• Home
  • »
  • News
  • »
  • coronavirus-latest-news
  • »
  • ಲಾಕ್ ಡೌನ್ ನಿಂದ ಬಡ ಕುಟುಂಬಗಳು ಅತಂತ್ರ - ದಿನಸಿ ಖರೀದಿಗೆ 500 ರೂ ಚೆಕ್ ವಿತರಿಸಿದ ದಾನಿ

ಲಾಕ್ ಡೌನ್ ನಿಂದ ಬಡ ಕುಟುಂಬಗಳು ಅತಂತ್ರ - ದಿನಸಿ ಖರೀದಿಗೆ 500 ರೂ ಚೆಕ್ ವಿತರಿಸಿದ ದಾನಿ

ಚೆಕ್ ವಿತರಣೆ ಮಾಡಿದ ಪ್ರಭಣ್ಣ ಹುಣಸಿಕಟ್ಟಿ ಕುಟುಂಬದವರು

ಚೆಕ್ ವಿತರಣೆ ಮಾಡಿದ ಪ್ರಭಣ್ಣ ಹುಣಸಿಕಟ್ಟಿ ಕುಟುಂಬದವರು

ಹೊಂಬಳ ಗ್ರಾಮದ ನೂರಾರು ಬಡಕುಟುಂಬಳಿಗೆ ಕಳೆದೊಂದು ವಾರದಿಂದ ಆಹಾರ ಧಾನ್ಯಗಳ ವಿತರಣೆ ಜೊತೆಗೆ ಅನೇಕ ವಸ್ತುಗಳನ್ನ ನೀಡುವ ಮೂಲಕ ಆಸರೆಯಾಗುತ್ತಿದ್ದಾರೆ

  • Share this:

ಗದಗ(ಏ.11): ಕೊರೋನಾ ವೈರಸ್‌ನ ಲಾಕ್ ಡೌನ್ ನಿಂದ ಅತಂತ್ರಕ್ಕೆ ಒಳಗಾದ ಬಡ ಕುಟುಂಬಗಳಿಗೆ ತಾತ್ಕಾಲಿಕವಾಗಿ ದಿನಸಿ ವಸ್ತುಗಳನ್ನು ಖರೀದಿಸಲು ಶ್ರೀಮಂತ ಕುಟುಂಬವೊಂದು 500 ರೂಪಾಯಿ ಚೆಕ್ ವಿತರಣೆ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಾತ್ರವಾಗಿದೆ.


ಗದಗ ತಾಲೂಕಿನ ಹೊಂಬಳ ಗ್ರಾಮದ ಶ್ರೀಮಂತ ಕುಟುಂಬ ಪ್ರಭಣ್ಣ ಹುಣಸಿಕಟ್ಟಿ ಗ್ರಾಮದ ಬಡ ಜನರ ಬೆನ್ನಿಗೆ ನಿಂತಿದ್ದಾರೆ. ಬಡಪಾಲಿನ ಆಶಾಕಿರಣರಾಗಿದ್ದಾರೆ. ಕೊರೋನಾ ವೈರಸ್ ಹರಡದಂತೆ ಲಾಕ್ ಡೌನ್ ಹಿನ್ನಲೆಯಲ್ಲಿ ಈಗಾಗಲೇ ಕೆಲಸವಿಲ್ಲ. ಹಣ ಸಿಗದೆ ಆಹಾರ ಖರೀದಿಗೆ ಹಣವಿಲ್ಲದೆ ಪರದಾಡುತ್ತಿವರಿಗೆ ಪ್ರಭಣ್ಣ ಹುಣಸಿಕಟ್ಟಿ 500 ರೂಪಾಯಿ ಚಕ್ ನೀಡುವ ಮೂಲಕ ಬಡವರ ಬಾಳಿನ ಬೆಳಕಾಗಿದ್ದಾರೆ.


ಅವರು ಹೊಂಬಳ ಗ್ರಾಮದ ನೂರಾರು ಬಡಕುಟುಂಬಳಿಗೆ ಕಳೆದೊಂದು ವಾರದಿಂದ ಆಹಾರ ಧಾನ್ಯಗಳ ವಿತರಣೆ ಜೊತೆಗೆ ಅನೇಕ ವಸ್ತುಗಳನ್ನ ನೀಡುವ ಮೂಲಕ ಆಸರೆಯಾಗುತ್ತಿದ್ದಾರೆ.


ಇಂದು ಸಹ ಗ್ರಾಮದಲ್ಲಿ ಅಂತ್ಯೋದಯ ಪಡಿತರ ಕಾರ್ಡ್​​ಗಳನ್ನು ಹೊಂದಿದ 285 ಬಡಕುಟುಂಬಗಳಿಗೆ, ಕೊರೋನಾ ಸಮಯದಲ್ಲಿ ಸಾಕಷ್ಟು ಕೆಲಸಮಾಡಿದ ಆಶಾ ಕಾರ್ಯಕರ್ತೆಯರಿಗೆ, ಗ್ರಾಮ ಪಂಚಾಯತ್ ಸ್ವಚ್ಚತಾ ಸಿಬ್ಬಂದಿಗಳಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಒಟ್ಟು ಮೂರು ನೂರಕ್ಕೂ ಅಧಿಕ ಜನರಿಗೆ ತಲಾ 500 ರೂಪಾಯಿ ಚೆಕ್ ವಿತರಣೆ ಮಾಡಿದ್ದಾರೆ.


ಪ್ರಭಣ್ಣ ಹುಣಸಿಕಟ್ಟಿ ಅವರ ಗ್ರಾಮದಲ್ಲಿ ಇದು ಮೊದಲಬಾರಿಗೆ ಅಲ್ಲ ಗ್ರಾಮದಲ್ಲಿ ಯಾರಿಗೆ ತೊಂದರೆಯಾದರು ಅವರ ಮನೆಗೆ ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಇವರು ಶ್ರೀಮಂತ ಕುಟುಂಬವಾದರು ಸರಳತೆಯ ಜೀವನ ಸಾಗಿಸುತ್ತಿದ್ದಾರೆ. ಅವರು ಈ ಹಿಂದೆ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಗಳು, ಕಾರ್ಯಕ್ರಮಗಳಿಗೆ, ಬಡವರ ಮದುವೆಗಳಿಗೆ ಸಹ ಸಹಾಯ ಮಾಡುತ್ತಾ ಬರುತ್ತಿದ್ದಾರಂತೆ. ಹೀಗಾಗಿ ಮತ್ತೇ ಕೊರೋನಾ ವೈರಸ್ ಹರಡುವ ಭೀತಿಯಲ್ಲಿ ಇರುವುದರಿಂದ ಗ್ರಾಮದ ಜನರಿಗೆ ಕಾಯಕವಿಲ್ಲದೇ ಮನೆಯಲ್ಲಿ ಉಳಿದುಕೊಂಡೊದ್ದಾರೆ. ಅಗತ್ಯ ವಸ್ತುಗಳನ್ನು ಖರೀದಿಸಲು ಸಹ ಹಣ ವಿಲ್ಲದೆ ಪರದಾಡುತ್ತಿದ್ದಾರೆ. ಇಂತಹವರಿಗೆ ಬೆನ್ನಿಗೆ ನಿಂತ ಸಹಾಯ ಮಾಡಲು ಮುಂದಾಗಿದ್ದಾರೆ.


ಈ ಕಾರ್ಯಕ್ಕೆ ಆಗಮಿಸಿದ ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಚಾಲನೆ ನೀಡಿ, ಜನರಿಗೆ ಜಾಗೃತಿ ಮೂಡಿಸಿದರು. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರದಿ ಸಾಲಿನಲ್ಲಿ ನಿಲ್ಲಿಸಿ ಚೆಕ್ ಪಡೆದು ಕೊಂಡರು. ಎಲ್ಲಾ ಕೆಲಸವನ್ನೂ ಕೇವಲ ಸರ್ಕಾರ ಮಾಡಲಿ ಅನ್ನುವುದಕ್ಕಿಂತ ಪ್ರತಿಯೊಂದು ಗ್ರಾಮಗಳಲ್ಲೂ ಹೃದಯವಂತ ದಾನಿಗಳು ಮುಂದೆ ಬಂದು ಬಡವರ ಹಸಿವು ನೀಗಿಸಲು ಮುಂದಾಗಲಿ ಎಂಬುದು ಎಲ್ಲರ ಆಸೆಯ.


ಅಷ್ಟೇ ಅಲ್ಲದೇ ಪ್ರಭಣ್ಣ ಹುಣಸಿಕಟ್ಟಿ ಅವರ ಮಾಡಿರುವ ಕಾರ್ಯ ಮಾತ್ರ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಡಿಸುತ್ತಿದ್ದಾರೆ. ಅದೇ ರೀತಿ ಹಸಿದವರಿಗೆ ಜನರು ಧ್ವನಿಯಾಗಿ ನಿಂತು ಸಹಾಯ ಮಾಡಬೇಕಿದೆ.


ಇದನ್ನೂ ಓದಿ : ದೆಹಲಿ ಸಭೆಯಲ್ಲಿ ಭಾಗಿಯಾದವರ ಕಣ್ಣಾಮುಚ್ಚಾಲೆ - ತಪ್ಪಿಸಿಕೊಂಡು ತಿರುಗುವವರನ್ನು ಜೈಲಿಗೆ ಕಳುಹಿಸಿ ; ಡಿಸಿಎಂ ಗೋವಿಂದ ಕಾರಜೋಳ ಎಚ್ಚರಿಕೆ


ಇದುವರೆಗೆ ಗದಗ ಜಿಲ್ಲೆಯಲ್ಲಿ ಒಟ್ಟು ಸಂಖ್ಯೆ 332 ನಿಗಾಕ್ಕೆ ಒಳಗಾಗಿದ್ದಾರೆ. 28 ದಿನಗಳ ಕಾಲ ನಿಗಾ ಅವಧಿ 104 ಜನ್ರು ಪೂರೈಸಿದ್ದಾರೆ. ಮನೆಯಲ್ಲಿಯೇ ಪ್ರತ್ಯೇಕವಾಗಿ 181 ಜನರು ನಿಗಾದಲ್ಲಿದ್ದಾರೆ. ಇನ್ನು ವೈದ್ಯಕೀಯ ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ 46 ಜನರ ಮೇಲೆ ನಿಗಾ ವಹಿಸಲಾಗಿದೆ. ಈವರೆಗೆ ಒಟ್ಟು ಪರೀಕ್ಷೆಗಾಗಿ 175 ಜನರ ರಕ್ತ ಹಾಗೂ ಗಂಟಲು ಮಾದರಿಯ ಸಂಗ್ರಹಿಸಲಾಗಿದೆ. ಅದರಲ್ಲಿ 144 ನೆಗೆಟೀವ್ ವರದಿಗಳು ಬಂದಿವೆ. ಇನ್ನು 30 ವರದಿ ಬರಲು ಬಾಕಿ ಇವೆ. ಗದಗ ನಗರದಲ್ಲಿ ಈವರೆಗೆ ಪಿ.166 ಕೋವಿಡ್ -19 ಪ್ರಕರಣ ದೃಢಪಟ್ಟು ಸಾವು ಸಂಭವಿಸಿದೆ.


(ವರದಿ : ಸಂತೋಷ್ ಕೊಣ್ಣೂರ)

Published by:G Hareeshkumar
First published: