• Home
  • »
  • News
  • »
  • coronavirus-latest-news
  • »
  • ಕೊರೋನಾ‌ ಎಫೆಕ್ಟ್ ; ಸಿಲಿಕಾನ್​ ಸಿಟಿಯಲ್ಲಿ ಪರಿಸರ ಸ್ನೇಹಿ ತಟ್ಟೆಗಳಿಗೆ ಭಾರೀ ಬೇಡಿಕೆ..!

ಕೊರೋನಾ‌ ಎಫೆಕ್ಟ್ ; ಸಿಲಿಕಾನ್​ ಸಿಟಿಯಲ್ಲಿ ಪರಿಸರ ಸ್ನೇಹಿ ತಟ್ಟೆಗಳಿಗೆ ಭಾರೀ ಬೇಡಿಕೆ..!

ಅಡಿಕೆ ಹಾಳೆ ತಟ್ಟೆಗಳು

ಅಡಿಕೆ ಹಾಳೆ ತಟ್ಟೆಗಳು

ಪ್ಲಾಸ್ಟಿಕ್ ಬಳಕೆ ಮಿತಿಮೀರುತ್ತಿದ್ದ ಸಂದರ್ಭದಲ್ಲಿ ಪರಿಸರ ಸ್ನೇಹಿ ತಟ್ಟೆ ಬಳಸಿ ಎಂದರೂ ಯಾರೂ ಕೇಳಲಿಲ್ಲ. ಆದರೀಗ ಕೊರೋನಾ ಹೋಟೆಲ್‌ ನವರಿಗೆ ಅನಿವಾರ್ಯಗಾಗಿ ಪರಿಸರ ಸ್ನೇಹಿ ತಟ್ಟೆ ಬಳಕೆ ಇಷ್ಟಪಡುತ್ತಿದ್ದಾರೆ.

  • Share this:

ಬೆಂಗಳೂರು(ಜೂ. 17): ಮದುವೆ, ದೇವಸ್ಥಾನ ಕಾರ್ಯಕ್ರಮ ಹೀಗೆ ಆಗೊಮ್ಮೆ ಈಗೊಮ್ಮೆ ಬಳಕೆಯಾಗುತ್ತಿದ್ದ ಪರಿಸರ ಸ್ನೇಹಿ ತಟ್ಟೆಗೆ ಇದೀಗ ಲಾಕ್ ಡೌನ್ ಸಡಲಿಕೆ‌ ಬಳಿಕ ಇದೀಗ ಹೆಚ್ಚು ಬೇಡಿಕೆ ಶುರುವಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನ‌ ಪ್ರಮುಖ ಹೋಟೆಲ್ ಗಳು ಪರಿಸರ ಸ್ನೇಹಿ ತಟ್ಟೆಯ ಬಳಕೆ ಹೆಚ್ಚು ಮಾಡಿದ್ದಾರೆ. ಲಾಕ್ ಡೌನ್ ಎಫೆಕ್ಟ್ ಏನೆಲ್ಲ ಮಾಡಿದೆ ಎಂದನಿಸುತ್ತದೆ‌. ಬಹುಪಾಲು ತೊಂದರೆ ಮಾಡಿದರೂ ಸಡಲಿಕೆ‌ ಬಳಿಕ ಪರಿಸರ ಸ್ನೇಹಿ ತಟ್ಟೆಗಳಿಗೆ ಭಾರೀ ಬೇಡಿಕೆ ಬಂದಿದೆ.


ಲಾಕ್‌ಡೌನ್ ಮುಂಚೆ ಇಂತಹ ತಟ್ಟೆಗಳನ್ನು ಕೇಳುತ್ತಿರಲಿಲ್ಲ. ಆದರೀಗ ಸಡಲಿಕೆ ಬಳಿಕ ಬೇಡಿಕೆ ದಿಢೀರ್‌ ಹೆಚ್ಚಾಗಿದೆ. ಇದಕ್ಕೆ ಕಾರಣ ಹೋಟೆಲ್ ಗಳಲ್ಲಿ ಮೊದಲೆಲ್ಲ ಸ್ಟೀಲ್ ತಟ್ಟೆ ಬಳಕೆಯಾಗುತ್ತಿತ್ತು. ಆದರೀಗ ಅವುಗಳನ್ನು ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಇವುಗಳನ್ನು ಬಳಸುವುದು ಕಷ್ಟಸಾಧ್ಯವಾಗಿದೆ. ಮೇಲಾಗಿ ಇಂಥ ಸ್ಟೀಲ್ ತಟ್ಟೆ ಗಳನ್ನು ಗ್ರಾಹಕರ ಬಳಸಿದ ಮೇಲೆ ಇದನ್ನು ತುಂಬ ಹೈಜೀನ್ ರೀತಿ ಕ್ಲೀನ್ ಮಾಡಬೇಕು‌. ಇಲ್ಲವಾದಲ್ಲಿ ಕೊರೋನಾ ಇನ್ನಷ್ಟು ಹರಡಲಿದೆ. ಇದರಿಂದ ಸರ್ಕಾರ ನೀಡಿರುವ ಮಾರ್ಗಸೂಚಿ ಹಿನ್ನೆಲೆ ಸಾಕಷ್ಟು ಹೈಜೀನ್ ಮಾಡುವ ಬದಲು ಪರಿಸರ ಸ್ನೇಹಿ ತಟ್ಟೆ ಗಳನ್ನು ಬಳಕೆ ಮಾಡಿದರೆ ಯಾವುದೇ ತೊಂದರೆಯಾಗುವುದಿಲ್ಲ.‌ ಇದಕ್ಕಾಗಿ ಇಲ್ಲಿಯವರೆಗೆ ಬಳಸದವರು ಇದೀಗ ಪರಿಸರ ಸ್ನೇಹಿ ತಟ್ಟೆ ಬಳಕೆಗೆ ಮುಂದಾಗಿದ್ದಾರೆ.


ಅಡಿಕೆ ಹಾಗೂ ಕಬ್ಬಿನ ನಾರಿನ ತಟ್ಟೆ‌ ! 


ರಾಜಧಾನಿ ಬೆಂಗಳೂರು ಹೇಳಿ ಕೇಳಿ ಕಸಕ್ಕೆ ಸಾಕಷ್ಟು ಹೆಸರುವಾಸಿ. ಇಲ್ಲಿಯ ಗಾರ್ಬೇಜ್ ಇಡೀ ದೇಶದಲ್ಲಿಯೇ ಕುಖ್ಯಾತಿ ಪಡೆದಿದೆ. ಪ್ಲಾಸ್ಟಿಕ್ ಬಳಕೆ ಮಿತಿಮೀರುತ್ತಿದ್ದ ಸಂದರ್ಭದಲ್ಲಿ ಪರಿಸರ ಸ್ನೇಹಿ ತಟ್ಟೆ ಬಳಸಿ ಎಂದರೂ ಯಾರೂ ಕೇಳಲಿಲ್ಲ. ಆದರೀಗ ಕೊರೋನಾ ಹೋಟೆಲ್‌ ನವರಿಗೆ ಅನಿವಾರ್ಯಗಾಗಿ ಪರಿಸರ ಸ್ನೇಹಿ ತಟ್ಟೆ ಬಳಕೆ ಇಷ್ಟಪಡುತ್ತಿದ್ದಾರೆ.


ಅಡಿಕೆ ಹಾಗೂ ಕಬ್ಬಿನ ನಾರಿನ ತಟ್ಟೆಗಳು ಬಳಕೆಯ ನಂತರ ಕಸವಾಗಿ ಭೂಮಿಯಲ್ಲಿ ಬಿದ್ದು ಕರಗುತ್ತೆ. ಬಳಸಿ ಬಿಸಾಡುವ ತಟ್ಟೆ ಬಳಕೆ ಸದ್ಯ ಕೊರೊನೋ ಸಂಕಷ್ಟದಲ್ಲಿ ಅನಿವಾರ್ಯ. ಇದರಿಂದಾಗಿ ಯೂಸ್ ಅಂಡ್ ಥ್ರೋ ಎಂಬ ರೀತಿ ಬಳಕೆಗೆ ಪರಿಸರಸ್ನೇಹಿ ತಟ್ಟೆ ಬಳಕೆಯೇ ಸೂಕ್ತವೆಂದು ಬೆಂಗಳೂರಿನ ಹೋಟೆಲ್, ರೆಸ್ಟೋರೆಂಟ್ ನಲ್ಲಿ ಬಳಕೆ ಹೆಚ್ಚು ಮಾಡಿದ್ದಾರೆ‌. ಮೊದಲೆಲ್ಲ ಯೂಸ್ ಅಂಡ್‌ ಥ್ರೋ ತಟ್ಟೆ ಮದುವೆ, ಕಾರ್ಯಕ್ರಮ, ಸಮಾರಂಭಗಳಲ್ಲಿ ಮಾತ್ರ ಬಳಕೆಯಾಗುತ್ತಿತ್ತು. ಲಾಕ್ ಡೌನ್ ಸಡಲಿಕೆ ಬಳಿಕ ಹೋಟೆಲ್ ನಲ್ಲಿ ಪರಿಸರ ಸ್ನೇಹಿ ತಟ್ಟೆಗಳು ಫೇವರೇಟ್ ಆಗಿದೆ.


ಅಡಿಕೆ ಹಾಗೂ ಕಬ್ಬಿನ ನಾರಿನ ತಟ್ಟೆ, ಕಪ್ ತಯಾರಿಯಲ್ಲಿ ಇದೀಗ ಅದರ ಉತ್ಪಾದಕರು ಫುಲ್ ಬ್ಯುಸಿ ಇದ್ದಾರೆ‌. ಸದ್ಯ ಬೆಂಗಳೂರಿನಲ್ಲಿ ಶೇ.60ರಷ್ಟು ಪರಿಸರ ಸ್ನೇಹಿ ತಟ್ಟೆ ಬಳಕೆ‌ ಹೆಚ್ಚಳವಾಗಿದೆ. ಇದರಿಂದ ಸ್ಟಾರ್ಟ್ ಅಪ್ ನಲ್ಲಿ ಗುಣಮಟ್ಟದ ತಟ್ಟೆಗಳ ತಯಾರಿ ಮಾಡಲು ಕಂಪನಿಗಳು ಮುಂದಾಗಿವೆ. ಮೊದಲೆಲ್ಲ ಶೇ.30ರಷ್ಟು ಪರಿಸರ ಸ್ನೇಹಿ ತಟ್ಟೆ ಬಳಕೆಯಾಗುತ್ತಿದ್ದಿಲ್ಲ. ಇದೀಗ ಪರಿಸರ ಸ್ನೇಹಿ ತಟ್ಟೆ ತಯಾರಿಯಲ್ಲಿ‌ ಡಬಲ್ ಹೆಚ್ಚಳ. ಬೇಡಿಕೆಗೆ ತಕ್ಕಷ್ಟು ಪರಿಸರಸ್ನೇಹಿ ತಟ್ಟೆ ತಯಾರಿ ಮಾಡಲಾಗುತ್ತಿಲ್ಲ.


ಇದನ್ನೂ ಓದಿ : ಗಡಿ ದಾಟಿ ಬಂದ ವಲಸಿಗರು - ಕಲಬುರ್ಗಿಯಲ್ಲಿ ಸಾವಿರದ ಗಡಿ ದಾಟಿದ ಸೋಂಕಿತರು


ಸ್ಟಾರ್ಟ್ ಅಪ್ ನಲ್ಲಿ ಗುಣಮಟ್ಟದ ತಟ್ಟೆ ತಯಾರಿಸುತ್ತಿದ್ದೇವೆ. ಸದ್ಯ ಕಾರ್ಮಿಕರು ಹಾಗೂ ಉತ್ಪಾದನೆ ಸಮಯ ಹೆಚ್ಚು ಮಾಡಿದರೆ ಇನ್ನಷ್ಟು ಬೇಡಿಕೆಗನುಗುಣವಾಗಿ ಪೂರೈಕೆ ಮಾಡಬಹುದು ಎಂದು ಅಡಿಕೆ ತಟ್ಟೆ ತಯಾರಕ ಪ್ರೇಮ್ ಕುಮಾರ್ ಹೇಳುತ್ತಾರೆ‌.


ಹೋಟೆಲ್‌ಗಳಲ್ಲಿ ಸ್ಟೀಲ್, ಗ್ಲಾಸ್ ಮರುಬಳಕೆ ಬಹಳ‌ ಕಷ್ಟ. ಸಾಕಷ್ಟು ಹೈಜೀನ್ ಮಾಡಬೇಕಾಗುತ್ತದೆ. ಆದರೂ ಜನರಿಗೆ ಕೊರೋನಾ ಭಯ ಕಾಡುತ್ತಿರುತ್ತದೆ. ಇದಕ್ಕಾಗಿಯೇ ಯೂಸ್ ಅಂಡ್ ಥ್ರೋ ಅಡಿಕೆ, ಕಬ್ಬಿನ‌ ನಾರಿನ‌ ತಟ್ಟೆ ಬಳಸುತ್ತಿದ್ದೇವೆ. ಇದರಿಂದ ಗ್ರಾಹಕರಿಗೆ ನಂಬಿಕೆ ಬರುತ್ತದೆ. ನಮ್ಮ ಹೋಟೆಲ್‌ ಶುಚಿತ್ವ, ಮುಂಜಾಗ್ರತೆ ತೆಗೆದುಕೊಳ್ಳುವುದು ನೋಡಿ ಗ್ರಾಹಕರು ನೆಮ್ಮದಿಯಾಗಿ ಬಂದು ಹೋಗುತ್ತಾರೆ ಎಂದು ನಿಸರ್ಗ ಹೋಟೆಲ್‌ ಮಾಲಿಕ ಕೃಷ್ಣರಾಜ್ ಹೇಳುತ್ತಾರೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು