ಚಿಕ್ಕೋಡಿ(ಏ.11): ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಶಿಕ್ಷಕ ದೀಪಕ್ ಪಾಟೀಲ್ ಅವರು ಮೋಳೆ ಗ್ರಾಮದ ಜೀವನ ಜ್ಯೋತಿ ಫೌಂಡೇಷನ್ ಸಹಾಯದಿಂದ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಫೇಸ್‌ಬುಕ್ ಲೈವ್ ಹಾಗೂ ಮೋಳೆ ಸಮಾಚಾರ ಆನ್‌ಲೈನ್ ಗ್ರೂಪ್ ಮೂಲಕ ಪಾಠ ಬೋಧನೆ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಅನುಕೂಲವಾಗಿದೆ.
ದೀಪಕ್ ಪಾಟೀಲ್ ಇವರು ಮೂಲತಃ ವಿಜಯಪುರ ಜಿಲ್ಲೆಯವರಾಗಿದ್ದು ಬಿಇ ಮೆಕ್ಯಾನಿಕಲ್ ಪದವಿದರರು. ಈ ಮೊದಲು ವಿಜಯಪುರದ ಆ್ಯಭಿಷನ್ ಫಾರ್ ಮ್ಯಾಥ್ಸ್ ಆ್ಯಂಡ್ ಪಿಜಿಕ್ಸ್ ಕಾಲೇಜಿನಲ್ಲಿ 3 ವರ್ಷ ಉಪನ್ಯಾಸಕ ವೃತ್ತಿ ಮಾಡಿ ನಂತರ ಅತಿಥಿ ಶಿಕ್ಷಕರಾಗಿ ಹಲವೆಡೆ ಕೆಲಸ ಮಾಡಿದ್ದಾರೆ.
ಇನ್ನು ಈ ಲಾಕ್ ಡೌನ್ ನಿಂದ ವಿದ್ಯಾರ್ಥಿಗಳು ತರಗತಿಗಳು ಇಲ್ಲದೇ ಮನೆಯಲ್ಲಿಯೆ ಕುಳಿತು ಓದುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಈ ಆನ್ ಲೈನ್ ಕ್ಲಾಸ್ ನಿಂದ ನಮ್ಮ ಮಕ್ಕಳಿಗೆ ಮೊಬೈಲ್ ನಲ್ಲಿಯೇ ಪಾಠ ಕಲಿಯಲು ಅನಕೂಲವಾಗಿದೆ ಅಂತಾರೆ ಪೋಷಕರು
ನಿತ್ಯ ಎರಡರಿಂದ ಮೂರು ಗಂಟೆಯವರೆಗೆ ಮೋಳೆ ಸಮಾಚಾರಗಳು ಎಂಬ ಫೇಸ್ ಬುಕ್ ಪೇಜ್ನಲ್ಲಿ ಪಿಯುಸಿ ಸೈನ್ಸ್ ವಿಷಯಕ್ಕೆ ಸಂಬಂಧಿಸಿದ ಪಾಠಗಳು ಲೈವ್ ಬರುತ್ತಿವೆ. ಇದರಿಂದ ನಮಗೆ ಮತ್ತೇ ಸಿಲೆಬಸ್ ರಿವಿಜನ್ ಆಗುತ್ತಿದ್ದು ಇದರಿಂದಾಗಿ ನಮಗೆ ಸಹಾಯವಾಗಿದೆ ಅಂತಾರೆ ಇಲ್ಲಿನ ವಿದ್ಯಾರ್ಥಿಗಳು.
ಇದನ್ನೂ ಓದಿ : ಗುಣಮಟ್ಟದ ಮಾಸ್ಕ್ ಸಿಗದ ಕಾರಣ - ಗಾರ್ಮೆಂಟ್ನ್ನು ಮಾಸ್ಕ್ ಫ್ಯಾಕ್ಟರಿಯನ್ನಾಗಿಸಿದ ಹಬೀಬ್
ಒಟ್ಟಿನಲ್ಲಿ ಈ ಲಾಕ್ ಡೌನ್ ನಿಂದ ಶಾಲಾ ಕಾಲೇಜುಗಳು ಬಂದ ಆಗಿದ್ದು ವಿದ್ಯಾರ್ಥಿಗಳು ಮನೆಯಲ್ಲಿಯೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಶಿಕ್ಷಕ ಪ್ರವೀಣ್ ಮಾಡಿರುವ ಹೊಸ ಐಡಿಯಾದಿಂದಾಗಿ ಮಕ್ಕಳು ಮನೆಯಲ್ಲಿ ಇದ್ದುಕೊಂಡು ಶಾಲೆ ಕಲಿಯುಲು ಅನುಕೂಲವಾಗಿದೆ. ಇಂತಹ ತಂತ್ರಜ್ಞಾನ ಮೂಲಕ ಇನ್ನುಳಿದ ಶಿಕ್ಷಕರು ಕಲಿಗೆಕೆಗೆ ಮುಂದಾದರೇ ಇನ್ನು ಹೆಚ್ಚಿನ ಮಕ್ಕಳಿಗೆ ಅನುಕೂಲವಾಗುತ್ತೆ ಇನ್ನುಳಿದ ಶಿಕ್ಷಕರ ಇಂತಹ ಪ್ರಯತ್ನ ನಡೆಸಲಿ.
(ವರದಿ : ಲೋಹಿತ್ ಶಿರೋಳ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ