ಕೊರೋನಾ ಮಹಾಭೀತಿ, ಷೇರುಪೇಟೆ ತಲ್ಲಣ, ಕುಸಿಯುತ್ತಿರುವ ಮೌಲ್ಯ, ವ್ಯಾಪಾರ ಪುನರಾರಂಭ

ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 2 ವರ್ಷಗಳಲ್ಲಿ ಶೇ.8.3 ರಷ್ಟು ಕುಸಿದಿದ್ದು, ಎಸ್ ಪಿ ಬಿಎಸ್‌ಇ ಸೆನ್ಸೆಕ್ಸ್ ಸುಮಾರು ಶೇ.8ರಷ್ಟು ಇಳಿಕೆ ದಾಖಲಿಸಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತದ ಷೇರು ಮಾರುಕಟ್ಟೆ ದಾಖಲಿಸಿರುವ ಅತ್ಯಂತ ಕನಿಷ್ಠ ಅಂಕ ಎಂದು ಈ ದಿನದ ವಹಿವಾಟನ್ನು ಗುರುತಿಸಲಾಗಿದೆ.

ಮುಂಬೈ ಷೇರುಪೇಟೆ.

ಮುಂಬೈ ಷೇರುಪೇಟೆ.

  • Share this:
ಮುಂಬೈ (ಮಾರ್ಚ್​ 13); ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್​ ನಿಂದಾಗಿ ಇಡೀ ಜಗತ್ತಿನ ಷೇರುಮಾರುಕಟ್ಟೆ ಇದೀಗ ಪಾತಾಳಕ್ಕೆ ಕುಸಿಯುತ್ತಿದೆ. ಗುರುವಾರ ಕಳೆದ ಎರಡು ವರ್ಷಗಳಲ್ಲೇ ಅತ್ಯಂತ ಕಳಪೆ ಸಾಧನೆ ಮಾಡಿದ್ದ ಸೆನ್ಸೆಕ್ಸ್​ ಮತ್ತು ನಿಫ್ಟಿ ಒಂದೇ ದಿನದಲ್ಲಿ 9 ಲಕ್ಷ ನಷ್ಟಕ್ಕೆ ಕಾರಣವಾಗಿತ್ತು. ಇಂದಿನ ಷೇರುಮಾರುಕಟ್ಟೆ ಮತ್ತೊಂದು ತೀವ್ರ ಕುಸಿತವನ್ನು ಕಂಡಿದ್ದು ಸೆನ್ಸೆಕ್ಸ್​ 3,000 ಅಂಕಗಳನ್ನು ಕಳೆದುಕೊಂಡಿದ್ದರೆ, ನಿಫ್ಟಿ ಕಳೆದ ಮೂರು ವರ್ಷದಲ್ಲೇ ದಾಖಲೆಯ ಕುಸಿತ ಅನುಭವಿಸಿದೆ. ಪರಿಣಾಮ ಎನ್​ಎಸ್​ಇ ಮತ್ತು ಬಿಎಸ್​ಇ ಟ್ರೇಡಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಮತ್ತೆ ಪುನರಾರಂಭಿಸಲಾಗಿದೆ.

ಸಿಂಗಾಪುರ್ ಎಕ್ಸ್​ಚೇಂಜ್​ನಲ್ಲಿ ಪಟ್ಟಿ ಮಾಡಲಾದ ಎನ್ಎಸ್ಇ ಸ್ಟಾಕ್ ಫ್ಯೂಚರ್ಸ್ ಕಳೆದ ಎರಡು ವರ್ಷಗಳಿಗಿಂತಲೂ ಕಡಿಮೆಯಾಗಿದೆ. ವಹಿವಾಟಿನ ಪ್ರಮಾಣ ಶೇ. 6.3% ರಷ್ಟು ಕುಸಿದಿದೆ.

ಕೊರೋನಾ ಜಪಾನ್​ ದೇಶವನ್ನೂ ಇನ್ನಿಲ್ಲದಂತೆ ಕಾಡುತ್ತಿದ್ದು, 2008 ರ ಆರ್ಥಿಕ ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿಗೆ ಶೇ.10 ರಷ್ಟು ಕುಸಿದಿದೆ ಮತ್ತು ಎಂಎಸ್‌ಸಿಐ ಜಪಾನ್‌ನ ಹೊರಗಿನ ಏಷ್ಯಾ-ಪೆಸಿಫಿಕ್ ಷೇರುಗಳ ವಿಶಾಲ ಸೂಚ್ಯಂಕ ಶೇ.2 ರಷ್ಟು ಕುಸಿದಿದೆ.

ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 2 ವರ್ಷಗಳಲ್ಲಿ ಶೇ.8.3 ರಷ್ಟು ಕುಸಿದಿದ್ದು, ಎಸ್ ಪಿ ಬಿಎಸ್‌ಇ ಸೆನ್ಸೆಕ್ಸ್ ಸುಮಾರು ಶೇ.8ರಷ್ಟು ಇಳಿಕೆ ದಾಖಲಿಸಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತದ ಷೇರು ಮಾರುಕಟ್ಟೆ ದಾಖಲಿಸಿರುವ ಅತ್ಯಂತ ಕನಿಷ್ಠ ಅಂಕ ಎಂದು ಈ ದಿನದ ವಹಿವಾಟನ್ನು ಗುರುತಿಸಲಾಗಿದೆ.  ಡಾಲರ್​ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಪಾತಾಳಕ್ಕೆ ಕುಸಿದಿದೆ. ಪರಿಣಾಮ ಇಂದಿನ ಮಾರುಕಟ್ಟೆ ವಹಿವಾಟಿಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ.

ಕೊರೋನಾ ವೈರಸ್​ನಿಂದಾಗಿ ವಿಶ್ವದಾದ್ಯಂತ 3500 ಜನ ಮೃತಪಟ್ಟಿದ್ದರೆ, ಭಾರತದಲ್ಲಿ 70ಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗುಲಿದೆ. ಈ ಪೈಕಿ ಗುರುವಾರ ಕಲಬುರ್ಗಿಯಲ್ಲಿ ಮೊದಲ ಬಲಿ ದಾಖಲಾಗಿದೆ.

ಇದನ್ನೂ ಓದಿ : ಕೊರೋನಾ ಎಫೆಕ್ಟ್​; ಪಾತಾಳಕ್ಕೆ ಕುಸಿದ ಷೇರುಪೇಟೆ ಸೂಚ್ಯಾಂಕ, ಒಂದೇ ದಿನಕ್ಕೆ 9 ಲಕ್ಷ ಕೋಟಿ ನಷ್ಟ
First published: