HOME » NEWS » Coronavirus-latest-news » CORONA EFFECT CENTRAL GOVERNMENT TO CONTUNE WORK UNDER NAREGA SCHEME HK

ಲಾಕ್ ಡೌನ್ ನಿಂದ ಬೀದಿ ಪಾಲಾಗುತ್ತಿರುವ ಕಾರ್ಮಿಕರು - ನರೇಗಾ ಯೋಜನೆಯಡಿ ಕೆಲಸ ಕೊಡಲು ಮುಂದಾದ ಕೇಂದ್ರ ಹಾಗೂ ರಾಜ್ಯ ಸರ್ಕಾರ

ಕೊರೋನಾ ವೈರಸ್  ಸಮಸ್ಯೆಯಿಂದ ಒಟ್ಟೊಟ್ಟಿಗೆ ಸೇರದೇ ಐದು ಐದು ಮಂದಿಗೆ ನಿರ್ದಿಷ್ಟ ಕೆಲಸ ಹಂಚಿಕೆ ಮಾಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ 5 ಜನರ ತಂಡಗಳನ್ನು ರಚಿಸಿ ಕಾಮಗಾರಿ ಅನುಷ್ಠಾನ ಗೊಳಿಸಲಾಗುತ್ತಿದೆ

news18-kannada
Updated:April 13, 2020, 5:01 PM IST
ಲಾಕ್ ಡೌನ್ ನಿಂದ ಬೀದಿ ಪಾಲಾಗುತ್ತಿರುವ ಕಾರ್ಮಿಕರು - ನರೇಗಾ ಯೋಜನೆಯಡಿ ಕೆಲಸ ಕೊಡಲು ಮುಂದಾದ ಕೇಂದ್ರ ಹಾಗೂ ರಾಜ್ಯ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ಶಿವಮೊಗ್ಗ(ಏ.13): ಕೊರೋನಾ ದಿನೇ ದಿನೇ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೋಟ್ಯಾಂತರ ಜನರು ದುಡಿಮೆ ಸ್ಥಗಿತಗೊಂಡಿದೆ. ಅದರಲ್ಲೂ ಕೂಲಿಯನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳು ಬೀದಿಗೆ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ  ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡುವ ಕಾರ್ಯಕ್ಕೆ ಮುಂದಾಗಿದೆ. 

ರಾಜ್ಯದಲ್ಲಿ ಈ ಹಿಂದೆ ಬಾಕಿ ಉಳಿದಿರುವ  ನರೇಗಾ ಯೋಜನೆಯ ಕೂಲಿ ಮೊತ್ತವನ್ನು ವಾರದೊಳಗೆ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಸ್ವತಃ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಬಡ ಕುಟುಂಬಗಳಿಗೆ ನರೇಗಾದಲ್ಲಿ ಉದ್ಯೋಗ ಒದಗಿಸುವ ಕಾರ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಬೇಕು, ರಾಜ್ಯ ಸರ್ಕಾರ ನರೇಗಾ ಯೋಜನೆಯಡಿ ಬಡವರಿಗೆ ಹೆಚ್ಚು ಉದ್ಯೋಗ ಕೊಡಬೇಕು ಎಂಬ ಉದ್ದೇಶದಿಂದ ವಿಶೇಷ ಯೋಜನೆ ತಯಾರು ಮಾಡಲಾಗುತ್ತಿದೆ.

ಉದ್ಯೋಗಕ್ಕೆ ಬರುವ ಕಾರ್ಮಿಕರಿಗೆ ಅವರ ಅವರ ಗ್ರಾ.ಪಂ. ವ್ಯಾಪ್ತಿಯಲ್ಲಿ, ನರೇಗಾ ಯೋಜನೆಯಡಿ ಉದ್ಯೋಗ ಕಲ್ಪಿಸಲಾಗುತ್ತಿದೆ. ಕೇಂದ್ರ ಸರ್ಕಾರ ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೂಲಿ ದರನ್ನು ಸಹ ಅಧಿಕ ಮಾಡಿದೆ. ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ 249 ರೂ ಕೂಲಿ ಇತ್ತು, ಇದೀಗ 275 ರೂ ಗೆ ಏರಿಕೆ ಮಾಡಲಾಗಿದೆ.

narega work
ಸಚಿವ ಕೆ ಎಸ್ ಈಶ್ವರಪ್ಪ


ರಾಜ್ಯಕ್ಕೆ ಮೊನ್ನೆ 1870 ಕೋಟಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಹಿಂದೆ ಕೂಲಿ ಮಾಡಿದ ಕಾರ್ಮಿಕರಿಗೆ ಹಣ ಕೊಡುವುದು ಬಾಕಿ ಇದ್ದು, ಅದನ್ನು ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ನರೇಗಾದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡಲು 1 ಸಾವಿರ ಕೋಟಿ ಹಣ ಇದೆ. ಮುಂದಿನ 15 ದಿನದೊಳಗಾಗಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಕೂಲಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕೊರೋನಾ ವೈರಸ್  ಸಮಸ್ಯೆಯಿಂದ ಒಟ್ಟೊಟ್ಟಿಗೆ ಸೇರದೇ ಐದು ಐದು ಮಂದಿಗೆ ನಿರ್ದಿಷ್ಟ ಕೆಲಸ ಹಂಚಿಕೆ ಮಾಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ  5 ಜನರ ತಂಡಗಳನ್ನು ರಚಿಸಿ ಕಾಮಗಾರಿ ಅನುಷ್ಠಾನ ಗೊಳಿಸಲಾಗುತ್ತಿದೆ. ಗುಂಪಾಗಿ ಕೆಲಸ ಮಾಡದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡುವ ಸಿದ್ಥತೆ ನಡೆದಿದೆ.

ಇದನ್ನೂ ಓದಿ : ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಗೈರಾಗಿದ್ದ ಇಬ್ಬರು ವೈದ್ಯರಿಗೆ ನೋಟಿಸ್ ನೀಡಿದ ಜಿಲ್ಲಾ ಪಂಚಾಯತ್​ ಸಿಇಒಈ ಮೂಲಕ ಹಳ್ಳಿಗಾಡಿನ ಜನರಿಗೆ ಕೊರೋನಾ ಸಂಕಷ್ಟ ಕಾಲದಲ್ಲಿ ದುಡಿಯುವ ಕೈ ಗಳಿಗೆ ಕೆಲಸ ನೀಡುವ ಕೆಲಸ ಆಗುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳುವ ಕಡೆಗೆ ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕ ಕುಟುಂಬಗಳು ಮಾಡಬೇಕಿದೆ. ಅಧಿಕಾರಿಗಳು ಸಹ ಇದನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನ ಮಾಡಿ ಬಡವರಿಗೆ ಅನುಕೂಲ ಮಾಡಿಕೊಡಬೇಕಿದೆ.
First published: April 13, 2020, 4:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories