ಕೊರೋನಾ ಎಫೆಕ್ಟ್‌; ಆರ್ಥಿಕ ಸಂಕಷ್ಟದಲ್ಲಿ ಕೇಂದ್ರ; ಸರ್ಕಾರಿ ನೌಕರರ ತುಟ್ಟಿ ಭತ್ಯೆ ಪ್ರಸ್ತಾವನೆಗೆ ತಡೆ

ದೇಶದಲ್ಲಿ 49.26 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದಾರೆ. ಇನ್ನೂ 61.17 ಲಕ್ಷ ಪಿಂಚಣಿದಾರರಿದ್ದು ಇವರೆಲ್ಲರಿಗೂ ತುಟ್ಟಿ ಭತ್ಯೆಯನ್ನು ರದ್ದು ಮಾಡಲಾಗಿದ್ದು ಈ ಮೂಲಕ ಕೇಂದ್ರ ಸರ್ಕಾರಕ್ಕೆ ಸುಮಾರು 8,000 ಕೋಟಿ ರೂ. ಉಳಿತಾಯವಾಗಲಿದೆ.

digpu-news-network
Updated:April 22, 2020, 8:10 AM IST
ಕೊರೋನಾ ಎಫೆಕ್ಟ್‌; ಆರ್ಥಿಕ ಸಂಕಷ್ಟದಲ್ಲಿ ಕೇಂದ್ರ; ಸರ್ಕಾರಿ ನೌಕರರ ತುಟ್ಟಿ ಭತ್ಯೆ ಪ್ರಸ್ತಾವನೆಗೆ ತಡೆ
ನರೇಂದ್ರ ಮೋದಿ.
  • Share this:
ಬೆಂಗಳೂರು (ಏಪ್ರಿಲ್ 22); ಕೊರೋನಾ ಭೀತಿಯಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಕೇಂದ್ರ ಸರ್ಕಾರ, ಕೇಂದ್ರ ಸರ್ಕಾರದ ನೌಕರರ ತುಟ್ಟಿ ಭತ್ಯೆ(ಡಿಎ) ಹೆಚ್ಚಳ ಪ್ರಸ್ತಾವನೆಯನ್ನು ತಡೆಹಿಡಿದಿದೆ.

ಈ ಹಿಂದೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ.4ರಷ್ಟು ತುಟ್ಟಿ ಭತ್ಯೆಯನ್ನು ನೀಡಲಾಗುತ್ತಿತ್ತು. ಆದರೆ, ಕಳೆದ ಮಾರ್ಚ್‌ನಲ್ಲಿ ಈ ಪ್ರಮಾಣವನ್ನು ಶೇ.4 ರಿಂದ ಶೇ.21ಕ್ಕೆ ಏರಿಸಲಾಗಿತ್ತು. ಆದರೆ, ದೇಶದಲ್ಲಿ ಕೊರೋನಾ ಉಂಟುಮಾಡಿರುವ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಕೇಂದ್ರ ಸರ್ಕಾರ ನೌಕರರ ತುಟ್ಟಿ ಭತ್ಯೆ ಪ್ರಸ್ತಾವನೆಯನ್ನೇ ತಡೆಹಿಡಿದಿದೆ.

ದೇಶದಲ್ಲಿ 49.26 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದಾರೆ. ಇನ್ನೂ 61.17 ಲಕ್ಷ ಪಿಂಚಣಿದಾರರಿದ್ದು ಇವರೆಲ್ಲರಿಗೂ ತುಟ್ಟಿ ಭತ್ಯೆಯನ್ನು ರದ್ದು ಮಾಡಲಾಗಿದ್ದು ಈ ಮೂಲಕ ಕೇಂದ್ರ ಸರ್ಕಾರಕ್ಕೆ ಸುಮಾರು 8,000 ಕೋಟಿ ರೂ. ಉಳಿತಾಯವಾಗಲಿದೆ ಎನ್ನಲಾಗುತ್ತಿದೆ. ಇಂದಿನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿ ಭತ್ಯೆ ತಡೆ ಪ್ರಸ್ತಾಪ ಮಂಡನೆಯಾಗಲಿದೆ.

ಇದನ್ನೂ ಓದಿ : ರಿಲಾಯನ್ಸ್​ ಜಿಯೋದ ಶೇ. 9.99 ಷೇರನ್ನು 43,574 ಕೋಟಿ ರೂಪಾಯಿಗೆ ಖರೀದಿಸಿದ ಫೇಸ್​ಬುಕ್​
First published: April 22, 2020, 8:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading