ಬೆಂಗಳೂರು(ಜೂ.12): ಕೋವಿಡ್ -19 ಕಾರಣದಿಂದ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಆದಷ್ಟು ಆರ್ಥಿಕ ಹೊರೆಯಿಂದ ಬಚಾವ್ ಆಗುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಹೆಜ್ಜೆ ಇಟ್ಟಿದೆ.
ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಹೊಸ ನೇಮಕಾತಿ ಬೇಡವೆಂದು ಆದೇಶ ಹೊರಡಿಸಿದೆ. ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಇಂತಹ ಆದೇಶ ಹೊರ ಬಿದ್ದಿದೆ ಎನ್ನಲಾಗಿದೆ.
ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಲ್ಲಿಯೂ ಯಾವುದೇ ಹೊಸ ನೇಮಕಾತಿ ಬೇಡ ಎಂದು ಹೇಳಿದೆ. 2020-21 ಸಾಲಿನಲ್ಲಿ ಯಾವುದೇ ಭರ್ತಿ ಮಾಡುವಂತಿಲ್ಲ. ಈ ನಿಯಮ ಈಗಾಗಲೇ ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವ ನೇಮಕಗಳಿಗೂ ಅನ್ವಯವಾಗಲಿದೆ ಎಂದು ಇಲಾಖೆ ಹೇಳಿದೆ.
ಇದನ್ನೂ ಓದಿ : ಕಲ್ಲು ಎಸೆದ ಕುಡುಕರು, ಲಾಠಿ ಬೀಸಿದ ಪೊಲೀಸರು ; ನಿಷೇಧದ ಮಧ್ಯೆಯೂ ಕಾರಹುಣ್ಣಿಮೆ ಕರಿ ಆಚರಿಸಿದ ಗ್ರಾಮಸ್ಥರು
ಈ ಸಾಲಿನಲ್ಲಿ ಯಾವುದೇ ಹೊಸ ಅನುದಾನ ರಹಿತ ವಿದ್ಯಾ ಸಂಸ್ಥೆಗಳನ್ನು ವೇತನಾನುದಾನಕ್ಕೆ ಒಳಪಡಿಸುವಂತಿಲ್ಲ. ಈ ಎಲ್ಲಾ ನಿಯಮಗಳು ಸರಕಾರದ ಎಲ್ಲಾ ಇಲಾಖೆಗಳಡಿಯಲ್ಲಿ ಬರುವ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ವಸತಿ ನಿಲಯಗಳಿಗೆ ಹಾಗೂ ಈಗಾಗಲೇ ವೇತನಾನುದಾನಕ್ಕೆ ಒಳಪಡಿಸಲು ಸ್ವೀಕೃತಿಗೊಂಡಿರುವ ಮತ್ತು ಸ್ವೀಕೃತಗೊಳ್ಳುವ ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ, ಇನ್ನುಳಿದ ಅನುದಾನಿತ ಸಂಸ್ಥೆಗಳಿಗೂ ಸಹ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ