪ್ರಕಾಶ ಎಂಬ ಪುಟ್ಟ ಬಾಲಕನೊಬ್ಬ ತನ್ನ ಮೇಕೆಗಳನ್ನು ಮೇಯಿಸಲು ಆಗಮಿಸಿದ್ದ. ಈ ವೇಳೆಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಎರಡು ಮಾಸ್ಕ್ ನೀಡಿದ್ದಾರೆ. ತಾನೊಂದು ಮಾಸ್ಕ್ ಹಾಕಿಕೊಂಡ ಬಾಲಕ ಪ್ರಕಾಶ, ಇನ್ನೊಂದು ಮಾಸ್ಕನ್ನು ತನ್ನ ನೆಚ್ಚಿನ ಮೇಕೆಗೆ ಹಾಕಿದ್ದಾನೆ ಇದನ್ನು ನೋಡಿದ ಮಾಜಿ ಮೇಯರ್ ವಿಜಯ್​ ಮೋರೆ ಬಾಲಕನಿಗೆ ಅಭಿನಂದನೆ ಸಲ್ಲಿದರು.

belagavi
ಬಾಲಕನಿಗೆ ಅಭಿನಂದನೆ ಸಲ್ಲಿದ ಮಾಜಿ ಮೇಯರ್ ವಿಜಯ್​ ಮೋರೆ


ಬೆಳಗಾವಿ ರೈಲು ನಿಲ್ದಾಣದ ಬಳಿ ಭಿಕ್ಷೆ ಬೇಡಿ ಬದುಕುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನ ನೆರವಿಗೆ ಸಾರ್ವಜನಿಕರು ಧಾವಿಸಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರೊಬ್ಬರೂ ರೈಲು ನಿಲ್ದಾಣಕ್ಕೆ ಬರುತ್ತಿಲ್ಲದಿದ್ದರಿಂದ ಹಸಿವಿನಿಂದ ಬಳಲುತ್ತಿದ್ದ ಈ ಮಾನಸಿಕ ಅಸ್ವಸ್ಥನಿಗೆ ಸಾರ್ವಜನಿಕರು ಆಹಾರ, ಬಿಸ್ಕತ್, ನೀರು ನೀಡಿ ಮಾನವೀಯತೆ ತೋರುತ್ತಿದ್ಧಾರೆ.

ಇದನ್ನೂ ಓದಿ : ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ - ಕಲ್ಲಂಗಡಿ ಮಾರಲಾಗದೆ ರೈತ ನೇಣಿಗೆ ಶರಣು

ಆದರೆ, ಆಹಾರಕ್ಕೆ ಗತಿ ಇಲ್ಲದಿದ್ದರೂ ಈ ಭಿಕ್ಷುಕನಿಗೆ ಕೊರೋನಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಇದೆ. ಮಾಸ್ಕ್ ಹಾಕಿಕೊಳ್ಳುವ ಈ ಭಿಕ್ಷುಕ ಹಲವರಿಗೆ ಮಾದರಿಯಾಗಿದ್ದಾನೆ.
First published: