ಕೊರೋನಾ ಎಫೆಕ್ಟ್; ಓಯೋ ಕಂಪನಿಯ ಭಾರತದ ಎಲ್ಲ ಸಿಬ್ಬಂದಿ ವೇತನ ಕಡಿತ

ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಜಾಗತಿಕವಾಗಿ ಲಾಕ್​ಡೌನ್​ ಘೋಷಿಸಿದ ಬಳಿಕ, ಜನರು ಪ್ರಯಾಣ ಮಾಡುವುದು ಸ್ಥಗಿತಗೊಂಡಿದೆ. ಹೀಗಾಗಿ ಪ್ರಯಾಣಿಕರನ್ನೇ ನಂಬಿಕೊಂಡಿದ್ದ ಓಯೋ ಉದ್ಯಮದಲ್ಲಿ ಭಾರೀ ನಷ್ಟವಾಗಿದೆ.

news18-kannada
Updated:April 22, 2020, 3:42 PM IST
ಕೊರೋನಾ ಎಫೆಕ್ಟ್; ಓಯೋ ಕಂಪನಿಯ ಭಾರತದ ಎಲ್ಲ ಸಿಬ್ಬಂದಿ ವೇತನ ಕಡಿತ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಏ.22): ಸಾಫ್ಟ್‌ ಬ್ಯಾಂಕ್ ಗ್ರೂಪ್ ಬೆಂಬಲಿತ ಓಯೋ ಹೊಟೇಲ್ ಮತ್ತು ಹೋಮ್ಸ್ ಎಲ್ಲಾ ಉದ್ಯೋಗಿಗಳ ವೇತನವನ್ನು ಏಪ್ರಿಲ್‌ನಿಂದ ನಾಲ್ಕು ತಿಂಗಳವರೆಗೆ ಶೇ. 25 ರಷ್ಟು ಕಡಿತಗೊಳಿಸಿದೆ. ಜೊತೆಗೆ ಕೆಲವು ಉದ್ಯೋಗಿಗಳನ್ನು ರಜೆ ಮೇಲೆ ಕಳುಹಿಸಿದೆ ಎಂದು ರಾಯಿಟರ್ಸ್​​ ವರದಿ ಮಾಡಿದೆ.

ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಜಾಗತಿಕವಾಗಿ ಲಾಕ್​ಡೌನ್​ ಘೋಷಿಸಿದ ಬಳಿಕ, ಜನರು ಪ್ರಯಾಣ ಮಾಡುವುದು ಸ್ಥಗಿತಗೊಂಡಿದೆ. ಹೀಗಾಗಿ ಪ್ರಯಾಣಿಕರನ್ನೇ ನಂಬಿಕೊಂಡಿದ್ದ ಓಯೋ ಉದ್ಯಮದಲ್ಲಿ ಭಾರೀ ನಷ್ಟವಾಗಿದೆ.

ಭಾರತದಲ್ಲಿ ನಮ್ಮ ಕಂಪನಿ ಅನಿವಾರ್ಯವಾಗಿ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಆ ಮೂಲಕ ನಾವು ಎಲ್ಲಾ ಓಯೋ ಸಿಬ್ಬಂದಿಗೆ ತಮ್ಮ ಸ್ಥಿರ ಪರಿಹಾರವನ್ನು ಶೇ. 25 ರಷ್ಟು ಕಡಿತಗೊಳಿಸುವಂತೆ ಒಪ್ಪಿಕೊಳ್ಳುವಂತೆ ಕೇಳುತ್ತಿದ್ದೇವೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ರೋಹಿತ್ ಕಪೂರ್ ಬುಧವಾರ ತಿಳಿಸಿದ್ದಾರೆ.

ಇದನ್ನೂ ಓದಿ : ತೈಲ ದರದಲ್ಲಿ ಮತ್ತೆ ಮಹಾಕುಸಿತ; 1999ರ ನಂತರ ಕನಿಷ್ಠ ಮಟ್ಟಕ್ಕೆ ಇಳಿದ ಕಚ್ಚಾ ತೈಲ

ಕೆಲವು ಉದ್ಯೋಗಿಗಳನ್ನು ಮೇ 4 ರಿಂದ ಆಗಸ್ಟ್ ವರೆಗೆ ಸೀಮಿತ ಪ್ರಯೋಜನಗಳೊಂದಿಗೆ ರಜೆ ಮೇಲೆ ಇಡಲಾಗುವುದು ಎಂದು ಕಪೂರ್ ಹೇಳಿದರು.
First published: April 22, 2020, 3:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading