news18-kannada Updated:April 29, 2020, 11:00 PM IST
ಬೀದಿ ನಾಯಿಗಳು
ಕಾರವಾರ(ಏ.29): ಲಾಕ್ ಡೌನ್ ನಿಂದ ಕೇವಲ ಮನುಷ್ಯರು ಮಾತ್ರ ಸಮಸ್ಯೆ ಎದುರಿಸುತ್ತಿಲ್ಲ ಜತೆಗೆ ಮೂಕ ಪ್ರಾಣಿಗಳು ಕೂಡಾ ಅನ್ನ ನೀರಿಗಾಗಿ ಬೀದಿಗಳಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಚಟಪಟಿಸುತ್ತಿವೆ. ಕಾರವಾರದಲ್ಲಿ ಬೀದಿ ನಾಯಿಗಳ ಪಾಡಂತು ಹೇಳ ತೀರದ್ದಾಗಿದೆ. ಅಲ್ಲಿ ಇಲ್ಲಿ ಸಿಕ್ಕ ಆಹಾರದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬೀದಿ ನಾಯಿಗಳು ಲಾಕ್ ಡೌನ್ ನಿಂದ ಸಾವಿನ ಮನೆಯ ಬಾಗಿಲನ್ನ ತಟ್ಟಲು ಸಿದ್ದವಾಗುತ್ತಿವೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಸರಿ ಸುಮಾರು ನೂರಕ್ಕೂ ಹೆಚ್ಚು ಬೀದಿ ನಾಯಿಗಳು ಇವತ್ತು ಲಾಕ್ ಡೌನ್ ನಲ್ಲಿ ಹಸಿವು ತಾಳಲಾರದೆ ಸಾವಿನ ಮನೆಯ ಬಾಗಿಲು ತಟ್ಟುತ್ತಿವೆ. ಕೆಲ ಬೀದಿ ನಾಯಿಗಳು ಅನ್ನ ನೀರು ಆಹಾರ ಇಲ್ಲದೆ ರಸ್ತೆ ಬದಿಯಲ್ಲೆ ಮಲಗಿಕೊಂಡು ಏಳಲು ಆಗದೆ ಇತ್ತ ಬಿರುಬಿಸಿಲಿನ ತಾಪದಲ್ಲಿ ಇರಲು ಆಗದೆ ಮೂಕ ರೋದನೆ ಪಡುತ್ತಿವೆ. ಅನ್ನ ನೀರು ಇಲ್ಲದೆ ಅಸ್ತಿ ಪಂಜರ ಕಾಣುತ್ತಿರುವ ಬೀದಿ ನಾಯಿಗಳ ಸ್ಥಿತಿ ಮತ್ತು ಮೂಕ ರೋದನೆ ಎಂತ ಕಲ್ಲು ಹೃದಯ ಕರಗಿಸುವಂತಿದೆ.
ಬೀದಿ ನಾಯಿಗಳಿಗೆ ಇಷ್ಟು ದಿನ ಕೆಲವರು ಬಿಸ್ಕಟ್ಟು ಅದು ಇದು ಆಹಾರ ನೀಡುತ್ತಿದ್ದರು. ಆದರೆ, ಈಗ ನಾಯಿಗಳಿಗೆ ಅನ್ನ ನೀರು ಅವುಗಳಿಗೆ ಬೇಕಾದ ಆಹಾರ ಯ್ಯಾರು ನೀಡುತ್ತಿಲ್ಲ. ಆಹಾರ ಹುಡುಕುವ ಅಂದ್ರೆ ನಗರದ ಹೊಟೇಲ್ಗಳು ಬಾಗಿಲು ಮುಚ್ಚಿಕೊಂಡಿವೆ. ಮೀನು ತಿಂದು ಬದುಕುವಾ ಅಂದ್ರೆ ಮೀನು ಮಾರುಕಟ್ಟೆ ಕೂಡಾ ಬಂದ್ ಹೀಗೆ ಹತ್ತು ಹಲವು ದಾರಿಯಲ್ಲಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬೀದಿ ನಾಯಿಗಳಿಗೆ ಬೇಕಾದ ಆಹಾರ ಸಿಗದೆ ಸಾವಿನ ಬಾಗಿಲಲ್ಲಿವೆ.
ಇನ್ನು ಮೂಖ ಪ್ರಾಣಿಗಳ ರೋದನೆಯನ್ನ ಕಂಡ ಪ್ರಾಣಿಪ್ರೀಯರು ಒಂದು ಸಾರಿ ಬಂದು ಬಿಸ್ಕಟ್, ಅಳಿದುಳಿದ ಅನ್ನ ನೀಡುತ್ತಿದ್ದಾರೆ. ಆದರೆ, ಇವೆಲ್ಲ ಬೀದಿ ನಾಯಿಗಳ ಹೊಟ್ಟೆ ತುಂಬಿಸುತ್ತಿಲ್ಲ. ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ತಾಣವಾದ ಹೊಟೇಲ್ ಗಳು ಮುಚ್ಚಿಕೊಂಡಿರುವುದರಿಂದ ಬೀದಿ ನಾಯಿಗಳ ಹೊಟ್ಟೆಮೇಲೆ ಹೊಡೆದಂತಾಗಿದೆ. ಹಸಿವು ತಾಳಲಾಗದ ನೂರಾರು ಬೀದಿ ನಾಯಿಗಳು ರಸ್ತೆಯಲ್ಲಿ ಆಹಾರಕ್ಕಾಗಿ ಅಂಗಲಾಚುತ್ತಿವೆ.
ಇದನ್ನೂ ಓದಿ :
ಮಂಕಿ ಗ್ರಾಮದ ಸಾವಯವ ಕೃಷಿಕರಿಗೆ ಮಂಗನ ಕಾಯಿಲೆಯೇ ದೊಡ್ಡ ವಿಲನ್
ಲಾಕ್ ಡೌನ್ ನಿಂದ ಮನುಷ್ಯರು ಒಂದು ದಾರಿಯಲ್ಲಿ ಕಷ್ಟ ನಷ್ಟ ಅನುಭವಿಸಿ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿದ್ರೆ ಮೂಖ ಪ್ರಾಣಿಗಳು ಇನ್ನೊಂದು ದಾರಿಯಲ್ಲಿ ತಮ್ಮ ಹೊಟ್ಟೆ ಪಾಡಿಗಾಗಿ ಚಟಪಟಿಸುತ್ತಿವೆ.
(ವರದಿ : ದರ್ಶನ್ ನಾಯ್ಕ)
First published:
April 29, 2020, 10:59 PM IST