Covid19: ಎಚ್ಚರ, ಎಚ್ಚರ, ಬೆಂಗಳೂರಲ್ಲಿ ಜೋರಾಗಿದೆ ಕೊರೊನಾ ಅಬ್ಬರ; ಮಾಸ್ಕ್ ಮರೆಯದಿರಿ ಎಂದ್ರು ಮಿನಿಸ್ಟರ್

ಮಾಸ್ಕ್ ಕಡ್ಡಾಯವಾಗಿ ಹಾಕೋದು ಪ್ರಾರಂಭವಾಗಬೇಕು. ಮಾಸ್ಕ್ ಹಾಕೋದ್ರಿಂದ ಸೋಂಕು ತಡೆಯಲು ಸಹಕಾರಿ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಬಳಿಕ ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂ 13): ನಗರದಲ್ಲಿ ಕೋವಿಡ್ (Covid19) ಸೋಂಕು ಹೆಚ್ಚಾಗುತ್ತಿದ್ದು ಕಳೆದ ಹತ್ತು ದಿನದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಈ‌ ಹಿಂದೆ ಶೇ.1.1ರಷ್ಟಿದ್ದ ಪಾಸಿಟಿವಿಟಿ ದರ ಶೇ. 2.61ಕ್ಕೆ ತಲುಪಿದೆ ಎಂದು ಪಾಲಿಕೆಯ ದಾಖಲೆಗಳು ಹೇಳುತ್ತವೆ. ಬಿಬಿಎಂಪಿ (BBMP) ಕೋವಿಡ್ ವರದಿಯ ಪ್ರಕಾರ, ಕಳೆದ ಏಳು ದಿನಗಳಲ್ಲಿ‌ ಒಟ್ಟು 2,845 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನದಲ್ಲಿ 429 ಜನರಿಗೆ ಸೋಂಕು ತಗುಲಿದೆ. ಪ್ರತಿನಿತ್ಯ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ 4ನೇ ಅಲೆ ಜೂನ್ ಅಥವಾ ಜುಲೈನಲ್ಲಿ ಆಗಮಿಸುವ ಸಾಧ್ಯತೆ ಇದೆ. ಈ ಕುರಿತು ಮೊದಲೇ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮಾಹಿತಿ ನೀಡಿದೆ. ಈ ಹಿನ್ನೆಲೆ ಕೋವಿಡ್ 4ನೇ ಅಲೆಯನ್ನು (4th Wave) ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ( Minister Sudhakar)​ ಸಭೆ ನಡೆಸಿದ್ರು.

ಸಭೆ ಬಳಿಕ ಮಾತಾಡಿದ ಸಚಿವ ಡಾ ಸುಧಾಕರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ ಸುದರ್ಶನ್ ಸೇರಿದಂತೆ ಎಲ್ಲರ ಜೊತೆ ಸಭೆ ನಡೆಸಲಾಯ್ತು. ಬೇರೆ ದೇಶಗಳಲ್ಲಿ ಅದರಲ್ಲೂ ಅಮೆರಿಕಾ, ಯುಕೆ, ಪೋರ್ಚುಗಲ್ ನಲ್ಲಿ ಸೋಂಕು ಹೆಚ್ಚಾಗಿ ಕಡಿಮೆ ಆಗಿದೆ. ಸಾವು, ನೋವು ಸಂಭವಿಸಿಲ್ಲ, ಆಸ್ಪತ್ರೆಗೆ ದಾಖಲಾಗಿಲ್ಲ. ಇದನ್ನೆಲ್ಲಾ ಆಧರಿಸಿ ಟಾಸ್ಕ್ ಫೋರ್ಸ್ ಮಾಹಿತಿ ನೀಡಿದೆ. ರಾಜ್ಯದಲ್ಲೂ ಸೋಂಕು ಏರಿಕೆ ಇಳಿಕೆ ಕಾಣ್ತಿರೋದು ಗಮನಕ್ಕೆ ಬಂದಿದೆ. ನಮ್ಮ ದೇಶದಲ್ಲಿ ದೆಹಲಿ, ಮಹಾರಾಷ್ಟ್ರದಲ್ಲಿ ಏರಿಕೆ ಕಂಡಿದೆ. ಬೆಂಗಳೂರಲ್ಲೂ ಸ್ವಲ್ಪ ಹೆಚ್ಚಾಗಿದ್ದು, ಜಿನೋಮಿಕ್ ಸೀಕ್ವೆನ್ಸಿಂಗ್​ ವ್ಯವಸ್ಥೆ ಮಾಡಲಾಗಿದೆ ಎಂದ್ರು

ಮನೆ ಮನೆಗೆ ತೆರಳಿ ಲಸಿಕಾ ಅಭಿಯಾನ

ಪ್ರತಿದಿನ 10 ಶೇಕಡಾ ಜಿನೋಮ್ ಸರ್ವೆಗೆ ಸೂಚಿಸಲಾಗಿದೆ. ಕೋವಿಡ್ ಹೆಚ್ಚಳವಾದ್ರೂ ತೀವ್ರತೆ ಇಲ್ಲ. ಆಸ್ಪತ್ರೆಗೆ ದಾಖಲಾಗ್ತಿಲ್ಲ. ಸಾವು ನೋವುಗಳಿಲ್ಲ. ಹೀಗಿದ್ರೂ ಮೈ ಮರೆಯುವಂತಿಲ್. 60 ವರ್ಷದ ಮೇಲ್ಪಟ್ಟ ಇತರರು ರೋಗಗಳಿಂದ ಬಳಲ್ತಿರೋರು ಕಡ್ಡಾಯವಾಗಿ ಬೂಸ್ಟರ್ ಡೋಸ್ ಪಡೀಬೇಕು.12 ವರ್ಷ ಮೇಲ್ಪಟ್ಟ ಮಕ್ಕಳು ಲಸಿಕೆ ಪಡೆಯಬೇಕು, ಮನೆ ಮನೆಗೆ ತೆರಳಿ ಲಸಿಕಾ ಅಭಿಯಾನ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಸುಧಾಕರ್​ ಹೇಳಿದ್ದಾರೆ.

ಇದನ್ನೂ ಓದಿ: Covid19: ದೇಶದಲ್ಲಿ ಕರೋನಾ ಮಹಾಸ್ಫೋಟ; 24 ಗಂಟೆಗಳಲ್ಲಿ 8,329 ಜನಕ್ಕೆ ತಗುಲಿದ ಸೋಂಕು

ಕಡ್ಡಾಯವಾಗಿ ಮಾಸ್ಕ್​ ಧರಿಸಿ

ಮಾಸ್ಕ್ ಕಡ್ಡಾಯವಾಗಿ ಹಾಕೋದು ಪ್ರಾರಂಭವಾಗಬೇಕು. ಮಾಸ್ಕ್ ಹಾಕೋದ್ರಿಂದ ಸೋಂಕು ತಡೆಯಲು ಸಹಕಾರಿ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಬಳಿಕ ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ. ಐಐಟಿ ಕಾನ್ಪುರ್ ವರದಿ ಪ್ರಕಾರ, ಜೂನ್ ನಿಂದ ಆರಂಭವಾಗಿ ಜುಲೈ ಆಗಸ್ಟ್ ವರೆಗೂ ಇರಬಹುದೆಂದಿದ್ದಾರೆ. ಇದನ್ನ ನಾವು ಅಲೆಗಳು ಎಂದು ನಾವು ಹೇಳೋದಿಲ್ಲ, ಇದು ಸ್ವಾಭಾವಿಕವಾಗಿ ಬಂದು ಹೋಗೋ ಸೋಂಕಾಗಿದೆ. ಇದರ ಬಗ್ಗೆ ಗಾಬರಿಯಾಗೋ ಅಗತ್ಯ ಇಲ್ಲ.

ತುಂಬಾ ಕಟ್ಟು ನಿಟ್ಟಿನ ಕ್ರಮ ಅಗತ್ಯ ಇಲ್ಲ

ತುಂಬಾ ಕಟ್ಟು ನಿಟ್ಟಿನ ಕ್ರಮ ಅಗತ್ಯ ಇಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ. ಹೀಗಾಗಿ ಯಾವುದೇ ಕಠಿಣ ಕ್ರಮ ಇರೋದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಲಸಿಕೆ ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಂ ಆದೇಶಿಸಿದೆ. ಇದರಿಂದ ಲಸಿಕೆ ವಿತರಣೆ ಕಷ್ಟ ಆಗ್ತಿದೆ. ನಾವು ಜನರಿಗೆ ಮನವರಿಕೆ ಮಾಡ್ತಿವಿ. ಜನರು ಮೂರನೇ ಡೋಸ್ ಹಾಕಿಸಿಕೊಳ್ಬೇಕು. ನಾವು ಮನವರಿಕೆ ಮಾಡಿಕೊಳ್ಳೋ ಪ್ರಯತ್ನ ಮಾಡ್ತಿವಿ ಒತ್ತಾಯ ಮಾಡೋಲ್ಲ ಎಂದು ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ: New Covid Symptoms: ಈ ಎರಡು ರೋಗಲಕ್ಷಣಗಳು ಇದ್ರೆ ಬಹಳ ಸಮಯದವರಗೆ ಕೋವಿಡ್ ನಿಮ್ಮನ್ನು ಕಾಡಬಹುದು ಅಂತಾರೆ ವೈದ್ಯರು

ಮಾಸ್ಕ್​ಗೆ ಡಂಡ ಪ್ರಯೋಗ ಸದ್ಯಕ್ಕಿಲ್ಲ

ಮಾಸ್ಕ್ ಅರಿವು ಮೂಡಿಸೋ ಮೂಲಕವೇ ನಾವು ಯಶಸ್ವಿಯಾಗ್ತಿವಿ, ಮಾಸ್ಕ್​ಗೆ ದಂಡ ಹಾಕೋ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ದಂಡ ಹಾಕೋದು ಬೇಡ ಎಂದ್ರು.
Published by:Pavana HS
First published: