HOME » NEWS » Coronavirus-latest-news » CORONA BIG BLAST IN THE STATE POSITIVE CASES ARE INCREASED MAK

Todays Corona Cases: ರಾಜ್ಯದಲ್ಲಿಂದು ಕೊರೋನಾ ಬಿಗ್ ಬ್ಲಾಸ್ಟ್; ದಾಖಲೆಯ ಪ್ರಮಾಣದಲ್ಲಿ ಪಾಸಿಟಿವ್ ಕೇಸ್​ಗಳ ಏರಿಕೆ!

ಬೆಂಗಳೂರಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾಗೆ ಕಡಿವಾಣ ಹಾಕಲು ನಾಳೆಯಿಂದ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿರುವ ಸರ್ಕಾರ ಇಂದು ಪೂರ್ವಭಾವಿ ಸಭೆ ನಡೆಸಿತು.

news18-kannada
Updated:April 18, 2021, 7:27 PM IST
Todays Corona Cases: ರಾಜ್ಯದಲ್ಲಿಂದು ಕೊರೋನಾ ಬಿಗ್ ಬ್ಲಾಸ್ಟ್; ದಾಖಲೆಯ ಪ್ರಮಾಣದಲ್ಲಿ ಪಾಸಿಟಿವ್ ಕೇಸ್​ಗಳ ಏರಿಕೆ!
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು: ಭಾನುವಾರವಾದ ಇಂದು ರಾಜ್ಯದಲ್ಲಿ ಕರೋನಾ ರೌದ್ರಾವತಾರ ತಾಳಿದೆ. ನಿತ್ಯ ತನ್ನದೇ ದಾಖಲೆಗಳನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸುತ್ತಿದೆ. ಒಂದೇ ದಿನ ಪಾಸಿಟಿವ್ ಕೇಸ್ಗಳ ಸಂಖ್ಯೆ 20 ಸಾವಿರದ ಸಮೀಪದಲ್ಲಿದೆ. ರಾಜ್ಯದಲ್ಲಿಂದು ಬರೋಬ್ಬರಿ 19,067 ಮಂದಿಯ ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದಿದ್ದು, 81 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 12,793 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಬೆಂಗಳೂರಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು ಇಂದು 60 ಮಂದಿ ಸಾವಿನ ಮನೆ ಸೇರಿದ್ದಾರೆ. ಚಿತಾಗಾರಗಳ ಮುಂದೆ ಹೆಣಗಳ ಸಾಲು ತಗ್ಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ ಪಾಸಿಟಿವ್ ಕೇಸ್ಗಳ ಸಂಖ್ಯೆ 20 ಸಾವಿರದ ಸನಿಹದಲ್ಲಿದ್ದರೆ ಗುಣಮುಖರಾದವರ ಸಂಖ್ಯೆ ಕೇವಲ 4,603 ಅಷ್ಟೇ. 620 ಮಂದಿ ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ಕೇಸ್ಗಳ ಸಂಖ್ಯೆ 11,61,065ಕ್ಕೆ ಏರಿಕೆಯಾಗಿದ್ದರೆ, 1,33,543 ಸಕ್ರಿಯ ಪ್ರಕರಣಗಳಿವೆ. ಈವರೆಗೆ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 13,351ಕ್ಕೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಈವರೆಗೆ ಸೋಂಕಿನಿಂದ 5,123 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರೇ ಹೆಮ್ಮಾರಿಯ ಟಾರ್ಗೆಟ್..!

ರಾಜ್ಯದಲ್ಲಿಂದು ದಾಖಲೆಯ ಪ್ರಮಾಣದಲ್ಲಿ ಕೊರೋನಾ ಕೇಸ್ಗಳು ಪತ್ತೆಯಾಗಿದ್ದರೂ ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಹೆಚ್ಚು ಕೇಸ್ಗಳು ದಾಖಲಾಗಿಲ್ಲ. ಬೆಂಗಳೂರಲ್ಲಿ ಇಂದು 12,793 ಪಾಸಿಟಿವ್ ಕೇಸ್ಗಳು ದಾಖಲಾಗಿವೆ. ಆದರೆ ಉಳಿದ ಜಿಲ್ಲೆಗಳಲ್ಲಿ ಪಾಸಿಟಿವ್ ಕೇಸ್ಗಳ ಸಂಖ್ಯೆ ಸಾವಿರ ದಾಟಿಲ್ಲ. ಬೆಂಗಳೂರು ನಗರ ನಂತರದಲ್ಲಿ ಮೈಸೂರು ಜಿಲ್ಲೆಯಲ್ಲಿ 777 ಕೇಸ್ಗಳು ದಾಖಲಾಗಿವೆ. ಕಲಬುರಗಿಯಲ್ಲಿ 671, ತುಮಕೂರಲ್ಲಿ 494, ಬೀದರ್ನಲ್ಲಿ 469, ಹಾಸನದಲ್ಲಿ 348, ಮಂಡ್ಯದಲ್ಲಿ 338, ಧಾರವಾಡದಲ್ಲಿ 265, ಬಳ್ಳಾರಿಯಲ್ಲಿ 238 ಪಾಸಿಟಿವ್ ಕೇಸ್ಗಳು ದಾಖಲಾಗಿವೆ.

ಬೆಂಗಳೂರಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾಗೆ ಕಡಿವಾಣ ಹಾಕಲು ನಾಳೆಯಿಂದ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿರುವ ಸರ್ಕಾರ ಇಂದು ಪೂರ್ವಭಾವಿ ಸಭೆ ನಡೆಸಿತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಕುಮಾರಕೃಪ ಅತಿಥಿಗೃಹದಲ್ಲಿ ಪೂರ್ವಭಾವಿ ಸಭೆ ಮಾಡಿ ಚರ್ಚೆ ನಡೆಸಿದರು.

ಇದನ್ನೂ ಓದಿ: Crime News: ತಾಯಿಯ ಅನೈತಿಕ ಸಂಬಂಧ ಪ್ರಶ್ನಿಸಿದ ಮಗಳಿಗೆ ಟಾರ್ಚರ್; ಠಾಣೆ ಮೆಟ್ಟಿಲೇರಿದ 13 ವರ್ಷದ ಬಾಲಕಿ!

ಬೆಂಗಳೂರಲ್ಲಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಇಲ್ಲ ಎಂದು ಸಚಿವ ಆರ್. ಅಶೋಕ್ ಸ್ಪಷ್ಟನೆ ನೀಡಿದರು. ನಾಳೆ ಬೆಂಗಳೂರಿಗೆ ವಿಶೇಷ ಮಾರ್ಗಸೂಚಿ ಹೊರಡಿಸುತ್ತೇವೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಮಾರ್ಗಸೂಚಿ ಹೊರಡಿಸುತ್ತೇವೆ. ನೈಟ್ ಕರ್ಫ್ಯೂ ಮುಂದುವರಿಸುವ ಬಗ್ಗೆ ಸಿಎಂ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.

ಇನ್ನು ದೇಶದಲ್ಲೂ ಇಂದು ದಾಖಲೆಯ ಪ್ರಮಾಣದಲ್ಲಿ ಕೊರೋನಾ ಕೇಸ್ಗಳು ದಾಖಲಾಗಿವೆ. 24 ಗಂಟೆಗಳ ಅವಧಿಯಲ್ಲಿ 2,61,500 ಹೊಸ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,47,88,109ಕ್ಕೆ ಏರಿಕೆ ಆಗಿದೆ.
Published by: MAshok Kumar
First published: April 18, 2021, 7:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories