• Home
  • »
  • News
  • »
  • coronavirus-latest-news
  • »
  • Corona 5th Wave: ಕೊರೋನಾ 5ನೇ ಅಲೆ ಮಿಂಚಿನ ವೇಗದಲ್ಲಿ ಹರಡಲು ಸಜ್ಜಾಗಿದೆಯಂತೆ..! ಜೋಪಾನ

Corona 5th Wave: ಕೊರೋನಾ 5ನೇ ಅಲೆ ಮಿಂಚಿನ ವೇಗದಲ್ಲಿ ಹರಡಲು ಸಜ್ಜಾಗಿದೆಯಂತೆ..! ಜೋಪಾನ

ರಾಜಾಜಿನಗರ ಇಎಸ್‌ಐ ಆಸ್ಪತ್ರೆ ಶವಾಗಾರದಲ್ಲಿ ಎರಡು ಶವಗಳನ್ನಿಟ್ಟು ಸಿಬ್ಬಂದಿ ಅವುಗಳನ್ನು ಹೊರಕ್ಕೆ ತೆಗೆಯಲಾಗಿದೆ. 15 ತಿಂಗಳ ಬಳಿಕ ಎರಡು ಶವಗಳು ಹೊರಕ್ಕೆ ತೆಗೆಯಾಗಲಿದ್ದು, ಇಬ್ಬರು 2020 ಜುಲೈನಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದರು.

ರಾಜಾಜಿನಗರ ಇಎಸ್‌ಐ ಆಸ್ಪತ್ರೆ ಶವಾಗಾರದಲ್ಲಿ ಎರಡು ಶವಗಳನ್ನಿಟ್ಟು ಸಿಬ್ಬಂದಿ ಅವುಗಳನ್ನು ಹೊರಕ್ಕೆ ತೆಗೆಯಲಾಗಿದೆ. 15 ತಿಂಗಳ ಬಳಿಕ ಎರಡು ಶವಗಳು ಹೊರಕ್ಕೆ ತೆಗೆಯಾಗಲಿದ್ದು, ಇಬ್ಬರು 2020 ಜುಲೈನಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದರು.

"ಲಸಿಕೆ ಪಡೆದ ಜನರಿಗಿಂತ ಲಸಿಕೆ ಪಡೆಯದ ಜನರ ಮೇಲೆ ನಿರ್ಬಂಧಗಳ ಭಾರ ತರಲು" ಸರ್ಕಾರವು ತನ್ನ ಆಯ್ಕೆಯೊಂದಿಗೆ ನಿಲ್ಲುವುದನ್ನು ಮುಂದುವರೆಸಿದೆ ಎಂದು ಫ್ರಾನ್ಸ್‌ ಸರ್ಕಾರದ ವಕ್ತಾರ ಗೇಬ್ರಿಯಲ್ ಅಟ್ಟಲ್ ಹೇಳಿದರು.

  • Share this:

ಭಾರತದಲ್ಲಿ ಸದ್ಯ ಕೊರೊನಾ ಸೋಂಕು(Corona Virus) ಕಡಿಮೆಯಾಗಿದ್ದು, ಹೊಸ ಕೇಸ್‌ಗಳು ತಹಬದಿಗೆ ಬರುತ್ತಿವೆ. ಆದರೂ, ಕೋವಿಡ್ - 19 ಮೂರನೇ ಅಲೆ(COVID-19 3rd Wave) ಯಾವಾಗ ಆರಂಭವಾಗುತ್ತದೋ, ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೋ, ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆಯೇ ಎಂದು ಚರ್ಚೆಯಾಗುತ್ತಲೇ ಇದೆ. ಆದರೆ, ಫ್ರಾನ್ಸ್‌(France)ನಲ್ಲಿ ಈಗಾಗಲೇ ಕೊರೊನಾ ಐದನೇ ಅಲೆ(Corona 5th Wave) ಆರಂಭವಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಹೌದು, ಫ್ರಾನ್ಸ್‌(France)ನಲ್ಲಿ ಐದನೇ ತರಂಗದ ಕೊರೊನಾ ವೈರಸ್ (Corona virus) ಸೋಂಕುಗಳು ಅಪಾಯಕಾರಿ ದರದಲ್ಲಿ ಏರುತ್ತಿವೆ ಎಂದು ಸರ್ಕಾರ ಭಾನುವಾರ ವರದಿ ಮಾಡಿದೆ. ಕಳೆದ ವಾರದಿಂದ ಹೊಸ ದೈನಂದಿನ ಕೋವಿಡ್ ಪ್ರಕರಣಗಳ(COVID cases) ಸಂಖ್ಯೆ ದ್ವಿಗುಣಗೊಳ್ಳುತ್ತಿವೆ ಎಂದೂ ತಿಳಿದುಬಂದಿದೆ.


ಫ್ರಾನ್ಸ್​​ನಲ್ಲಿ ದೈನಂದಿನ ಪ್ರಕರಣಗಳೆಷ್ಟು?


7 ದಿನಗಳ ಸರಾಸರಿ ಹೊಸ ಪ್ರಕರಣಗಳು ಶನಿವಾರ 17,153ಕ್ಕೆ ತಲುಪಿದ್ದು, ಇದು ವಾರದ ಹಿಂದಿನ 9,458ಕ್ಕಿಂತ ಹೆಚ್ಚಾಗಿದ್ದು, 81 ಪ್ರತಿಶತದಷ್ಟು ಏರಿಕೆ ಕಂಡಿದೆ ಎಂದು ಫ್ರಾನ್ಸ್‌ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


"ಐದನೇ ಅಲೆಯು ಮಿಂಚಿನ ವೇಗದಲ್ಲಿ ಪ್ರಾರಂಭವಾಗುತ್ತಿದೆ" ಎಂದೂ ಅಲ್ಲಿನ ಸರ್ಕಾರದ ವಕ್ತಾರ ಗೇಬ್ರಿಯಲ್ ಅಟ್ಟಲ್ ಮಾಧ್ಯಮಗಳಿಗೆ ತಿಳಿಸಿದರು.


ಇದನ್ನೂ ಓದಿ: COVID-19 Variant: 2022ರಲ್ಲಿ ಮತ್ತೆ ಜಗತ್ತನ್ನು ಬಾಧಿಸಲಿದೆ COVID-19 ರೂಪಾಂತರ, ಹೇಗೆ ಅಂತೀರಾ? ಇಲ್ಲಿದೆ ವಿವರ


ದುಪ್ಪಟ್ಟಾದ ಕೋವಿಡ್ ಕೇಸ್


ಇತ್ತೀಚಿನ 7 ದಿನಗಳ ಹೆಚ್ಚಳವು ಹಿಂದಿನ 3 ವಾರಗಳಲ್ಲಿ ದಾಖಲಾದ ಪ್ರಕರಣಗಳ ಸರಾಸರಿ ಏರಿಕೆಗಿಂತ 3 ಪಟ್ಟು ಹೆಚ್ಚಾಗಿದೆ, ಇದು ಸೋಂಕಿನ ಘಾತೀಯ ವೇಗವರ್ಧನೆ ಸೂಚಿಸುತ್ತದೆ ಎಂದೂ ತಿಳಿಸಿದ್ದಾರೆ.


ಎಲ್ಲಾ ರೀತಿಯಲ್ಲೂ ಸಜ್ಜಾದ ಫ್ರಾನ್ಸ್​


ಆದರೂ, ಸದ್ಯಕ್ಕೆ ಸೋಂಕುಗಳ ಹೆಚ್ಚಳವು ಆಸ್ಪತ್ರೆಗಳಿಗೆ ಕೋವಿಡ್ ರೋಗಿಗಳ ಬೃಹತ್ ಒಳಹರಿವಿಗೆ ಕಾರಣವಾಗಿಲ್ಲ ಎನ್ನಲಾಗಿದೆ. ಅಲ್ಲದೆ, ತೀವ್ರ ನಿಗಾ ಘಟಕ ಅಥವಾ ಐಸಿಯುನಲ್ಲಿರುವ ರೋಗಿಗಳ ಸಂಖ್ಯೆಯೂ ಸೀಮತವಾಗಿದ್ದು, ಇದಕ್ಕೆ ಕಾರಣ ಫ್ರಾನ್ಸ್‌ನ ಹೆಚ್ಚಿನ ಪ್ರಮಾಣದ ವ್ಯಾಕ್ಸಿನೇಷನ್‌. ಲಸಿಕೆ ಹಾಕಿಸಿದ ಕಾರಣದಿಂದ ಕೋವಿಡ್‌ನ ಅತ್ಯಂತ ಅಪಾಯಕಾರಿ ರೂಪಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬರುತ್ತದೆ ಎಂದು ಫ್ರಾನ್ಸ್‌ ಅಧಿಕಾರಿಗಳು ಹೇಳಿಕೊಂಡಿದ್ದಾರೆ.


ಚಿಕಿತ್ಸೆ ಪಡೆಯುತ್ತಿರುವವರು ಎಷ್ಟು ಮಂದಿ?


ಆಸ್ಪತ್ರೆಗಳು ತಮ್ಮ ಆರೈಕೆಯಲ್ಲಿ ಒಟ್ಟು 7,974 ಕೋವಿಡ್ ರೋಗಿಗಳನ್ನು ಶನಿವಾರ ವರದಿ ಮಾಡಿದ್ದು, ಈ ಪೈಕಿ 1,333 ಜನರು ತೀವ್ರ ಚಿಕಿತ್ಸೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇದು ಒಂದು ತಿಂಗಳ ಹಿಂದೆ ಕ್ರಮವಾಗಿ 6,500 ಮತ್ತು 1,000ಕ್ಕೆ ಹೋಲಿಕೆ ಮಾಡಬಹುದು.


ಹೆಚ್ಚಿನ ವ್ಯಾಕ್ಸಿನೇಷನ್


ಈ ಹಿನ್ನೆಲೆ ಸೋಂಕುಗಳಲ್ಲಿ ಬಹಳ ಬಲವಾದ ಹೆಚ್ಚಳವಿದೆ, ಆದರೆ ಫ್ರಾನ್ಸ್‌ನಲ್ಲಿ ನಾವು ಬಹಳ ದೊಡ್ಡ ವ್ಯಾಕ್ಸಿನೇಷನ್ ಪ್ರಮಾಣ ಅಥವಾ ರಕ್ಷಣೆ ಹೊಂದಿದ್ದೇವೆ ಎಂದು ನಮಗೆ ತಿಳಿದಿದೆ ಎಂದು ಅವರು ಹೇಳಿದರು. ಅಲ್ಲದೆ, ಬೂಸ್ಟರ್‌ ಡೋಸ್‌ಗಳಿಗೆ ಸಂಬಂಧಿಸಿದಂತೆಯೂ ನಾವು ನಮ್ಮ ನೆರೆಹೊರೆಯವರಿಗಿಂತ ಮುಂದಿರುವಂತೆ ತೋರುತ್ತಿದೆ ಎಂದೂ ಹೇಳಿದರು.


ಬೇಸಿಗೆಯಲ್ಲಿ ಇತರ ದೇಶಗಳಿಗಿಂತ ಮೊದಲೇ ಫ್ರಾನ್ಸ್ ಆರೋಗ್ಯ ಪಾಸ್ ಪರಿಚಯಿಸಿದ್ದು ಸಹ ಕೋವಿಡ್ ನಿಯಂತ್ರಣದಲ್ಲಿಡಲು ಸಹಾಯ ಮಾಡಲೆಂದು ಅವರು ಹೇಳಿದರು.


ವ್ಯಕ್ತಿಯು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾನೆ, ಇತ್ತೀಚೆಗೆ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾನೆ ಅಥವಾ ವೈರಸ್‌ಗೆ ನಕಾರಾತ್ಮಕತೆಯನ್ನು ಪರೀಕ್ಷಿಸಿದ್ದಾನೆ ಎಂದು ಆರೋಗ್ಯ ಪಾಸ್ ಪ್ರಮಾಣೀಕರಿಸುತ್ತದೆ. ಇದು ಫ್ರೆಂಚ್ ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಅನೇಕ ಸಾಂಸ್ಕೃತಿಕ ಸ್ಥಳಗಳಲ್ಲಿ ಅಗತ್ಯವಾಗಿದೆ.


ಇದನ್ನೂ ಓದಿ: RT-PCR: ಕೋವಿಡ್, ಜೀಕಾ, ಡೆಂಗ್ಯೂ ಎಲ್ಲದಕ್ಕೂ ಒಂದೇ ಪರೀಕ್ಷೆ? ವೈರಸ್ ಪತ್ತೆ ಈಗ ಇನ್ನೂ ಸುಲಭ


ಲಸಿಕೆ ಪಡೆಯದ ಜನರಿಗೆ ನಿರ್ಬಂಧ


"ಲಸಿಕೆ ಪಡೆದ ಜನರಿಗಿಂತ ಲಸಿಕೆ ಪಡೆಯದ ಜನರ ಮೇಲೆ ನಿರ್ಬಂಧಗಳ ಭಾರ ತರಲು" ಸರ್ಕಾರವು ತನ್ನ ಆಯ್ಕೆಯೊಂದಿಗೆ ನಿಲ್ಲುವುದನ್ನು ಮುಂದುವರೆಸಿದೆ ಎಂದು ಫ್ರಾನ್ಸ್‌ ಸರ್ಕಾರದ ವಕ್ತಾರ ಗೇಬ್ರಿಯಲ್ ಅಟ್ಟಲ್ ಹೇಳಿದರು.

Published by:Latha CG
First published: