HOME » NEWS » Coronavirus-latest-news » CORONA EFFECT SOME OF THE MUSEUMS IN MYSORE ARE A TEMPORARY CLOSED MAK

ಕೊರೋನಾ ಭೀತಿ, ಸಾಂಸ್ಕೃತಿಕ ನಗರಿಯ ಶುಕವನ ಬಂದ್; ಗಣಪತಿ ಸಚ್ಜಿದಾನಂದ ಸ್ವಾಮೀಜಿಯೂ ಹಾಕಿದ್ದಾರೆ ಮಾಸ್ಕ್

ಪ್ರಪಂಚದಾದ್ಯಂತ ಕೊರೋನಾ ಕೇಕೆ ಹಾಕುತ್ತಿದ್ದು ಮರಣ ಮೃದಂಗ ಬಾರಿಸುತ್ತಿದೆ. ಭಾರತದಲ್ಲೂ ಕೊರೋನಾ ಭಯ ಹೆಚ್ಚಾಗುತ್ತಲೆ ಇದೆ. ಎತ್ತ ನೋಡಿದರು ಮಾಸ್ಕ್ ಧರಿಸಿರುವ ವ್ಯಕ್ತಿಗಳೆ ಕಾಣುತ್ತಿದ್ದು, ಜನಸಂದಣಿ ಇರುವ ಸ್ಥಳಗಳು ಖಾಲಿ ಖಾಲಿಯಾಗಿವೆ. ಅದೆ ರೀತಿ ಮೈಸೂರಿನಲ್ಲೂ ಕೊರೋನಾ ಬಗ್ಗೆ ಮಂಜಾಗೃತಾ ಕ್ರಮ ಕೈಗೊಂಡಿದ್ದು, ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಹಲವು ಮ್ಯೂಸಿಯಂಗಳನ್ನ ಬಂದ್ ಮಾಡಲಾಗಿದೆ.

news18-kannada
Updated:March 8, 2020, 8:10 PM IST
ಕೊರೋನಾ ಭೀತಿ, ಸಾಂಸ್ಕೃತಿಕ ನಗರಿಯ ಶುಕವನ ಬಂದ್; ಗಣಪತಿ ಸಚ್ಜಿದಾನಂದ ಸ್ವಾಮೀಜಿಯೂ ಹಾಕಿದ್ದಾರೆ ಮಾಸ್ಕ್
ಮೈಸೂರಿನ ಶುಕವನದ ಪಕ್ಷಿಧಾಮ.
  • Share this:
ಸಾಂಸ್ಕೃತಿಕ ನಗರಿ ಮೈಸೂರಿ‌ಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಕುರಿತ ಮುಂಜಾಗ್ರತಾ ‌ಕ್ರಮಗಳು ಹೆಚ್ಚಾಗಿದ್ದು, ಪ್ರಸಿದ್ದ ಗಣಪತಿ ಸಚ್ಚಿದಾನಂದ ಆಶ್ರಮದ ಮ್ಯೂಸಿಯಂಗಳನ್ನು ಬಂದ್ ಮಾಡಲಾಗಿದೆ. ಅಲ್ಲದೆ, ಆಶ್ರಮದ ಶುಕವನ ಪಕ್ಷಿಧಾಮ, ಕಿಷ್ಕಿಂಧ ಮೂಲಿಕಾ ಬೋನ್ಸಾಯಿ ಗಾರ್ಡನ್, ವಿಶ್ವಂ ವಸ್ತು ಸಂಗ್ರಹಾಲಯಕ್ಕೆ ಪ್ರವಾಸಿಗರ ಪ್ರವೇಶ ನಿಷೇಧವಾಗಿದ್ದು ಇಡೀ ಆಶ್ರಮ ಇದೀಗ ಮಾಸ್ಕ್ ಮಯವಾಗಿದೆ.

ಹೌದು  ಪ್ರಪಂಚದಾದ್ಯಂತ ಕೊರೋನಾ ಕೇಕೆ ಹಾಕುತ್ತಿದ್ದು ಮರಣ ಮೃದಂಗ ಬಾರಿಸುತ್ತಿದೆ. ಭಾರತದಲ್ಲೂ ಕೊರೋನಾ ಭಯ ಹೆಚ್ಚಾಗುತ್ತಲೆ ಇದೆ. ಎತ್ತ ನೋಡಿದರು ಮಾಸ್ಕ್ ಧರಿಸಿರುವ ವ್ಯಕ್ತಿಗಳೆ ಕಾಣುತ್ತಿದ್ದು, ಜನಸಂದಣಿ ಇರುವ ಸ್ಥಳಗಳು ಖಾಲಿ ಖಾಲಿಯಾಗಿವೆ. ಅದೆ ರೀತಿ ಮೈಸೂರಿನಲ್ಲೂ ಕೊರೋನಾ ಬಗ್ಗೆ ಮಂಜಾಗೃತಾ ಕ್ರಮ ಕೈಗೊಂಡಿದ್ದು, ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಹಲವು ಮ್ಯೂಸಿಯಂಗಳನ್ನ ಬಂದ್ ಮಾಡಲಾಗಿದೆ.

ಅವಧೂತ ದತ್ತಪೀಠದ ಶುಕವನ ಪಕ್ಷಿಧಾಮ,  ಕಿಷ್ಕಿಂಧ ಮೂಲಿಕಾ ಬೋನ್ಸಾಯಿ ಗಾರ್ಡನ್, ವಿಶ್ವಂ ವಸ್ತು ಸಂಗ್ರಹಾಲಯಗಳನ್ನ ನಾಳೆಯಿಂದ ಅನಿರ್ದಿಷ್ಟಾವಧಿವರೆಗೆ ತಾತ್ಕಾಲಿಕ ಬಂದ್ ಮಾಡಿದ್ದು ಕರೊನಾ ವೈರಸ್ ಹರಡದಂತೆ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಆಶ್ರಮದ ವೆಬ್‌ಸೈಟ್‌ನಲ್ಲಿ ಕನ್ನಡ, ಇಂಗ್ಲಿಷ್, ತೆಲುಗು ಭಾಷೆಯಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ನಾಳೆಯಿಂದ ಈ ಮೂರು ಸಾರ್ವಜನಿಕ ಸ್ಥಳಗಳಿಗೆ ಭಕ್ತರು ಪ್ರವಾಸಿಗರನ್ನ ನಿಷೇಧಿಸಲಾಗಿದೆ. ಶುಕವನದಲ್ಲಿ 3000 ಗಿಳಿಗಳಿದ್ದು ಅವುಗಳ ಆರೋಗ್ಯ ದೃಷ್ಟಿಯಿಂದಯೂ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಇನ್ನು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯೇ ಭಕ್ತರಿಗೆ ಎಚ್ಚರಿಕೆಯಿಂದಿರಿ ಅಂತ ಸಂದೇಶ ನೀಡಿದ್ದಾರೆ. "ಯಾರು ಮಾಸ್ಕ್ ಇಲ್ಲದೆ ಓಡಾಡಬೇಡಿ, ನಾವು ಶುಕವನ, ಬೋನ್ಸಯ್ ಮ್ಯೂಸಿಯಂ, ವಿಶ್ವಂ ಮ್ಯೂಸಿಯಂ ಮೂರು ಸ್ಥಳಗಳನ್ನ ಮುಂದಿನ ಒಂದು ತಿಂಗಳ ಕಾಲ ಬಂದ್ ಮಾಡುತ್ತಿದ್ದೇವೆ, ಇದನ್ನ ಹೇಳಲು ನಮಗೆ ಬೇಸರವಾಗುತ್ತಿದೆ ಆದ್ರೂ ಭಕ್ತರು ಹಾಗೂ ಪ್ರಾಣಿ ಪಕ್ಷಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯ" ಎಂದಿದ್ದಾರೆ.

ಇನ್ನು ಆಶ್ರಮದಲ್ಲಿ ಮ್ಯೂಸಿಯಂ ಅಷ್ಟೇ ಅಲ್ಲದೆ ಧಾರ್ಮಿಕ ಚಟುವಟಿಕೆಗಳಿಗೂ ಕೊರೋನಾ ಅಡ್ಡಿಯಾಗಿದೆ. ಕೋರೋನಾದಿಂದಾಗಿ ಅವಧೂತ ದತ್ತಪೀಠದಲ್ಲಿ ಹೈಅಲರ್ಟ್ ಪರಿಸ್ಥಿತಿ ಘೋಷಣೆಯಾಗಿದ್ದು, ಆಶ್ರಮದ ಆವರಣ ಮಾಸ್ಕ್‌‌ಮಯವಾಗಿದೆ. ಸ್ವತಃ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರೇ ಮಾಸ್ಕ್‌ ಧರಿಸಿದ್ದು, ಭಕ್ತರಿಗೂ ಉಚಿತವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

ಆಶ್ರಮಕ್ಕೆ ಬರುವ ಭಕ್ತರು ಮುಖ ಮುಚ್ಚಿಕೊಂಡು ಪ್ರಾರ್ಥನೆ ಮತ್ತು ದೇವರ ದರ್ಶನ ಪಡೆಯುತ್ತಿದ್ದಾರೆ. ಈ ನಡುವೆ ಭಕ್ತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದಂತೆ ಮನವಿ ಮಾಡಿರುವ ಸ್ವಾಮೀಜಿ ಆಶ್ರಮಕ್ಕೆ ವಿದೇಶಿ ಭಕ್ತರು ಇರುವುದರಿಂದ ವಿದೇಶಿಗರಿಗೂ ಈಮೇಲ್ ಹಾಗೂ ವೆಬ್‌ಸೈಟ್ ಮೂಲಕ ಮಾಹಿತಿ ನೀಡಲಾಗಿದೆ.

 ಇದನ್ನೂ ಓದಿ : ದಲಿತರು ಬಂದರೆ ಮತ್ತೆ ಹೋಗಿ ಸ್ನಾನ ಮಾಡುವ ನೀಚ ರಾಜಕಾರಣಿ ಹೆಚ್.ಡಿ. ರೇವಣ್ಣ; ಎ. ಮಂಜು ಆರೋಪ
First published: March 8, 2020, 8:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories