ವಿಧಾನಸೌಧದಲ್ಲಿ ಹೆಚ್ಚಾದ ಕೊರೋನಾ ಪ್ರಕರಣಗಳು; ಇಡೀ ಶಕ್ತಿಕೇಂದ್ರವನ್ನು ಸ್ಯಾನಿಟೈಸ್ ಮಾಡಿದ ಸಿಬ್ಬಂದಿ

ಈ ಎಲ್ಲಾ ಬೆಳವಣಿಗೆಯಿಂದ ವಿಧಾನಸೌಧ ಹಾಗೂ ವಿಕಾಸಸೌಧದ ಎಲ್ಲ ಸಿಬ್ಬಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿತ್ತು. ಇದೀಗ ಮತ್ತೆ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಇಡೀ ವಿಧಾನಸೌಧಕ್ಕೆ ಸ್ಯಾನಿಟೈಸ್ ಮಾಡುವ ತೀರ್ಮಾನವನ್ನು‌ ಸಚಿವಾಲಯ ಕೈಗೊಂಡಿದೆ.‌

news18-kannada
Updated:July 6, 2020, 12:31 PM IST
ವಿಧಾನಸೌಧದಲ್ಲಿ ಹೆಚ್ಚಾದ ಕೊರೋನಾ ಪ್ರಕರಣಗಳು; ಇಡೀ ಶಕ್ತಿಕೇಂದ್ರವನ್ನು ಸ್ಯಾನಿಟೈಸ್ ಮಾಡಿದ ಸಿಬ್ಬಂದಿ
ವಿಧಾನಸೌಧ ಸ್ಯಾನಿಟೈಸ್ ಮಾಡುತ್ತಿರುವ ಸಿಬ್ಬಂದಿ
  • Share this:
ಬೆಂಗಳೂರು(ಜು.06): ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕೊರೋನಾ ಹೆಮ್ಮಾರಿ ಶಕ್ತಿಕೇಂದ್ರ ವಿಧಾನಸೌಧವನ್ನೂ ಬಿಟ್ಟಿಲ್ಲ. ವಿಧಾನಸೌಧದ ಸಚಿವಾಲಯ ಹಾಗೂ ಇತರೆ ಇಲಾಖೆಯ ಐದಾರು ಸಿಬ್ಬಂದಿಯಲ್ಲಿ ಕೊರೋನಾ‌ ಪಾಸಿಟಿವ್ ಕಾಣಿಸಿಕೊಂಡಿದೆ.

ನಿನ್ನೆ ಸಚಿವಾಲಯದ ಪೊಲೀಸ್‌ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ನೌಕರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವಿಧಾನಸೌಧ ಅಕ್ಕಪಕ್ಕದಲ್ಲಿರುವ  ವಿಕಾಸಸೌಧ, ಶಾಸಕರ ಭವನ, ಸಿಎಂ ಗೃಹ ಕಚೇರಿ ಕೃಷ್ಣದಲ್ಲೂ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು.

ಈ ಎಲ್ಲಾ ಬೆಳವಣಿಗೆಯಿಂದ ವಿಧಾನಸೌಧ ಹಾಗೂ ವಿಕಾಸಸೌಧದ ಎಲ್ಲ ಸಿಬ್ಬಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿತ್ತು. ಇದೀಗ ಮತ್ತೆ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಇಡೀ ವಿಧಾನಸೌಧಕ್ಕೆ ಸ್ಯಾನಿಟೈಸ್ ಮಾಡುವ ತೀರ್ಮಾನವನ್ನು‌ ಸಚಿವಾಲಯ ಕೈಗೊಂಡಿದೆ.‌

Bangalore Coronavirus: ಕೊರೋನಾದಿಂದ ಬೆಂಗಳೂರಿನ ಎಎಸ್​ಐ ಸಾವು; ನಗರದಲ್ಲಿ ಒಟ್ಟು 6 ಪೊಲೀಸರನ್ನು ಬಲಿ ಪಡೆದ ಕೋವಿಡ್

ಮೊದಲ ಹಂತವಾಗಿ ವಿಧಾನಸೌಧದ ಮೊದಲ ಮಹಡಿಯಲ್ಲಿ ಸ್ಯಾನಿಟೈಸ್ ಮಾಡುವ ಪ್ರಕ್ರಿಯೆ‌ ಮುಂದುವರೆದಿದೆ. ಖಾಸಗಿ ಕಂಪನಿಯ ಸುಮಾರು 20 ಕ್ಕೂ ಹೆಚ್ಚು ಸಿಬ್ಬಂದಿ‌ ಸ್ಯಾನಿಟೈಸ್ ಮಾಡುವ ಕಾರ್ಯ ಮಾಡುತ್ತಿದ್ದಾರೆ.‌ ಮೊದಲನೆಯದಾಗಿ ವಿಧಾನಸೌಧದ ಮೊದಲ ಮಹಡಿಗೆ ಸ್ಯಾನಿಟೈಸ್ ಮಾಡಿ ಎಂದು ಹೇಳಿದ್ದಾರೆ‌.

ಹಾಗಾಗಿ‌ ಮೊದಲ ಮಹಡಿಯಲ್ಲಿ ಸ್ಯಾನಿಟೈಸ್ ಮಾಡುತ್ತಿದ್ದೇವೆ ಎಂದು ಸಂಸ್ಥೆಯ‌ ಸಿಬ್ಬಂದಿ ಹೇಳಿದ್ದಾರೆ. ಸ್ಯಾನಿಟೈಸ್ ಮಾಡುತ್ತಿರುವ ಹಿನ್ನಲೆಯಲ್ಲಿ ಸಚಿವಾಲಯದ ಸಿಬ್ಬಂದಿಗೆ‌ ಮಧ್ಯಾಹ್ನ‌ 12 ಗಂಟೆಯ ಬಳಿಕ ಕರ್ತವ್ಯಕ್ಕೆ ಹಾಜರಾಗುವಂತೆ ಕಾರ್ಯದರ್ಶಿ ಆದೇಶ ನೀಡಿದ್ದಾರೆ.
Published by: Latha CG
First published: July 6, 2020, 12:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading