ಮಹಾಮಾರಿ ಕೊರೋನಾ ಎಫೆಕ್ಟ್ - ಸಂಕಷ್ಟಕ್ಕೆ ಸಿಲುಕಿದ ಪಪ್ಪಾಯ ಬೆಳೆಗಾರ

ಕಳೆದ ಹದಿನೈದು ದಿನಗಳಿಂದ‌ ಕೊರೋನಾ ಹಿನ್ನಲೆಯಲ್ಲಿ ಫಸಲು ಕೊಯ್ಲು ಮಾಡಲು ಕೂಲಿಗಳ ಸಮಸ್ಯೆಯಾಗಿದೆ.

ಪಪ್ಪಾಯ

ಪಪ್ಪಾಯ

  • Share this:
ರಾಯಚೂರು(ಏ.02) : ಮಹಾಮಾರಿ ಕೊರೋನಾ ಎಫೆಕ್ಟ್​​ನಿಂದ ಹಲವಾರು ತೊಂದರೆ ಉಂಟಾಗಿವೆ. ಅದರಲ್ಲಿಯೂ ಅನ್ನದಾತನ ಅನ್ನವನ್ನೇ ಕಸಿದುಕೊಳ್ಳುತ್ತಿದೆ. ಇದಕ್ಕೆ ಉದಾಹರಣೆಯಾಗಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ‌ ಮಟ್ಟೂರಿನಲ್ಲಿ ಪಪ್ಪಾಯ ಬೆಳೆದ ರೈತನಿಗೆ ಆದ ನಷ್ಟ ಸಾಕ್ಷಿಯಾಗಿದೆ.

ಮಟ್ಟೂರು ಭಾಗದಲ್ಲಿ ದಾಳಿಂಬೆ, ಪಪ್ಪಾಯ ಬೆಳೆಯನ್ನು ಬೆಳೆಯುವ ರೈತರು ಅಧಿಕವಾಗಿದ್ದಾರೆ. ಇದೇ ರೀತಿ ಮಟ್ಟೂರಿನ ಪ್ರಗತಿಪರ ರೈತ ದೇವೇಂದ್ರ ಗೌಡರು ತಮ್ಮ 15 ಎಕರೆ ಭೂಮಿಯಲ್ಲಿ ಪಪ್ಪಾಯವನ್ನು ಬೆಳೆದಿದ್ದಾರೆ. ಜುಲೈ ತಿಂಗಳಲ್ಲಿ ನಾಟಿ ಮಾಡಿದ್ದ ಪಪ್ಪಾಯಿ ಈಗ ಫಸಲು ನೀಡುತ್ತಿದೆ. ಪಪ್ಪಾಯ ಬೆಳೆಯಲು ಕೊಳವೆಬಾವಿ ತೊಡಿಸಿ ಅದಕ್ಕೆ ವಿದ್ಯುತ್ ಸಂಪರ್ಕ ಪಡೆದು ಹೊಲ ಹದ ಮಾಡಿ ಪಪ್ಪಾಯಿ ಬೆಳೆಸಿದ್ದಾರೆ. ಪ್ರತಿ ಒಂದು ಗಿಡಕ್ಕೆ ಕನಿಷ್ಠವೆಂದರೂ 200 ರೂಪಾಯಿ ಖರ್ಚು ಮಾಡಿದ್ದಾರೆ.

ಉತ್ತಮ ಹವಾಮಾನ, ಪ್ರಕೃತಿಯೂ ಈ ಬಾರಿ ರೈತನಿಗೆ ಅನುಕೂಲಕರವಾಗಿ ಸ್ಪಂದಿಸಿದ್ದರಿಂದ ಪಪ್ಪಾಯಿ ಫಸಲು ಉತ್ತಮವಾಗಿ ಬಂದಿದೆ. ಪ್ರತಿ ಎಕರೆ 1.25 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಈ ಬಾರಿ ಸರಿ ಸುಮಾರು 30 ಲಕ್ಷಕ್ಕೂ ಅಧಿಕ ಆದಾಯ ನಿರೀಕ್ಷಿಸಲಾಗಿತ್ತು, ಆದರೆ ಕೊರೋನಾ ಕಾರಣದಿಂದ ಈ ಫಸಲು ಮಾರಾಟ ಮಾಡಲು ಆಗುತ್ತಿಲ್ಲ.

ಕಳೆದ ಹದಿನೈದು ದಿನಗಳಿಂದ‌ ಕೊರೋನಾ ಹಿನ್ನಲೆಯಲ್ಲಿ ಫಸಲು ಕೊಯ್ಲು ಮಾಡಲು ಕೂಲಿಗಳ ಸಮಸ್ಯೆಯಾಗಿದೆ. ಇದರಿಂದಾಗಿ ಈಗಾಗಲೇ ಸಾಕಷ್ಟು ಪ್ರಮಾಣದ ಪಪ್ಪಾಯ ಹಣ್ಣುಗಳು ಗಿಡದಲ್ಲಿಯೇ ಕೊಳೆತು ಹೋಗುತ್ತಿವೆ.

ಕೊರೋನಾದಿಂದಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ್ದು, ಪಪ್ಪಾಯಿ ಬೆಳೆದು ಸಾಲಗಾರರಾಗುತ್ತಿದ್ದೇವೆ. ಪಪ್ಪಾಯ ಮಾರಾಟಕ್ಕೆ ಅವಕಾಶ ಮಾಡಿ, ಇಲ್ಲವೆ ಪರಿಹಾರವಾದರೂ ನೀಡಿ ಎಂದು ರೈತ ದೇವೇಂದ್ರ ಗೌಡ ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : ಕೊರೋನಾ ಬಂದ್ರೆ ಸಾಯಲ್ಲ- ಯಾರೂ ಧೈರ್ಯ ಕಳೆದುಕೊಳ್ಳಬೇಡಿ : ಸಚಿವ ಬಿ. ಶ್ರೀರಾಮುಲು

ಇದು ಕೇವಲ ದೇವೆಂದ್ರ ಗೌಡರೊಬ್ಬರ ಸಮಸ್ಯೆ ಅಲ್ಲ. ಜಿಲ್ಲೆಯ ಬಹುತೇಕ ಬೆಳೆಗಾರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೊರೋನಾ ಲಾಕ್ ಡೌನ್ ಇನ್ನೂ ಯಾವಾಗ ಮುಗಿಯುತ್ತೊ, ಅಷ್ಟರಲ್ಲಿ ಇನ್ನೆಷ್ಟು ಸಂಕಷ್ಟವನ್ನು ರೈತರು ಅನುಭವಿಸಲಿದ್ದಾರೆ. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ ರೈತರ ನೆರವಿಗೆ ಬರಬೇಕಾಗಿದೆ.
First published: