HOME » NEWS » Coronavirus-latest-news » CORONA CURED ACTRESS POOJA HEGDE TEACHES RIGHT WAY TO USE PULSE OXIMETER IN THIS VIRAL VIDEO ON INSTAGRAM STG SKTV

Viral Video: ಪಲ್ಸ್ ಆಕ್ಸಿಮೀಟರ್ ಬಳಸೋದು ಹೇಗೆ? ಬಹುಭಾಷಾ ನಟಿ ಪೂಜಾ ಹೆಗ್ಡೆ ವಿವರಿಸಿದ್ದಾರೆ ನೋಡಿ !

ತಮ್ಮ ಅನುಭವವನ್ನು ಹಂಚಿಕೊಂಡಿರುವ ನಟಿ ಪೂಜಾ ಹೆಗ್ಡೆ, ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಲು ಪಲ್ಸ್ ಆಕ್ಸಿಮೀಟರ್ ಅನ್ನು ಹೇಗೆ ಬಳಸಬೇಕು ಎಂದು ಈಗ ವಿವರಿಸಿದ್ದಾರೆ. ಪೂಜಾ ಅವರು ಪಲ್ಸ್ ಆಕ್ಸಿಮೀಟರ್ ಎಂದರೇನು ಅಥವಾ ಕೋವಿಡ್ ಪಾಸಿಟಿವ್‌ ಎಂದು ತಿಳಿದಾಗ ಅದನ್ನು ಹೇಗೆ ಬಳಸುವುದು ಎಂದು ತಿಳಿದಿರಲಿಲ್ಲ ಎಂದೂ ಹೇಳಿಕೊಂಡಿದ್ದಾರೆ.

news18-kannada
Updated:May 15, 2021, 1:15 PM IST
Viral Video: ಪಲ್ಸ್ ಆಕ್ಸಿಮೀಟರ್ ಬಳಸೋದು ಹೇಗೆ? ಬಹುಭಾಷಾ ನಟಿ ಪೂಜಾ ಹೆಗ್ಡೆ ವಿವರಿಸಿದ್ದಾರೆ ನೋಡಿ !
ಪೂಜಾ ಹೆಗ್ಡೆ
  • Share this:
Coronavirus: ಕೊರೋನಾವು ಚಿತ್ರರಂಗದ ನಟ-ನಟಿಯರನ್ನೂ ತೆಕ್ಕೆಗೆ ಬಾಚಿಕೊಂಡಿದೆ. ಕೆಲವರು ಮಹಾಮಾರಿಗೆ ಪ್ರಾಣವನ್ನು ತ್ಯಜಿಸಿದ್ದರೆ, ಕೆಲವರು ಕೊರೋನಾ ವಿರುದ್ಧ ಹೋರಾಡಿ ಹೊರಬಂದಿದ್ದಾರೆ. ತೆಲುಗು ನಾಯಕಿ ಪೂಜಾ ಹೆಗ್ಡೆಯೂ ಸಹ ಕೊರೋನಾಗೆ ತುತ್ತಾಗಿದ್ದರು. ಇತ್ತೀಚೆಗಷ್ಟೇ, ನಟಿ ಕೊರೋನ ವೈರಸ್‌ನಿಂದ ಚೇತರಿಸಿಕೊಂಡಿದ್ದರು. ತಮ್ಮ ಅನುಭವವನ್ನು ಹಂಚಿಕೊಂಡಿರುವ ನಟಿ, ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಲು ಪಲ್ಸ್ ಆಕ್ಸಿಮೀಟರ್ ಅನ್ನು ಹೇಗೆ ಬಳಸಬೇಕು ಎಂದು ಈಗ ವಿವರಿಸಿದ್ದಾರೆ. ಪೂಜಾ ಅವರು ಪಲ್ಸ್ ಆಕ್ಸಿಮೀಟರ್ ಎಂದರೇನು ಅಥವಾ ಕೋವಿಡ್ ಪಾಸಿಟಿವ್‌ ಎಂದು ತಿಳಿದಾಗ ಅದನ್ನು ಹೇಗೆ ಬಳಸುವುದು ಎಂದು ತಿಳಿದಿರಲಿಲ್ಲ ಎಂದೂ ಹೇಳಿಕೊಂಡಿದ್ದಾರೆ.

ಕೊರೊನಾದಿಂದ ಗುಣಮುಖರಾಗಿ ಹೊರಬಂದಿರುವ ನಟಿ ಪೂಜಾ ಹೆಗ್ಡೆ, ವಿಡಿಯೋವೊಂದನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಪಲ್ಸ್ ಆಕ್ಸಿಮೀಟರ್‌ ಅನ್ನು ಸರಿಯಾದ ವಿಧಾನದಲ್ಲಿ ಬಳಸುವುದು ಹೇಗೆ ಎಂಬುದನ್ನು ನಟಿ ಪೂಜಾ ಹೆಗ್ಡೆ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ ನಲ್ಲಿ ವಿಡಿಯೋ ಮೂಲಕ ತೋರಿಸಿಕೊಟ್ಟಿದ್ದಾರೆ.

ಮೊದಲಿಗೆ ನಿಮ್ಮ ಉಗುರುಗಳಿಂದ ಉಗುರು ಬಣ್ಣವನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ನಂತರ ಆಕ್ಸಿಮೀಟರ್ ಬಳಸುವ ಮೊದಲು ಐದು ನಿಮಿಷಗಳ ಕಾಲ ವಿಶ್ರಾಂತಿ ಪಡೆಯಬೇಕು. ತೋರು ಅಥವಾ ಮಧ್ಯದ ಬೆರಳನ್ನು ಬಳಸಬೇಕು ನಂತರ ಎದೆಗೆ ಜೋಡಿಸಬೇಕು ಮತ್ತು ಆಮ್ಲಜನಕದ ಮಟ್ಟವನ್ನು ಸುಮಾರು ಒಂದು ನಿಮಿಷ ಪರೀಕ್ಷಿಸಬೇಕು ಎಂದು ಪೂಜಾ ಹೇಳುತ್ತಾರೆ. ಆಮ್ಲಜನಕ ಪರೀಕ್ಷೆಯ ಪ್ರತಿಯೊಂದು ಹಂತವನ್ನು ಪೂಜಾ ವೀಡಿಯೊದಲ್ಲಿ ತೋರಿಸಲಾಗಿದೆ.









View this post on Instagram






A post shared by Pooja Hegde (@hegdepooja)






ಕಳೆದ ತಿಂಗಳು ಪೂಜಾ ಕೊರೋನಾ ಇರುವುದರ ಬಗ್ಗೆ ದೃಢಪಡಿಸಿದರು. ಮೇ 5 ರಂದು ಪೂಜಾ ಅವರು ಕೋವಿಡ್‌ ನೆಗೆಟಿವ್‌ ಆಗಿದ್ದರು. ಕೊರೋನಾಗೆ ಒಳಗಾಗಿದ್ದಾಗ ಪೂಜಾ ಅವರು ತಮಗಾದ ಅನುಭವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿhttps://kannada.news18.com/news/state/bengaluru-urban-police-and-bbmp-successful-in-reducing-crowd-in-kr-market-in-bengaluru-which-was-a-hub-of-infection-spread-sktv-564589.html

"ನನಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನ O2 ಮಟ್ಟ ಪರೀಕ್ಷಿಸುವಂತೆ ವೈದ್ಯರು ಹೇಳಿದ್ದರು. ಪಲ್ಸ್ ಆಕ್ಸಿಮೀಟರ್‌ ಅನ್ನು ಹೇಗೆ ಬಳಸಬೇಕೆಂದು ನನಗೆ ತಿಳಿದಿರಲಿಲ್ಲ. ವೈದ್ಯರು ತನಗೆ ಹೇಳಿಕೊಟ್ಟಂತೆ ನಿಮಗೆ ತೋರಿಸುತ್ತಿದ್ದೇನೆ'' ಎಂದು ಇನ್ಸ್ಟಾಗ್ರಾಮ್‌ನಲ್ಲಿ ನಟಿ ಪೂಜಾ ಹೆಗ್ಡೆ ವಿವರಿಸಿದ್ದಾರೆ.

ತಮ್ಮ ಹಿಂದಿನ ಪೋಸ್ಟ್ ನಲ್ಲಿ, ನಟಿ ಅವರು ಕಳೆದ ತಿಂಗಳು ಸೋಂಕಿಗೆ ಒಳಗಾಗಿ ಅದರಿಂದ ಚೇತರಿಸಿಕೊಂಡ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ತನ್ನ ಸುಂದರವಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮತ್ತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದು, “ನಾನು ಚೆನ್ನಾಗಿ ಗುಣಮುಖನಾಗಿದ್ದೇನೆ. ಈ ದರಿದ್ರ ಕರೋನಾದ ವಿರುದ್ಧ ಹೋರಾಡಿ ಒದ್ದೋಡಿಸಿದ್ದೇನೆ. ಅಂತಿಮವಾಗಿ ಕೊರೋನಾ ವರದಿ ನೆಗೆಟಿವ್ ಬಂದಿದೆ” ಎಂದು ಕೊರೋನಾದಿಂದ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ ತನ್ನ ಅಭಿಮಾನಿಗಳಿಗೆ ಪೂಜಾ ಅವರು ಧನ್ಯವಾದ ತಿಳಿಸಿದ್ದಾಳೆ.
Youtube Video

ತನ್ನ ಮುಂಬರುವ ಸಿನಿಮಾದ ಬಗ್ಗೆ ಮಾತನಾಡುತ್ತಾ, ನಟಿ ಪ್ರಭಾಸ್ ಅವರೊಂದಿಗೆ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ರಾಧೆ ಶ್ಯಾಮ್‌ನಲ್ಲಿ ಪ್ರೇರಣಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Published by: Soumya KN
First published: May 15, 2021, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories