ಕೊರೋನಾ ಎಫೆಕ್ಟ್: ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕಾರ್ಮಿಕರು ಅತಂತ್ರ

ಮಹಾರಾಷ್ಟ್ರದಲ್ಲಿ ಕೊರೋನಾ ತಾಂಡವವಾಡುತ್ತಿದೆ.  ಪರಿಣಾಮ ಕಂಪನಿಗಳು ಕಾರ್ಯಾಚರಣೆಯನ್ನ ಸ್ಥಗಿತೊಳಿಸಿವೆ. ಉತ್ಪಾದನೆ ಕುಸಿತಗೊಂಡ ಹಿನ್ನೆಲೆ ರಾಜ್ಯದಿಂದ ತೆರಳುತ್ತಿದ್ದ ಸಾವಿರಾರು ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕೋಡಿ(ಜು.07): ಕೊರೋನಾ ಮಹಾಮಾರಿ ದೇಶಕ್ಕೆ ವಕ್ಕರಿಸಿದಾಗಿನಿಂದ ಬಡವ-ಬಲ್ಲಿದ ಎನ್ನದೆ ಎಲ್ಲಾ ವರ್ಗದ ಜನರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದ ಜನರ ಪರಿಸ್ಥಿತಿ ಹೇಳತೀರದು. ದುಡಿಯಲು ಕೆಲಸವಿಲ್ಲದೇ, ಕೆಲಸವಿದ್ದರೂ ಕೊರೋನಾ ಭಯದಿಂದ ಹೋಗಲೂ ಆಗದ ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.

ಇನ್ನು ದೊಡ್ಡ ದೊಡ್ಡ ನಗರಗಳಲ್ಲಿ ಕೊರೋನಾ ಭಯಕ್ಕೆ ದುಡಿಯುವ ಜನ ಸಹ ತಮ್ಮ ಮನೆಗಳನ್ನ ಖಾಲಿ ಮಾಡಿಕೊಂಡು ಹಳ್ಳಿಗಳತ್ತ ಗುಳೆ ಹೊರಟಿದ್ದಾರೆ. ಉತ್ತರ ಕರ್ನಾಟಕದ ಎರಡನೇ ರಾಜಧಾನಿ ಎನ್ನಲಾಗುವ ಬೆಳಗಾವಿ ಜಿಲ್ಲೆಯ ಕಾರ್ಮಿಕರ ಪರಿಸ್ಥಿತಿ ಕೂಡ ಇದರಿಂದ ಹೊರತಾಗಿಲ್ಲ. ಮೊದಲೇ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಈ ಜಿಲ್ಲೆಯಲ್ಲಿ ಗಡಿ ಗ್ರಾಮದ ಜನ ಹೆಚ್ಚಾಗಿ ಮಹಾರಾಷ್ಟ್ರವನ್ನೆ ಅವಲಂಬಿತರಾಗಿದ್ದಾರೆ. ಯಾಕೆಂದರೆ ಪಕ್ಕದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಇಂಡಸ್ಟ್ರೀಸ್ ಇರುವ ಜಿಲ್ಲೆಯಾಗಿದೆ.

ನಿತ್ಯ ಗಡಿ ಗ್ರಾಮದ ಸಾವಿರಾರು ಜನ ಕೊಲ್ಲಾಪುರದ ಎಂ.ಐ.ಡಿ.ಸಿ ( ಮಹಾರಾಷ್ಟ್ರ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ) ಗೆ ಕೆಲಸಕ್ಕೆಂದು ತೆರಳುತ್ತಿದ್ದರು. ಸ್ಟೀಲ್ ತಯಾರಿಕೆ, ಟೆಕ್ಷಟೈಲ್, ಆಟೋಮೊಬೈಲ್, ಹಾರ್ಡ್​​ವೇರ್​​ನಂತಹ ದೊಡ್ಡ ದೊಡ್ಡ ನೂರಕ್ಕೂ ಹೆಚ್ಚು ಕಂಪನಿಗಳ ತಯಾರಿಕಾ ಘಟಕಗಳಿದ್ದು, ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಂಡು ಬಂದಿತ್ತು.

ಕೊರೋನಾ ಭೀತಿ: ಚಂಡೀಗರ್​ನಿಂದ ಬೆಂಗಳೂರಿಗೆ ಬಂದ ಹೆಂಡತಿಯನ್ನು ಮನೆಗೆ ಸೇರಿಸದ ಗಂಡ

ಆದರೆ ಮಹಾರಾಷ್ಟ್ರದಲ್ಲಿ ಕೊರೋನಾ ತಾಂಡವವಾಡುತ್ತಿದೆ.  ಪರಿಣಾಮ ಕಂಪನಿಗಳು ಕಾರ್ಯಾಚರಣೆಯನ್ನ ಸ್ಥಗಿತೊಳಿಸಿವೆ. ಉತ್ಪಾದನೆ ಕುಸಿತಗೊಂಡ ಹಿನ್ನೆಲೆ ರಾಜ್ಯದಿಂದ ತೆರಳುತ್ತಿದ್ದ ಸಾವಿರಾರು ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ.

ಇನ್ನು ಕೊರೋನಾ ಬಂದಾಗಿನಿಂದ ಸರ್ಕಾರಗಳು ಅಂತರರಾಜ್ಯ ಸಂಚಾರವನ್ನ ನಿಷೇಧಿಸಿದ ಹಿನ್ನಲೆ ಸಾಕಷ್ಟು ಕಾರ್ಮಿಕರು ಸಹ ಪರದಾಡುವಂತಾಗಿದೆ. ನಿತ್ಯ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಅಥಣಿ, ಚಿಕ್ಕೋಡಿ, ಕಾಗವಾಡ, ರಾಯಬಾಗ, ಹುಕ್ಕೇರಿ ತಾಲೂಕಿನಿಂದ ಕೊಲ್ಲಾಪುರಕ್ಕೆ ಹೋಗಿ ಬಂದು ಕೆಲಸ ಮಾಡುತ್ತಿದ್ದ ಕಾರ್ಮಿಕರು ಪರದಾಟ ನಡೆಸುತ್ತಿದ್ದಾರೆ. ಮೊದಲೆಲ್ಲಾ ಸರ್ಕಾರಿ ಬಸ್ ಅಥವಾ ಸ್ವತಃ ವಾಹನಗಳ ಮೂಲಕ ಕೆಲಸಕ್ಕೆ ತೆರಳಿ ವಾಪಸಾಗುತ್ತಿದ್ದರು. ಆದರೆ ಈಗ ಸಂಚಾರ ನಿಷೇಧ ಹಿನ್ನಲೆ ಕೆಲಸಕ್ಕೆ ಹೋಗದ ಸ್ಥಿತಿಯಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ.

ಒಟ್ಟಿನಲ್ಲಿ ಕಳೆದ ಹತ್ತಾರು ವರ್ಷಗಳಿಂದ ಮಹಾರಾಷ್ಟ್ರದ ಇಂಡಸ್ಟ್ರೀಸ್ ಗಳನ್ನೆ ನಂಬಿಕೊಂಡು ಬದುಕು ಸಾಗಿಸುತ್ತಿದ್ದ ಜಿಲ್ಲೆಯ ಸಾವಿರಾರು ಕಾರ್ಮಿಕ ಕುಟುಂಬಗಳು ಈಗ ಉದ್ಯೋಗವಿಲ್ಲದೆ ಪರದಾಡುವಂತಾಗಿದೆ.
Published by:Latha CG
First published: