ಕೆಎಂಎಫ್​​ಗೂ ತಟ್ಟಿದ ಕೊರೋನಾ ಎಫೆಕ್ಟ್​​​: ಹೊರ ರಾಜ್ಯಗಳಿಗೆ ನಂದಿನಿ​ ಹಾಲಿನ ಪೂರೈಕೆ ಸ್ಥಗಿತ

ರಾಜ್ಯದಲ್ಲಿ ಹೋಟೆಲ್, ಶಾಪ್​ಗಳು ಬಂದ್ ಆಗಿರುವುದರಿಂದ ಹಾಲಿನ ಖರೀದಿ ಕುಸಿತ ಕಂಡಿದೆ. ಮನೆಯಿಂದ ಮನೆಗೆ ಪೂರೈಕೆಯಾಗುವ ಹಾಲು ಯಥಾಸ್ಥಿತಿ ಇದೆ. ಆದರೆ ಬೇರೆ ರಾಜ್ಯಗಳಿಗೆ ಹೋಗಬೇಕಾದ ಎರಡೂವರೆ ಲಕ್ಷ ಹಾಲು ಪೂರೈಕೆ ಸ್ಥಗಿತವಾಗಿದೆ.

news18-kannada
Updated:March 26, 2020, 1:14 PM IST
ಕೆಎಂಎಫ್​​ಗೂ ತಟ್ಟಿದ ಕೊರೋನಾ ಎಫೆಕ್ಟ್​​​: ಹೊರ ರಾಜ್ಯಗಳಿಗೆ ನಂದಿನಿ​ ಹಾಲಿನ ಪೂರೈಕೆ ಸ್ಥಗಿತ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮಾ.26): ಕೊರೋನಾ ಭೀತಿ ಹೆಚ್ಚಾಗಿರುವ ಹಿನ್ನೆಲೆ, ಇಡೀ ದೇಶವನ್ನೇ ಲಾಕ್​ ಡೌನ್​ ಮಾಡಲಾಗಿದೆ. ಹೀಗಾಗಿ ಯಾವುದೇ ಚಟುವಟಿಕೆಗಳಿಲ್ಲದೇ ಇಡೀ ದೇಶವೇ ಸ್ತಬ್ಧವಾಗಿದೆ. ಭಾರತ ಲಾಕ್​ ಡೌನ್​​ ಆಗಿರುವ ಹಿನ್ನೆಲೆ, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಗತ್ಯ ವಸ್ತಗಳ ಪೂರೈಕೆ ಬಿಟ್ಟು, ಇನ್ನುಳಿದ ಎಲ್ಲಾ ಉದ್ಯಮಗಳನ್ನು ಸ್ಥಗಿತಗೊಳಿಸಲಾಗಿದೆ. ಜನರಿಗೆ ಪ್ರತಿನಿತ್ಯ ಅಗತ್ಯವಾಗಿ ಬೇಕಿರುವ ವಸ್ತುಗಳ ಮೇಲೂ ಕೊರೋನಾ ಎಫೆಕ್ಟ್​ ತಟ್ಟಿದೆ. 

ರಾಜ್ಯದಲ್ಲಿ ಕೆಎಂಎಫ್​ ಹಾಲಿನ ಪೂರೈಕೆಗೂ ಕೊರೋನಾ ಎಫೆಕ್ಟ್​ ತಟ್ಟಿದೆ ಎಂದು ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶದ ಸತೀಶ್​ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಹಾಲು ಪೂರೈಕೆ ಮಾಡಲು ಕೆಎಂಎಫ್​ಗೂ ಸಮಸ್ಯೆಯಾಗಿದೆ. ಹಾಲಿನ ಪೂರೈಕೆ ಸಮಸ್ಯೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದರು.

ಕೊರೋನಾ ಎಫೆಕ್ಟ್​​; ಮಡಿಕೇರಿಯಲ್ಲಿ ನಡೆದ ಮದುವೆಯಲ್ಲಿ ಭಾಗಿಯಾದವರು ಕೇವಲ 7 ಮಂದಿ

ಕೊರೋನಾ ಎಫೆಕ್ಟ್​​ನಿಂದಾಗಿ ಬೇರೆ ರಾಜ್ಯಗಳಲ್ಲಿ ನಂದಿನಿ ಹಾಲು ಖರೀದಿ ಮಾಡುತ್ತಿಲ್ಲ. ಕೇರಳ, ತಮಿಳುನಾಡು, ತೆಲಂಗಾಣ, ಪುಣೆ, ಮಹಾರಾಷ್ಟ್ರ, ಗೋವಾ, ಹೈದರಾಬಾದ್ ಗೆ ಹಾಲು ಪೂರೈಕೆ ಮಾಡಲು ಆಗುತ್ತಿಲ್ಲ. ಗೋವಾಕ್ಕೆ 40 ಸಾವಿರ ಲೀಟರ್ ಹಾಲು ಪೂರೈಕೆ ಬಂದ್ ಮಾಡಲಾಗಿದೆ. ಬಾಂಬೆ ಗೆ ಹೋಗಬೇಕಾದ 2 ಲಕ್ಷ ಲೀಟರ್ ನಲ್ಲಿ 50 ಲಕ್ಷ ಲೀಟರ್ ಕಡಿಮೆ ಆಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹೋಟೆಲ್, ಶಾಪ್​ಗಳು ಬಂದ್ ಆಗಿರುವುದರಿಂದ ಹಾಲಿನ ಖರೀದಿ ಕುಸಿತ ಕಂಡಿದೆ. ಮನೆಯಿಂದ ಮನೆಗೆ ಪೂರೈಕೆಯಾಗುವ ಹಾಲು ಯಥಾಸ್ಥಿತಿ ಇದೆ. ಆದರೆ ಬೇರೆ ರಾಜ್ಯಗಳಿಗೆ ಹೋಗಬೇಕಾದ ಎರಡೂವರೆ ಲಕ್ಷ ಹಾಲು ಪೂರೈಕೆ ಸ್ಥಗಿತವಾಗಿದೆ. ಹೀಗಾಗಿ ಪೂರೈಕೆಯಾಗದ ಹಾಲನ್ನು ಪೌಡರ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪ್ರತಿನಿತ್ಯ 67 ಲಕ್ಷ ಲೀಟರ್ ಹಾಲು ಬರುತ್ತದೆ. ನಿತ್ಯ ರೈತರಿಂದ ಸರಬರಾಜು ಆಗುವ ಹಾಲು ಎಂದಿನಂತೆ ಬರುತ್ತಿದೆ ಎಂದರು.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ