HOME » NEWS » Coronavirus-latest-news » CORONA EFFECT SEIZE THE PROPERTY OF THOSE INVOLVED IN THE TABLIGHI CASE SAYS MP SHOBHA KARANDLAJE HK

ಆಸ್ತಿ ಮುಟ್ಟುಗೋಲು ಜತೆಗೆ ಕೊರೋನಾ ಸಾವಿಗೆ ತಬ್ಲಿಘಿ ಪ್ರಕರಣದಲ್ಲಿ ಭಾಗಿಯಾದವರನ್ನು ಹೊಣೆ ಮಾಡಿ; ಶೋಭಾ ಕರಂದ್ಲಾಜೆ ಆಗ್ರಹ

ಜೀವಕ್ಕೆ ಅಪಾಯ ತಂದವರ ಬಗ್ಗೆ ಕೇಂದ್ರ ಸರ್ಕಾರ ಕೂಡ ಗಮನ ಹರಿಸುತ್ತಿದ್ದು, ಇದರ ಬಗ್ಗೆ ವರದಿಯನ್ನ ತರಿಸಿಕೊಳ್ಳುತ್ತಿದೆ

news18-kannada
Updated:April 18, 2020, 5:01 PM IST
ಆಸ್ತಿ ಮುಟ್ಟುಗೋಲು ಜತೆಗೆ ಕೊರೋನಾ ಸಾವಿಗೆ ತಬ್ಲಿಘಿ ಪ್ರಕರಣದಲ್ಲಿ ಭಾಗಿಯಾದವರನ್ನು ಹೊಣೆ ಮಾಡಿ; ಶೋಭಾ ಕರಂದ್ಲಾಜೆ ಆಗ್ರಹ
ಶೋಭಾ ಕರಂದ್ಲಾಜೆ
  • Share this:
ಚಿಕ್ಕಮಗಳೂರು(ಏ.18): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಬ್ಲಿಘಿ ಪ್ರಕರಣದಲ್ಲಿ ಭಾಗಿಯಾದವರ ಆಸ್ತಿ ಮುಟ್ಟುಗೋಲು ಮಾಡಬೇಕು. ಅವರ ಮೇಲೆ ಪ್ರಕರಣ ದಾಖಲಿಸಿ ಕೊರೋನಾದಿಂದ ಸಾವನ್ನಪ್ಪಿರುವವರ ಹೊಣೆಯನ್ನು ತಬ್ಲಿಘಿಗಳೇ ಹೊರಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ತಬ್ಲಿಘಿಗಳು ಕೆಲವರು ನಾಪತ್ತೆಯಾಗಿದ್ದಾರೆ, ಯಾರು ನಾಪತ್ತೆ ಆಗಿದ್ದಾರೋ ಅವರನ್ನ ಕೂಡಲೇ ಪತ್ತೆ ಹಚ್ಚಬೇಕು. ಈ ಪ್ರಕರಣದಲ್ಲಿ ಸತ್ಯವನ್ನ ಕಲೆ ಹಾಕುವ ಕೆಲಸ ಅಧಿಕಾರಿಗಳ ಮಾಡುತ್ತಿದ್ದಾರೆ. ಜೀವಕ್ಕೆ ಅಪಾಯ ತಂದವರ ಬಗ್ಗೆ ಕೇಂದ್ರ ಸರ್ಕಾರ ಕೂಡ ಗಮನ ಹರಿಸುತ್ತಿದ್ದು, ಇದರ ಬಗ್ಗೆ ವರದಿಯನ್ನ ತರಿಸಿಕೊಳ್ಳುತ್ತಿದೆ. ಇಷ್ಟೆಲ್ಲಾ ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದರು ಕೆಲವರು ಮಾತ್ರ ತೆಲೆಕೆಡಿಸಿಕೊಳ್ಳುತ್ತಿಲ್ಲ, ಆಸ್ಪತ್ರೆಗೂ ದಾಖಲಾಗುತ್ತಿಲ್ಲ. ಇದನ್ನ ನೋಡಿದ್ರೆ ದೇಶದಲ್ಲಿ ಜಿಹಾದಿಗಳಿದ್ದಾರೆ ಎಂದು ಕಾಣಿಸುತ್ತದೆ ಎಂದರು.

ಇನ್ನು ಕೆಲ ಕಡೆಗಳಲ್ಲಿ ರಸ್ತೆಗಳಲ್ಲಿ ನೋಟು, ವಸ್ತುಗಳ ಮೇಲೆ ಎಂಜಲು ಉಗುಳುವ ಪ್ರಕರಣ ಸಂಬಂಧ ಕುರಿತು ಮಾತಾನಾಡಿದ ಅವರು ಭಾರತದಲ್ಲಿ ಸಮಸ್ಯೆಯಾಗಿದೆ ಎಂದು ಜಗತ್ತಿನ ಮುಂದೆ ಪ್ರದರ್ಶಿಸಬೇಕು ಅಂತಾ ಕೆಲ ದೇಶದ್ರೋಹಿಗಳು ಈ ರೀತಿಯ ಷಡ್ಯಂತ್ರ ರೂಪಿಸುತ್ತಿದ್ದಾರೆ. ಇದು ಒಂದೇ ರೀತಿಯಲ್ಲಿ ಭಯೋತ್ಪಾದನೆ ಇದ್ದ ಹಾಗೇ, ಭಾರತದ ಘನತೆಯನ್ನ ಕಡಿಮೆ ಮಾಡಲು ಷಡ್ಯಂತ್ರ ಮಾಡುತ್ತಿರುವವರ ಮೇಲೆ ದೇಶದ್ರೋಹದ ಕೇಸ್ ದಾಖಲಿಸಬೇಕು ಎಂದು ಶೋಭಾ ಒತ್ತಾಯಿಸಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆ

ಕರ್ನಾಟಕದಲ್ಲಿ ಇಂದು ಮತ್ತೆ 12 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ವೈರಸ್ ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಶುಕ್ರವಾರ ಸಂಜೆ 5ರಿಂದ ಇಲ್ಲಿಯವರೆಗೆ ಒಟ್ಟು 12 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 371ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 13 ಜನರು ಮೃತಪಟ್ಟಿದ್ದು, 92 ಮಂದಿ ಚೇತರಿಕೆ ಹೊಂದಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಕೊರೋನಾ ವೈರಸ್ ಸದ್ಯದ ಪರಿಸ್ಥಿತಿ ಇದ್ದುದರಲ್ಲಿ ಆಶಾದಾಯಕವಾಗಿದೆ
First published: April 18, 2020, 4:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories