HOME » NEWS » Coronavirus-latest-news » CORONA EFFECT POLICE SIZED ALLEGEDLY SALE ALCOHOL IN KARWAR HK

ಕಾರವಾರದಲ್ಲಿ ಮಾರಾಟವಾಗುತ್ತಿದೆ ಗೋವಾ ಎಣ್ಣೆ; ಕಾಡುಗಳ ಮೂಲಕ ನಡೆಯುತ್ತಿದೆ ಮದ್ಯ ದಂಧೆ

ಗೋವಾದಲ್ಲಿ ಅತೀ ಅಗ್ಗದ ದರದಲ್ಲಿ ಸಿಗುವ ಮದ್ಯವನ್ನ ಕಳ್ಳ ದಾರಿ‌ ಮೂಲಕ ಕಾರವಾರ ಸಾಗಾಟದಾರರು ತಂದು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ

news18-kannada
Updated:April 18, 2020, 7:41 AM IST
ಕಾರವಾರದಲ್ಲಿ ಮಾರಾಟವಾಗುತ್ತಿದೆ ಗೋವಾ ಎಣ್ಣೆ; ಕಾಡುಗಳ ಮೂಲಕ ನಡೆಯುತ್ತಿದೆ ಮದ್ಯ ದಂಧೆ
ವಶಪಡಿಸಿಕೊಂಡ ಮದ್ಯದ ಬಾಟಲ್​​ಗಳು
  • Share this:
ಕಾರವಾರ(ಏ.18): ಒಂದನೇ ಹಂತದ ಲಾಕ್ ಡೌನ್ ಮುಗಿದು ಎರಡನೇ ಹಂತದ ಲಾಕ್ ಡೌನ್ ಘೋಷಣೆ ಆಗಿ ಈಗ ಮೂರು ದಿನ ಕಳೆದಿದೆ. ಇದರ  ನಡುವೆ ಮದ್ಯದ ಅಂಗಡಿ ಆರಂಭಿಸಬೇಕೆಂದು ಸಾವಿರಾರು ಜನರ ಮನವಿ ಒಂದೆಡೆ ಆದರೆ, ಗೋವಾ- ಕಾರವಾರ ಗಡಿ ಭಾಗದಲ್ಲಿ ಮಾತ್ರ ಅವ್ಯಾಹತವಾಗಿ ಮದ್ಯ ಸಾಗಾಟ ನಡೆಯುತ್ತಿದ್ದು, ಇಲ್ಲಿ ಕುಡುಕರ ದಾಹ ತಣಿವಾಗುತ್ತಿದೆ.

ಒಂದೆಡೆ ಲಾಕ್ ಡೌನ್ ಇರುವುದರಿಂದ ಅಗತ್ಯ ವಸ್ತು ಹೊರತ ಪಡಿಸಿ ಬೇರಾವದು ವಸ್ತು ಮಾರಾಟ ಮಾಡಬಾರದೆಂಬ ಖಡಕ್ ಆದೇಶ. ಇನ್ನೊಂದೆಡೆ ನಿಷೇದವಿದ್ದರೂ ಗೋವಾ ಮದ್ಯ ಸಾಗಾಟ ಮಾತ್ರ ಜೋರಾಗಿದೆ. ದೇಶ ಲಾಕ್ ಡೌನ್ ಆಗಿದೆ ಮದ್ಯ ಮಾರಾಟಕ್ಕಂತು ಸುತಾರಾಮ ಅವಕಾಶ ಇಲ್ಲ. ಆದರೆ, ಗೋವಾ ರಾಜ್ಯದಲ್ಲಿ ಮಾತ್ರ ಲಾಕ್ ಡೌನ್ ಉಲ್ಲಂಘನೆ ನಡೆಯುತ್ತಿದೆ. ಗೋವಾದಲ್ಲಿ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ ಎನ್ನುವುದಕ್ಕೆ ಕಾರವಾರದ ಮದ್ಯ ಸಾಗಾಟದಾರರೇ ಸಾಕ್ಷಿಯಾಗಿದೆ.

ಲಾಕ್ ಡೌನ್ ಸಮಯದಲ್ಲಿ ಒಟ್ಟೂ 1000 ಲೀಟರ್ ಗೋವಾ ಮದ್ಯ ವಶಕ್ಕೆ ಪಡೆಯಲಾಗಿದ್ದು, ಸುಮಾರು ಎರಡು ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಇಷ್ಟು ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದ್ದು ಕಾರವಾರದ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ಅಂದ್ರೆ ದುರಂತ. ಈಗಾಗಲೆ ಅಧಿಕಾರಿಗಳ ಕಣ್ಣು ತಪ್ಪಿಸಿ ಕಾಡಿನ‌ ದಾರಿ‌ ಮೂಲಕ ಮದ್ಯ ಸಾಗಾಟ ನಡೆಯುತ್ತಿದೆ. ಸಾಗಾಟದ ಸಂದರ್ಭದಲ್ಲಿ ಆರೋಪಿಗಳು ಮದ್ಯ ಬಿಟ್ಟು ಪರಾರಿಯಾದ ಘಟನೆಗಳು ನಡೆದು ಹೋಗಿವೆ.

ಗೋವಾದಲ್ಲಿ ಅತೀ ಅಗ್ಗದ ದರದಲ್ಲಿ ಸಿಗುವ ಮದ್ಯವನ್ನ ಕಳ್ಳ ದಾರಿ‌ ಮೂಲಕ ಕಾರವಾರ ಸಾಗಾಟದಾರರು ತಂದು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಮದ್ಯ ಬೇಕು ಮದ್ಯ ಅಂತಾ ಮದ್ಯ ಪ್ರೀಯರ ಕೂಗು ಮುಗಿಲು ಮುಟ್ಟಿದೆ ಇದನ್ನೆ ಮಿಸ್ ಯುಸ್ ತೆಗೆದುಕೊಂಡ ಅಕ್ರಮ ಮದ್ಯ ಸಾಗಾಟದಾರರು ಗೋವಾದಿಂದ ಕಳ್ಳ ದಾರಿಯ ಮೂಲಕ ತಂದು ಮೂರು ಪಟ್ಟು ಹೆಚ್ಚಿನ ದರದಲ್ಲಿ ಮದ್ಯ ಪ್ರೀಯರಿಗೆ ಮದ್ಯ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ.

ಇನ್ನೂ ಈಗಾಗಲೆ ರಾಜ್ಯಾದ್ಯಂತ ಮದ್ಯ ಮರಾಟಕ್ಕೆ ಭಾರೀ ಬೇಡಿಕೆ ಕೇಳಿ ಬರುತ್ತಿದೆ, ಒಂದಿಷ್ಟು ಜನ ಮದ್ಯ ಇಲ್ಲದೆ ಅಸುನೀಗಿದ್ರೆ ಇನ್ನು ಕೆಲವಷ್ಟು ಜನ‌ ಅರೆ ಹುಚ್ಚರಾಗಿದ್ದಾರೆ. ಆದರೆ, ಈ ಹೊತ್ತಲ್ಲಿ ಅಲ್ಲಿ ಇಲ್ಲಿ ಮದ್ಯ ಪ್ರೀಯರು ಕಳ್ಳದಾರಿಯಲ್ಲಿ ತಮ್ಮ ದಾಹವನ್ನ ತೀರಿಸಿಕೊಳ್ಳುತ್ತಿದ್ದಾರೆ. ಆದರೆ, ಇನ್ನೂ ಕೂಡಾ ಲಾಕ್ ಡೌನ್ ಅವಧಿ ಜಾಸ್ತಿಯಾಗುತ್ತಿದ್ದು, ಮದ್ಯ ಪ್ರೀಯರನ್ನ ಕಂಗೆಡಿಸಿದೆ. ಹೀಗಾಗಿ ಮದ್ಯ ಸಾಗಾಟದಾರರು ಕೂಡಾ ಒಂದು ಹೆಜ್ಜೆ ಮುಂದು ಹೋಗಿ ಗೋವಾ ಮದ್ಯವನ್ನ ಕಳ್ಳದಾರಿಯಲ್ಲಿ ತರುತ್ತಿದ್ದಾರೆ. ಜೊತೆಗೆ ಗೋವಾ ರಾಜ್ಯದಲ್ಲಿ ರಾಜಾರೋಷವಾಗಿ ಮದ್ಯ ಮಾರಾಟಕ್ಕೆ ಕಡಿವಾಣ ಇಲ್ಲದಿರುವುದು ಗೋವಾ ಅಧಿಕಾರಿಗಳ ನಿರ್ಲಕ್ಷ್ಯ ಕೂಡಾ ಕಾಣುತ್ತಿದೆ.

ಈಗಾಗಲೆ ಮೀನು ಮಾರಾಟಕ್ಕ ವಿನಾಯಿತಿ ನೀಡಲಾಗಿದೆ. ಗೋವಾ ರಾಜ್ಯಕ್ಕೆ ಕರಾವಳಿಯಿಂದ ಕೂಡಾ ಮೀನು ರಫ್ತಾಗುತ್ತಿದೆ. ಇದನ್ನೆ ಮದ್ಯ ಕಳ್ಳ ಸಾಗಣೆಗೆ ದಾರಿಯನ್ನಾಗಿಸಿಕೊಂಡ ದಂದೆ ಕೋರರು ಕುಡುಕರ ದಾಹ ತೀರಿಸಿ ತಮ್ಮ‌ಜೇಬು ತುಂಬಿಸಿಕೊಳ್ಳುವ ದಂದೆ ನಡೆಸುತ್ತಿದ್ದಾರೆ. ಲಾಕ್ ಡೌನ್ ಮದ್ಯೆಯೂ ಗೋವಾ ರಾಜ್ಯದಲ್ಲಿ ಮದ್ಯ ಮಾರಾಟ ನಡೆಯುತ್ತಿರುವುದು ಕಂಡು ಬರುತ್ತಿದೆ.

ಇದನ್ನೂ ಓದಿ : ಮನೆ ಬಾಗಿಲಿಗೆ ಬೈಕ್ ಹೆಲ್ತ್ ಸರ್ವೀಸ್; ಶಿರಸಿಯಲ್ಲೊಂದು ಟೀಮ್ ಸಂಜೀವಿನಿಒಟ್ಟಾರೆ ಲಾಕ್ ಡೌನ್ ಮದ್ಯೆ ಗೋವಾ ದಲ್ಲಿ ಮದ್ಯ ಮಾರಾಟವಾಗುತ್ತಿದೆ ಎಂಬ ಸತ್ಯ ಹೊರ ಬೀಳುವದಕ್ಕೆ ಕಾರವಾರ ಸೇರಿ ಕರಾವಳಿಯ ಮದ್ಯ ಸಾಗಾಟದಾರರೇ ಸಾಕ್ಷಿಯಾಗಿದೆ.

(ವರದಿ : ದರ್ಶನ್ ನಾಯ್ಕ)
First published: April 18, 2020, 7:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories